Raghu Karumanchi :ಕೋವಿಡ್​ನಿಂದ ಕೈತಪ್ಪಿತು ಸಿನಿಮಾ ಲೋಕ: ಬದುಕು ನಿರ್ವಹಣೆಗೆ ಮದ್ಯದಂಗಡಿ ತೆರೆದ ಹಾಸ್ಯ ಕಲಾವಿದ

ಬಣ್ಣದ ಲೋಕ ಅಂದ್ರೇನೆ ಹಾಗೆ. ಇಲ್ಲಿ ಕಲಾವಿದರ ಜೀವನ ಪ್ರತಿ ಬಾರಿಯೂ ಒಂದೇ ರೀತಿ ಇರೋದಿಲ್ಲ. ಒಮ್ಮೊಮ್ಮೆ ಯಶಸ್ಸಿನ ಉತ್ತುಂಗದಲ್ಲಿದ್ದರೆ ಮಗದೊಮ್ಮೆ ನಿಮ್ಮನ್ನು ಮಾತನಾಡಿಸವವರೂ ಯಾರೂ ಇರೋದಿಲ್ಲ. ಅದರಲ್ಲೂ ಕೋವಿಡ್​ ಸಾಂಕ್ರಾಮಿಕ ಬಂದ ಮೇಲಂತೂ ಕೆಲ ಕಲಾವಿದರ ಪಾಡು ಹೇಳತೀರದಾಗಿದೆ. ಇದೇ ಸಾಲಿಗೆ ಸೇರಿದ ತೆಲುಗಿನ ಖ್ಯಾತ ಹಾಸ್ಯ ನಟ ರಘು ಕರುಮಂಚಿ(Raghu Karumanchi) ಇದೀಗ ಜೀವನ ನಿರ್ವಹಣೆಗೆ ಹೊಸ ಮಾರ್ಗವನ್ನು ಕಟ್ಟಿಕೊಂಡಿದ್ದಾರೆ.

ಸರಿಸುಮಾರು 2 ದಶಕಗಳ ಕಾಲ ತೆಲುಗಿನಸಾಕಷ್ಟು ಸಿನಿಮಾಗಳಲ್ಲಿ ಹಾಸ್ಯನಟನಾಗಿ ಬಣ್ಣ ಹಚ್ಚಿದ್ದ ರಘು ಅವರ ಬಾಳಲ್ಲಿ ಕೋವಿಡ್​ ಲಾಕ್​ಡೌನ್ ಬರಸಿಡಿಲಿನಂತೆ ಬಂದೆರಗಿತ್ತು. ಕೋವಿಡ್​ ತಹಬಧಿಗೆ ಬಂದು ಲಾಕ್​ಡೌನ್​​ ತೆರವು ಮಾಡಲಾಯ್ತಾದರೂ ಕೈ ತಪ್ಪಿ ಹೋದ ಅವಕಾಶಗಳು ವಾಪಸ್​ ಕೈ ಸೇರಲೇ ಇಲ್ಲ.ರಿಲೀಸ್​ ಆಗಬೇಕಾದ ಅದೆಷ್ಟೋ ಸಿನಿಮಾಗಳು ತೆರೆ ಕಾಣದೇ ಮರೆಯಾದವು.

ಕೈಯಲ್ಲಿ ಒಂದೇ ಒಂದು ಪ್ರಾಜೆಕ್ಟ್​ ಇಲ್ಲದೆಯೇ ಜೀವನ ನಿರ್ವಹಣೆ ಹೇಗಪ್ಪ ಎಂದುಕೊಳ್ತಿರುವಾಗ ಹೈದರಾಬಾದ್​ನ ಗಡಿಯಲ್ಲಿರುವ ತಮ್ಮ ಜಮೀನಿನಲ್ಲಿ ತೋಟದ ಕೆಲಸ ಆರಂಭಿಸಿದ್ರು. ತೋಟದ ಕೆಲಸದಿಂದಾಗಿ ರಘು ಕೈಯಲ್ಲಿ ಸ್ವಲ್ಪ ಹಣ ಹರಿದಾಡುವಂತಾಯ್ತು. ಇದೇ ಹಣವನ್ನು ಕೂಡಿಟ್ಟ ರಘು ಇದೀಗ ಮದ್ಯದಂಗಡಿಯೊಂದನ್ನು ತೆರೆದಿದ್ದಾರೆ. ನಲ್ಗೊಂಡಾ ಜಿಲ್ಲೆಯ ಗಡಿ ಪ್ರದೇಶದ ಬೈಪಾಸ್​ನಲ್ಲಿ ಡಿಸೆಂಬರ್​ 1ರಂದು ಈ ಅಂಗಡಿ ಕಾರ್ಯಾರಂಭಗೊಂಡಿದೆ.

ಮದ್ಯದ ಉದ್ಯಮದಲ್ಲಿ ತಾವು ಯಶಸ್ಸು ಸಾಧಿಸಬಹುದು ಎಂಬ ನಿರೀಕ್ಷೆ ರಘು ಅವರದ್ದು. ಮದ್ಯದಂಗಡಿಗೆ ಬಂದ ಗ್ರಾಮಸ್ಥರಲ್ಲಿ ಅನೇಕರು ರಘು ಅವರನ್ನು ಗುರುತಿಸುತ್ತಿದ್ದಾರೆ. ಸಾಕಷ್ಟು ಮಂದಿ ಇವರ ಜೊತೆ ಸೆಲ್ಫಿಯನ್ನು ತೆಗೆದುಕೊಂಡು ಸೋಶಿಯಲ್​ ಮೀಡಿಯಾದಲ್ಲಿ ಹರಿಬಿಡ್ತಿದ್ದಾರೆ. ಆದರೆ ರಘು ಹೊಸ ಪ್ರಯತ್ನದ ಮೂಲಕ ಜೀವನ ಕಟ್ಟಿಕೊಳ್ಳ ಬೇಕೆಂಬ ಕನಸನ್ನು ಗಟ್ಟಿ ಮಾಡಿಕೊಳ್ಳುವುದರಲ್ಲೇ ಮಗ್ನರಾಗಿದ್ದಾರೆ.

ಇದನ್ನು ಓದಿ : blouse less saree : ಟ್ಯಾಟೂನೇ ಬ್ಲೌಸ್ : ಸೀರೆ ಸೆರಗು ಜಾರಿದ್ರೇ ಗತಿ ಏನು ಅಂದ್ರು ನೆಟ್ಟಿಗರು

Telugu Comedian Raghu Karumanchi Opens Liquor Shop. Here’s Why

Comments are closed.