Prajwal Devaraj : ಕಿರುತೆರೆಗೆ ಡೈನಾಮಿಕ್ ಎಂಟ್ರಿ…! ಡ್ಯಾನ್ಸ್ ಶೋ ಜಡ್ಜ್ ಆಗ್ತಿದ್ದಾರೆ ಸ್ಟಾರ್ ನಟ….!!

ಸ್ಯಾಂಡಲ್ ವುಡ್ ಡೈನಾಮಿಕ್‌ ಪ್ರಿನ್ಸ್ ಸಾಲು ಸಾಲು ಸಿನಿಮಾದಲ್ಲಿ‌ ಬ್ಯುಸಿಯಾಗಿದ್ದಾರೆ. ಇದರ ಮಧ್ಯೆಯೂ ಪ್ರಜ್ವಲ್ ದೇವರಾಜ್ ಕಿರುತೆರೆಗೆ ನಿರ್ಣಾಯಕರಾಗುವ ಮೂಲಕ ಗ್ರ್ಯಾಂಡ್ ಎಂಟ್ರಿ ಕೊಡ್ತಿದ್ದಾರೆ.

ಸುವರ್ಣ ಟಿವಿಯಲ್ಲಿ ಸದ್ಯದಲ್ಲೇ ಡ್ಯಾನ್ಸಿಂಗ್ ರಿಯಾಲಿಟಿ ಶೋವೊಂದು ಆರಂಭವಾಗಲಿದ್ದು ಈಗಾಗಲೇ ಶೋ ಪ್ರೋಮೋ ಗಮನ ಸೆಳೆಯುತ್ತಿದೆ. ಇದೇ ರಿಯಾಲಿಟಿ ಶೋ ಮೂಲಕ ಪ್ರಜ್ವಲ್ ದೇವರಾಜ್ ಸ್ಮಾಲ್ ಸ್ಕ್ರೀನ್ ಗೆ ಎಂಟ್ರಿಯಾಗಲಿದ್ದಾರೆ. ಸಣ್ಣ ವಯಸ್ಸಿನಿಂದಲೂ ನೃತ್ಯದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಪ್ರಜ್ವಲ್ ದೇವರಾಜ್ ಶಾಸ್ತ್ರೀಯ ನೃತ್ಯ ಸೇರಿ ಹಲವು ಪ್ರಕಾರದ ಡ್ಯಾನ್ಸ್ ಕಲಿತಿದ್ದಾರೆ.

ಇವರ ಪತ್ನಿ ರಾಗಿಣಿ ಕೂಡ ನೃತ್ಯಗಾತಿಯಾಗಿದ್ದು ಡ್ಯಾನ್ಸ್ ಕ್ಲಾಸ್ ಕೂಡ ನಡೆಸುತ್ತಾರೆ. ಪ್ರಜ್ವಲ್ ಮತ್ತು ರಾಗಿಣಿ ಲವ್ ಸ್ಟೋರಿ ಆರಂಭವಾಗಿದ್ದು ಕೂಡ ಡ್ಯಾನ್ಸ್ ಕ್ಲಾಸ್ ನಲ್ಲೇ. ಹೀಗಾಗಿ ಡ್ಯಾನ್ಸ್ ಗೂ ಪ್ರಜ್ವಲ್ ವಿಶೇಷ ನಂಟಿದೆ. ಇದೇ ಕಾರಣಕ್ಕೆ ಪ್ರಜ್ವಲ್ ರನ್ನು ಡ್ಯಾನ್ಸ್ ಶೋ ನಿರ್ಣಾಯಕರಾಗಿ ಆಹ್ವಾನಿಸಲಾಗಿದೆ‌. ಈ ವಿಚಾರವನ್ನು ಸ್ವತಃ ಪ್ರಜ್ವಲ್ ದೇವರಾಜ್ ಖಚಿತ ಪಡಿಸಿದ್ದು, ನಿರ್ಣಾಯಕನಾಗಿ ಕಿರುತೆರೆಗೆ ಬರ್ತಿದ್ದೇನೆ. ಇದೊಂದು ವಿಭಿನ್ನ ಅನುಭವ. ಪ್ರೋಮೋಶೂಟ್ ಸಿದ್ಧತೆ ನಡೆದಿದೆ ಎಂದಿದ್ದಾರೆ.

ಈಗಾಗಲೇ ನಟ ಜಗ್ಗೇಶ್, ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ವಿನೋದ್ ರಾಜ್, ಲಕ್ಷ್ಮೀ,ರಕ್ಷಿತಾ,ಗಣೇಶ್ ಸೇರಿದಂತೆ ಹಲವು ನಟ-ನಟಿಯರು ಕಿರುತೆರೆಯ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಈ ಸಾಲಿಗೆ ನಟ ಪ್ರಜ್ವಲ್ ದೇವರಾಜ್ ಕೂಡ ಸೇರ್ಪಡೆಯಾಗಲಿದ್ದು, ಡೈನಾಮಿಕ್ ಪ್ರಿನ್ಸ್ ರನ್ನು ಜಡ್ಜ್ ಕುರ್ಚಿಯಲ್ಲಿ ನೋಡೋಕೆ ಅಭಿಮಾನಿಗಳು ಕಾತುರರಾಗಿ ಕಾಯ್ತಿದ್ದಾರೆ.

Comments are closed.