ಪ್ರಣೀತಾ ಸುಭಾಶ್ ಫ್ಯಾಮಿಲಿಗೆ ಅರ್ನಾ ಎಂಟ್ರಿ: ಸ್ಪೆಶಲ್ ಪೋಟೋಶೂಟ್ ಮೂಲಕ ಮಗಳ ಮುಖ ರಿವೀಲ್

ಬಾಲಿವುಡ್ ಸೇರಿದಂತೆ ಹಲವು ಭಾಷೆಗಳಲ್ಲಿ ಮಿಂಚಿದ ನಟಿ ಪ್ರಣೀತಾ ಸುಭಾಶ್ ಸದ್ಯ ಸಿನಿಮಾಗಳಿಂದ ಬ್ರೇಕ್ ಪಡೆದುಕೊಂಡಿದ್ದಾರೆ. ಆದರೆ ಸಿನಿಮಾದಿಂದ ಬ್ರೇಕ್ ಪಡೆದು ಕೊಂಡರೂ ಪ್ರಣೀತಾ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ಮೊನ್ನೆ ಮೊನ್ನೆ ಪತಿ ಪಾದಪೂಜೆ ಮಾಡಿ ಸುದ್ದಿಯಾಗಿದ್ದ ಪ್ರಣೀತಾ ( Pranitha Subhash Daughter Arna ) ಈ ಭಾರಿ ತಮ್ಮ ಮನೆಗೆ ಬಂದ ಮಹಾಲಕ್ಷ್ಮೀಗೆ ಹೆಸರಿಟ್ಟು ಅಭಿಮಾನಿಗಳಿಗೆ ಮುಖ ದರ್ಶನ ಮಾಡಿಸಿ ಸದ್ದು ಮಾಡಿದ್ದಾರೆ.

ಹೌದು ಕಳೆದ ವರ್ಷವಷ್ಟೇ ತಮ್ಮ ಪ್ರೀತಿಯ ಗೆಳೆಯನ ಜೊತೆ ಸರಳವಾಗಿ ಹೊಸ ಬದುಕಿಗೆ ಕಾಲಿಟ್ಟ ಪ್ರಣೀತಾ ಮದುವೆಯಾದ ಕೆಲವೇ ತಿಂಗಳುಗಳಲ್ಲಿ ಸಿಹಿಸುದ್ದಿ ನೀಡಿದ್ದರು. ಮಾತ್ರವಲ್ಲ ಅದ್ದೂರಿ ಸೀಮಂತ ಹಾಗೂ ಬೇಬಿ ಬಂಪ್ ಪೋಟೋಶೂಟ್ ಕೂಡಾ‌ ಮಾಡಿಸಿಕೊಂಡಿದ್ದರು. ಬೇಬಿ ಬಂಪ್ ಜೊತೆ ಪ್ರಣೀತಾ ಪೋಸ್ ಕೊಟ್ಟ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು.

ಕೆಲ ತಿಂಗಳ ಹಿಂದೆಯಷ್ಟೇ ಪ್ರಣೀತಾ ನಾರ್ಮಲ್ ಡೆಲಿವರಿ ಮೂಲಕ ಹೆಣ್ಣುಮಗುವಿಗೆ ಜನ್ಮ ನೀಡಿದ್ದರು. ಮಾತ್ರವಲ್ಲ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಹೆರಿಗೆ ಅನುಭವ ಹಾಗೂ ಖುದ್ದು ಡಾಕ್ಟರ್ ಆಗಿರೋ ತಾಯಿಯೇ ತನ್ನ ಡೆಲಿವರಿ ಮಾಡಿಸಿದ ವಿಚಾರವನ್ನು ಶೇರ್ ಮಾಡಿದ್ದರು. ಈಗ ಅಭಿಮಾನಿಗಳಿಗೆ ಖುಷಿ ಸುದ್ದಿಯೊಂದನ್ನು ಪ್ರಣೀತಾ ನೀಡಿದ್ದಾರೆ. ತಮ್ಮ ಮುದ್ದು ಮುದ್ದಾದ ಬೆಣ್ಣೆ ಮುದ್ದೆಯಂತಹ ಮಗಳನ್ನು ಸುಂದರವಾದ ಪೋಟೋಶೂಟ್ ಮೂಲಕ ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ.

ಮಾತ್ರವಲ್ಲ ಮಗಳಿಗೆ ತಾವಿಟ್ಟಿರೋ ಸುಂದರವಾದ ಹೆಸರನ್ನು ಕೂಡ ರಿವೀಲ್‌ ಮಾಡಿದ್ದಾರೆ. ಹೌದು ಹಿಂದೂ ಧರ್ಮದ ಮೇಲೆ ಅಪಾರವಾದ ಗೌರವ ಹೊಂದಿರೋ ನಟಿ ಪ್ರಣೀತಾ ತಮ್ಮ ಮಗಳಿಗೆ ಅರ್ನಾ ಎಂದು ಹೆಸರಿಟ್ಟಿದ್ದಾರೆ. ಅರ್ನಾ ಎಂದರೇ ಪುರಾಣಗಳ ಪ್ರಕಾರ ಲಕ್ಷ್ಮೀ ಎಂದರ್ಥ. ಧನದ ಅಧಿದೇವತೆಯಾದ ಲಕ್ಷ್ಮೀಯನ್ನು ಅರ್ನಾ ಎಂದು ಪೂಜಿಸಲಾಗುತ್ತದೆ.

ಹೀಗಾಗಿ ಪ್ರಣೀತಾ ಈ ಹೆಸರನ್ನು ತಮ್ಮ ಮಗುವಿಗೆ ಇಟ್ಟಿದ್ದಾರೆ. ಶಾಸ್ತ್ರ ಸಂಪ್ರದಾಯ ಹಾಗೂ ಪೂಜೆ ಗಳಲ್ಲೂ ಆಸಕ್ತಿ ಹೊಂದಿರೋ ಪ್ರಣೀತಾ ಇತ್ತೀಚಿಗಷ್ಟೇ ಭೀಮನ ಅಮಾವಾಸ್ಯೆ ಯಂದು ಪತಿಯ ಪಾದ ಪೂಜೆ ಮಾಡಿ, ಪೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡೋ ಮೂಲಕ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದರು. ಅರ್ನಾ ಮುದ್ದಾದ ಪೋಟೋಗಳನ್ನು ಪ್ರಣೀತಾ ಹಂಚಿಕೊಳ್ಳುತ್ತಿದ್ದಂತೆ ಸಾವಿರಾರು ಅಭಿಮಾನಿಗಳು ಪ್ರಣೀತಾಗೆ ಶುಭಹಾರೈಸಿದ್ದಾರೆ. ಪ್ರಣೀತಾ ಕೇವಲ ನಟನೆ ಮಾತ್ರವಲ್ಲದೇ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದು ತಮ್ಮದೇ ಟ್ರಸ್ಟ್ ಮೂಲಕ ಅಶಕ್ತರಿಗೆ ನೆರವಾಗುತ್ತಿದ್ದಾರೆ.

ಇದನ್ನೂ ಓದಿ : actress meghana raj : ಪ್ರತಿಷ್ಠಿತ FOG HERO ಪ್ರಶಸ್ತಿಗೆ ಭಾಜನರಾದ ನಟಿ ಮೇಘನಾ ರಾಜ್​

ಇದನ್ನೂ ಓದಿ : Vikrant Rona piracy show : ಹಾಸ್ಟೆಲ್ ಮಕ್ಕಳಿಗೆ ವಿಕ್ರಾಂತ್ ರೋಣ ಪೈರಸಿ ಶೋ : ವಾರ್ಡನ್ ವಿರುದ್ಧ ಜಾಕ್ ಮಂಜು ಆಕ್ರೋಶ

Pranitha Subhash Daughter Arna Name Reveled Special Photoshoot

Comments are closed.