ಜೂನಿಯರ್ ಎನ್ ಟಿಆರ್ ಹುಟ್ಟುಹಬ್ಬಕ್ಕೆ ನೀಲ್ ಸರ್ಪ್ರೈಸ್ : NTR31 ಸಿನಿಮಾದ ಶೂಟಿಂಗ್ ಯಾವಾಗ ಶುರು

ಜೂನಿಯರ್ ಎನ್ ಟಿಆರ್ (Jr NTR) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಜನುಮದಿನಕ್ಕೆ ಸಿನಿತಾರೆಯರು, ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ. ತಾರಕ್ ಬರ್ತ್ ಡೇ ಸ್ಪೆಷಲ್ ಆಗಿ 30ನೇ ಚಿತ್ರದ ಟೈಟಲ್ (NTR31) ರಿವೀಲ್ ಆಗಿದೆ. ಅಂತೆಯೇ ಪ್ರಶಾಂತ್ ನೀಲ್ (Prashanth Neel) ನಿರ್ದೇಶಿಸ್ತಿರುವ ಸಿನಿಮಾದ ಬಗ್ಗೆಯೂ ಅಪ್ ಡೇಟ್ ಹೊರಬಿದ್ದಿದೆ.

ಆರ್‌ಆರ್‌ಆರ್‌ ಖ್ಯಾತಿಯ ಜೂನಿಯರ್ ಎನ್ ಟಿಆರ್ ಹಾಗೂ ಕೆಜಿಎಫ್ ಸೂತ್ರಧಾರ ಪ್ರಶಾಂತ್ ನೀಲ್ (Prashanth Neel)ಕಾಂಬಿನೇಷನ್‌ನಲ್ಲಿ ನಿರ್ಮಾಣಗೊಳ್ಳಲಿರುವ ಸಿನಿಮಾದ ಬಗ್ಗೆ ಅಭಿಮಾನಿಗಳು ಬೆಟ್ಟದಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಸಿನಿಮಾಕ್ಕೆ ಎನ್ ಟಿಆರ್ 31 (NTR31) ಎಂಬ ಟೈಟಲ್‌ನ್ನು ತಾತ್ಕಾಲಿಕವಾಗಿ ಇರಲಿಸಲಾಗಿದೆ. ಆದರೆ ಇಬ್ಬರ ಕಾಂಬಿನೇಷನ್‌ನ ಸಿನಿಮಾ ಯಾವಾಗ ಶುರುವಾಗುತ್ತೆ ಅನ್ನೋದು ಇನ್ನೂ ನಿರ್ಧಾರವಾಗಿಲ. ಯಾವ ಕಥೆಯನ್ನು ಆಧರಿಸಿ ಸಿನಿಮಾ ಮಾಡಲಾಗುತ್ತಿದೆ ಅನ್ನೋ ಬಗ್ಗೆಯೂ ಇಲ್ಲಿವರೆಗೆ ರಿವೀಲ್ ಆಗಿರಲಿಲ್ಲ. ಇದೀಗ ಸಿಂಹಾದ್ರಿಯ ಹುಟ್ಟುಹಬ್ಬದ ವಿಶೇಷವಾಗಿ ಪೋಸ್ಟರ್ ರಿಲೀಸ್ ಮಾಡಿ ಚಿತ್ರೀಕರಣ ಯಾವಾಗ ಆರಂಭವಾಗಲಿದೆ ಎಂಬ ಬಗ್ಗೆ ಚಿತ್ರತಂಡ ಮಾಹಿತಿ ಕೊಟ್ಟಿದೆ.

ನೀಲ್-ತಾರಕ್ 2024ರ ಮಾರ್ಚ್ ತಿಂಗಳಿನಿಂದ ಶೂಟಿಂಗ್ ಅಖಾಡಕ್ಕೆ ಎಂಟ್ರಿ ಕೊಡಲಿದ್ದಾರೆ. ಪ್ರಭಾಸ್ ನಟನೆಯ ಸಲಾರ್ ನಿರ್ದೇಶನದಲ್ಲಿ ಬ್ಯುಸಿ ಇರುವ ಪ್ರಶಾಂತ್ ನೀಲ್ ಆ ಚಿತ್ರದ ಬಳಿಕ ಎನ್ ಟಿಆರ್ (Jr NTR) 31ನೇ ಚಿತ್ರ ಶುರುವಾಗಲಿದೆ. ತಾರಕ್ ಕೊರಟಲಾ ಶಿವ ನಿರ್ದೇಶನದಲ್ಲಿ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಉಪ್ಪೇನಾ, ಪುಪ್ಪ, ವಾಲ್ಟೇರ್ ವೀರಯ್ಯ, ಡಿಯರ್ ಕಾಂಬ್ರೇಡ್ ಸಿನಿಮಾಗಳನ್ನು ನಿರ್ಮಿಸಿರುವ ಮೈತ್ರಿ ಮೂವೀ ಮೇಕರ್ಸ್ ಎನ್ ಟಿಆರ್ ಹಾಗೂ ಪ್ರಶಾಂತ್ ನೀಲ್ ಚಿತ್ರಕ್ಕೆ ಬಂಡವಾಳ ಹೂಡಿದೆ.

ಕೆಜಿಎಫ್‌ ಸಿನಿಮಾ ಸೂಪರ್‌ ಹಿಟ್‌ ಆಗಿದ್ದು, ಈಗಾಗಲೇ ಎರಡು ಕೆಜಿಎಫ್‌ ಎರಡು ಆವೃತ್ತಿಗಳೂ ತೆರೆ ಕಂಡಿವೆ. ಅಲ್ಲದೇ ಕೆಜಿಎಫ್‌ 3 ಬಗ್ಗೆಯೂ ಬೆಟ್ಟದಷ್ಟು ನಿರೀಕ್ಷೆಗಳಿಗೆ. ಭಾರತೀಯ ಚಿತ್ರರಂಗವೇ ಕನ್ನಡ ಸಿನಿಮಾ ರಂಗದತ್ತ ತಿರುಗಿ ನೋಡುವಂತೆ ಮಾಡಿರುವ ಪ್ರಶಾಂತ್‌ ನೀಲ್‌ ಇದೀಗ ಜೂನಿಯರ್‌ ಎನ್‌ಟಿಆರ್‌ಗೆ ನಿರ್ದೇಶನ ಮಾಡುತ್ತಿರುವುದು ತೀವ್ರ ಕುತೂಹಲ ಮೂಡಿಸಿದೆ.

ಇದನ್ನೂ ಓದಿ : ದಿ ಕೇರಳ ಸ್ಟೋರಿ’ ಸಿನಿಮಾ ನಿಷೇಧಿಸಿದ ಪಶ್ಚಿಮ ಬಂಗಾಳ ಸರಕಾರದ ಆದೇಶಕ್ಕೆ ಸುಪ್ರೀಂ ತಡೆ

ಇದನ್ನೂ ಓದಿ : Chota Champion : ಛೋಟಾ ಚಾಂಪಿಯನ್‌, ಅಪ್ಪನಿಗಾಗಿ ಹಂಬಲಿಸಿದ ಮಂಗಳೂರಿನ ಪ್ರನ್ವಿ

Comments are closed.