ಕಿರುತೆರೆಯ ಪ್ರಸಿದ್ದ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 8ರ ಫೈನಲ್ ತೀವ್ರ ಕುತೂಹಲ ಕೆರಳಿಸಿದೆ. ಫೈನಲ್ ಈಗಾಗಾಗಲೇ ಆರಂಭವಾಗಿದ್ದು, ಅಂತಿಮ ಘಟದಲ್ಲಿಐದು ಮಂದಿ ಬಿಗ್‌ಬಾಸ್ ಮನೆಯಲ್ಲಿದ್ದಾರೆ. ಆದ್ರೀಗ 5 ಸ್ಥಾನಿಯಾಗಿ ಪ್ರಶಾಂತ್ ಸಂಬರಗಿ ಹೊರ ಬಂದಿದ್ದು, ಇನ್ನು ನಾಲ್ಕು ಮಂದಿ ಉಳಿದುಕೊಂಡಿದ್ದಾರೆ.
ಈಗಾಗಲೇ 8 ಆವೃತ್ತಿಗಳನ್ನು ಕಂಡಿರುವ ಬಿಗ್‌ಬಾಸ್ ಕನ್ನಡ ಶೋ ಈ ಬಾರಿ ಹಲವು ವಿಶೇಷತೆಗಳಿಂದ ಕೂಡಿದೆ. ಒಂದೆಡೆ ಕಿಚ್ಚ ಸುದೀಪ್ ಚಿತ್ರರಂಗಕ್ಕೆ ಎಂಟ್ರಿಕೊಟ್ಟು 25 ವರ್ಷ ಕಳೆದಿದ್ರೆ, ಇನ್ನೊಂದೆಡೆ ಬಿಗ್‌ಬಾಸ್ ಶೋಗೆ 8 ವರ್ಷ. ಇದೇ ಕಾರಣಕ್ಕೆ ಬಿಗ್‌ಬಾಸ್ ಸುದೀಪ್ ಅವರಿಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ.
ಈಗಾಗಲೇ ಕೆ.ಪಿ.ಅರವಿಂದ, ವೈಷ್ಣವಿ ಗೌಡ, ದಿವ್ಯ ಉರುಡುಗ, ಪ್ರಶಾಂತ್ ಸಂಬರಗಿ ಹಾಗೂ ಮಂಜು ಪಾವಗಡ ಬಿಗ್‌ಬಾಸ್ ಮನೆಯಲ್ಲಿ ಅಂತಿಮ ವಾರದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಇದೀಗ ಬಿಗ್‌ಬಾಸ್ ಮನೆಯಿಂದ ಪ್ರಶಾಂತ್ ಸಂಬರಗಿ ಹೊರಬಂದಿದ್ದಾರೆ. ಉಳಿದಂತೆ ಯಾರು ಅಂತಿಮ ಘಟ್ಟಕ್ಕೆ ತಲುಪಲಿದ್ದಾರೆ ಅನ್ನೋ ಕುತೂಹಲ ಮೂಡಿಸಿದೆ.
ಇದನ್ನೂ ಓದಿ : ನಿಧಿ ಸುಬ್ಬಯ್ಯಗೆ ಕ್ಷಮೆ ಕೇಳಿ ಪತ್ರ ಬರೆದ ಅರವಿಂದ್ : I LOVE U ನಿನ್ನ ಹಣೆಯ ಮೇಲೆ ಬರೆದುಕೋ ಅಂದಿದ್ಯಾಕೆ ನಿಧಿ
(Prashant Sambaragi from Bigg Boss house)