Nidhi vs Arvind : ನಿಧಿ ಸುಬ್ಬಯ್ಯಗೆ ಕ್ಷಮೆ ಕೇಳಿ ಪತ್ರ ಬರೆದ ಅರವಿಂದ್‌ : I LOVE U ನಿನ್ನ ಹಣೆಯ ಮೇಲೆ ಬರೆದುಕೋ ಅಂದಿದ್ಯಾಕೆ ನಿಧಿ

ಬಿಗ್‌ಬಾಸ್‌ ರಿಯಾಲಿಟಿ ಶೋ ಫೈನಲ್‌ ನಡೆಯುತ್ತಿದೆ. ಕ್ಷಣ ಕ್ಷಣಕ್ಕೂ ಕುತೂಹಲವನ್ನು ಹುಟ್ಟಿಸುತ್ತಿದೆ. ಈ ನಡುವಲ್ಲೇ ಫೈನಲ್‌ ಐದರಲ್ಲಿ ಸ್ಥಾನ ಪಡೆದಿದ್ದ ಕೆ.ಪಿ.ಅರವಿಂದ ನಟಿ ನಿಧಿ ಸುಬ್ಬಯ್ಯಗೆ ಪತ್ರ ಬರೆದಿದ್ದು, ಕ್ಷಮೆ ಕೋರಿದ್ದಾರೆ.

ಬಿಗ್‌ಬಾಸ್‌ ಸೀಸನ್‌ ಎಂಟರ ಎರಡನೇ ಆವೃತ್ತಿ ಶುರುವಾಗುತ್ತಲೇ ಮನೆಯಲ್ಲಿ ಕಿತ್ತಾಟ ಶುರುವಾಗಿತ್ತು. ಇದೇ ಹೊತ್ತಲ್ಲೇ ನಿಧಿ ಸುಬ್ಬಯ್ಯ ಹಾಗೂ ಅರವಿಂದ್‌ ಕಿತ್ತಾಡಿಕೊಂಡಿದ್ರು. ಅರವಿಂದ್‌ ನಿಧಿ ಸುಬ್ಬಯ್ಯಗೆ ಬೈದಿದ್ದ ಮಾತುಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್‌ ಆಗಿತ್ತು. ಬಿಗ್‌ಬಾಸ್‌ ಮನೆಯಲ್ಲಿದ್ದ ಅಷ್ಟೂ ದಿನವೂ ಒಬ್ಬರಿಗೊಬ್ಬರು ಮಾತನಾಡುತ್ತಲೇ ಇರಲಿಲ್ಲ. ಆದರೆ ತಾನು ನಿಧಿ ಸುಬ್ಬಯ್ಯಗೆ ನೋವನ್ನುಂಟು ಮಾಡಿದ್ದೇನೆ ಅನ್ನೋ ಕೊರಗು ಅರವಿಂದ್‌ಗೆ ಕಾಡುತ್ತಲೇ ಇತ್ತು. ಒಂದಿಲ್ಲೊಂದು ದಿನ ಮುಖತಃ ಭೇಟಿಯಾಗಿ ಮಾತನಾಡಬೇಕು ಅಂತಾ ಅಂದುಕೊಂಡಿದ್ರು.

ಆದ್ರೆ ಫಿನಾಲೆ ಹಂತದಲ್ಲೇ ಬಿಗ್‌ಬಾಸ್‌ ಅರವಿಂದ್‌ ಅವಕಾಶವೊಂದನ್ನು ನೀಡಿತ್ತು. ಬಿಗ್‌ಬಾಸ್‌ ಮನೆಯಿಂದ ಹೊರಹೋಗಿರುವ ಯಾರಿಗಾದ್ರೂ ಪತ್ರ ಬರೆಯಿರಿ ಅಂತಾ ಹೇಳಿದ್ದಾರೆ. ಈ ಅವಕಾಶವನ್ನು ಸರಿಯಾಗಿಯೇ ಬಳಸಿಕೊಂಡ ಅರವಿಂದ್‌ ನಿಧಿಗೆ ಪತ್ರ ಬರೆದು ಘಟನೆಯ ಬಗ್ಗೆ ವಿವರಿಸುತ್ತಾ ಕ್ಷಮೆಯಾಚಿಸಿದ್ದಾರೆ. ಫಿನಾಲೆ ಹೊತ್ತಲೇ ಪ್ರೇಕ್ಷಕರ ಸಾಲಿನಲ್ಲಿ ಕುಳಿತಿದ್ದ ನಿಧಿ ಪತ್ರ ಓದುತ್ತಲೇ ಸಖತ್‌ ಖುಷಿಯಾಗಿದ್ರು. ಅರವಿಂದ್‌ ಅವರು ಕ್ಷಮೆ ಕೇಳುತ್ತಲೇ ಅರವಿಂದ ನಾನು ಜೀವನ ಪರ್ಯಂತ ಸ್ನೇಹಿತರಾಗಿ ಇರ್ತೇವೆ ಎಂದಿದ್ದಾರೆ.

ಇದನ್ನೂ ಓದಿ : Nidhi subbaih: ಬಿಗ್ ಬಾಸ್ ಮನೆಯಲ್ಲಿ ದಿನಕ್ಕೊಂದು ಜಗಳ…! ಅರವಿಂದ್-ನಿಧಿ ಮಧ್ಯೆ ಬಿಗ್ ಫೈಟ್….!!

ಅಷ್ಟೇ ಅಲ್ಲಾ ನಿಧಿ ಐಲವ್‌ಯೂ ಅರವಿಂದ ಅನ್ನುತ್ತಾ. ಇದನ್ನ ನಿನ್ನ ಹಣೆಯ ಮೇಲೆ ಬರೆದುಕೋ ಎಂದು ಹೇಳಿದ್ದಾರೆ. ಈ ಮೂಲಕ ಬಿಗ್‌ಬಾಸ್‌ ಮನೆಯಲ್ಲಿ ಹುಟ್ಟಿಕೊಂಡಿದ್ದ ನಿಧಿ ಅರವಿಂದ ಮುನಿಸು ಇದೀಗ ಮಾಯವಾಗಿದೆ. ಕೇವಲ ಒಂದು ಪತ್ರ ಇಬ್ಬರನ್ನೂ ಸ್ನೇಹಿತರನ್ನಾಗಿಸಿದೆ. ಕೊನೆಗೆ ಇಬ್ಬರೂ ಬಿಗ್‌ಬಾಸ್‌ಗೆ ಥ್ಯಾಂಕ್ಸ್‌ ಹೇಳಿದ್ದಾರೆ.

ಇದನ್ನೂ ಓದಿ : ಬಿಗ್ ಬಾಸ್ ಮನೆಯಿಂದ ಹೊರಬಂದ ನಿಧಿ ಸುಬ್ಬಯ್ಯ

ಇದನ್ನೂ ಓದಿ : 10 ತಿಂಗಳಿಗೆ ಕೊನೆಯಾಯ್ತು ದಾಂಪತ್ಯ…!  ಸತ್ಯ ರಿವೀಲ್ ಮಾಡಿದ ನಟಿ ನಿಧಿ ಸುಬ್ಬಯ್ಯ…!!

(Bigg Boss Show : Aravind apologizes to Nidhi Subbiah: I LOVE U write on your forehead )

Comments are closed.