Pratham : ಮೊದಲ ದಿನ ಕ್ರಾಂತಿಗಿಂತ ನಟ ಭಯಂಕರ ಸಿನಿಮಾದ ಕಲೆಕ್ಷನ್ ಹೆಚ್ಚು : ವೈರಲ್‌ ಆಯ್ತು ಪೋಸ್ಟರ್‌

ಕಳೆದ ವಾರವಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ವಿ ಹರಿಕೃಷ್ಣ ನಟನೆಯ ಬಹು ನಿರೀಕ್ಷಿತ ಸಿನಿಮಾ ಕ್ರಾಂತಿ ಬಿಡುಗಡೆಯಾಯಿತು. ಮೊದಲ ದಿನವೇ 12.85 ಕೋಟಿ ಗಳಿಕೆ ಮಾಡಿದ ಕ್ರಾಂತಿ ಭರ್ಜರಿ ಓಪನಿಂಗ್ ಪಡೆದುಕೊಂಡಿತು. ಎರಡು ವರ್ಷಗಳ ಬಳಿಕ ತೆರೆಗೆ ಬಂದ ತಮ್ಮ ನೆಚ್ಚಿನ ನಟನ ಸಿನಿಮಾವನ್ನು ದರ್ಶನ್ ಅಭಿಮಾನಿಗಳು ಮೆಚ್ಚಿಕೊಂಡರು. ಇನ್ನು ಸಿನಿ ರಸಿಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡರೂ ಸಹ ಕ್ರಾಂತಿ ನಂತರದ ದಿನಗಳಲ್ಲಿ ಸಮಾಧಾನಕರ ಕಲೆಕ್ಷನ್ ಮಾಡುವಲ್ಲಿ ಯಶಸ್ವಿಯಾಯಿತು. ಇದೀಗ ನಿನ್ನೆ ( ಫೆಬ್ರವರಿ 3 ) ಪ್ರಥಮ್ (Pratham) ನಟನೆಯ ನಟ ಭಯಂಕರ ಸಿನಿಮಾ ತೆರೆಗೆ ಕಂಡಿದೆ. ಮೊದಲ ದಿನದ ಪ್ರದರ್ಶನಗಳು ಮುಗಿದ ಕೂಡಲೇ ಈ ಸಿನಿಮಾ ಮೊದಲ ದಿನವೇ ಬರೋಬ್ಬರಿ 35.5 ಕೋಟಿ ಕಲೆಕ್ಷನ್ ಮಾಡಿದೆ ಎಂಬ ಪೋಸ್ಟರ್ ಹೊರಬಿದ್ದಿದೆ. ಹಾಗಾಗಿ ಈ ಸಿನಿಮಾ ಮೊದಲ ದಿನದ ಕಲೆಕ್ಷನ್‌ನಲ್ಲಿ ದರ್ಶನ್‌ ಅಭಿನಯದ ಕ್ರಾಂತಿ ಸಿನಿಮಾಕ್ಕಿಂತ ಹೆಚ್ಚಿನ ಕಲೆಕ್ಷನ್‌ ಮಾಡಿದೆ ಎನ್ನುವ ಪೋಸ್ಟರ್ ಸಖತ್‌ ವೈರಲ್‌ ಆಗಿದೆ.

ಒಂದೆಡೆ ಪಠಾಣ್ ಪೈಪೋಟಿ ಹಾಗೂ ನೆಗೆಟಿವ್ ವಿಮರ್ಶೆ ಸಿನಿಮಾಕ್ಕೆ ಎದುರಾಯಿತು. ಎಷ್ಟೇ ನೆಗೆಟಿವ್ ವಿಮರ್ಶೆ ಎದುರಾದರೂ ನಮ್ಮ ಸಿನಿಮಾ ಗೆದ್ದಿದೆ ಎಂದು ಸಿನಿತಂಡ ಹೇಳಿಕೊಂಡಿತು. ಕೆಲ ಮಾಧ್ಯಮಗಳು ಸಿನಿಮಾ ಗಳಿಕೆ ಹಾಗೂ ತನ್ನ ವಿವಿಧ ರೈಟ್ಸ್‌ಗಳ ಮಾರಾಟದ ಹಣ ಸೇರಿ ನೂರು ಕೋಟಿ ಕ್ಲಬ್ ಸೇರಿದೆ ಎಂದು ಪ್ರಕಟಿಸಿದವು. ಅಲ್ಲದೇ ಕ್ರಾಂತಿ ಸಿನಿತಂಡ ಸಹ ನೂರು ಕೋಟಿ ಎಂದು ಮಾಡಲಾಗಿದ್ದ ಕೇಕ್ ಕತ್ತರಿಸಿ ಸಂಭ್ರಮಿಸಿತು. ಆದರೆ ಸಾಮಾನ್ಯ ಸಿನಿ ರಸಿಕರು ಈ ಕಲೆಕ್ಷನ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಅದರಲ್ಲೂ ಮೊದಲ ದಿನ ಸಿನಿಮಾ 35 ಕೋಟಿ ಗಳಿಸಿದೆ ಎಂದು ಹರಿದಾಡಿದ್ದ ಪೋಸ್ಟರ್ ಅನ್ನು ಟ್ರೋಲ್ ಮಾಡಿದ್ದರು. ಇದು ನಕಲಿ ಕಲೆಕ್ಷನ್ ರಿಪೋರ್ಟ್, ಈ ರೀತಿ ಮಾಡಿ ಜನರಿಗೆ ತಪ್ಪು ಮಾಹಿತಿ ನೀಡಬೇಡಿ ಎಂದಿದ್ದರು.

ಆದರೆ ದರ್ಶನ್ ಅಭಿಮಾನಿಗಳ ಪೇಜ್‌ಗಳಲ್ಲಿ ಮತ್ತು ಟ್ರೋಲ್ ಪೇಜ್‌ಗಳಲ್ಲಿ ಈ ಪೋಸ್ಟರ್ ಹರಿದಾಡಿತ್ತು. ಇದೀಗ ಈ ಪೋಸ್ಟರ್‌ಗೆ ಕೌಂಟರ್ ಕೊಡುವಂತ ಮತ್ತೊಂದು ಪೋಸ್ಟರ್ ಹೊರಬಿದ್ದಿದೆ. ಅದೂ ಸಹ ಪ್ರಥಮ್ ಅಭಿನಯದ ನಟ ಭಯಂಕರ ಸಿನಿಮಾದ್ದು. ಈ ಸಿನಿಮಾದ ಮೊದಲ ದಿನದ ಕಲೆಕ್ಷನ್ ಪೋಸ್ಟರ್ ಇದಾಗಿದ್ದು, ಸದ್ಯ ಇದೊಂದು ಪೋಸ್ಟರ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. ಇನ್ನು ಈ ಪೋಸ್ಟರ್ ಅನ್ನು ಕ್ರಾಂತಿ ಸಿನಿಮಾ ಮೊದಲ ದಿನ 35.3 ಕೋಟಿ ಕಲೆಕ್ಷನ್ ಮಾಡಿತ್ತು ಎಂಬ ಪೋಸ್ಟರ್ ಜತೆ ಹೋಲಿಸಿ ಪ್ರಥಮ್ ನಿಜವಾದ ಬಾಕ್ಸ್ ಆಫೀಸ್ ಸುಲ್ತಾನ್ ಎಂದು ಟ್ರೋಲ್ ಮಾಡಲಾಗಿದೆ. ಸದ್ಯ ಈ ಹೋಲಿಕೆಯ ಟ್ರೋಲ್ ವೈರಲ್ ಆಗಿದೆ.

ಹೀಗೆ ಕ್ರಾಂತಿ ಸಿನಿಮಾಕ್ಕಿಂತ ಪ್ರಥಮ್ ನಟನೆಯ ನಟ ಭಯಂಕರ ಸಿನಿಮಾ ಹೆಚ್ಚು ಕಲೆಕ್ಷನ್ ಮಾಡಿದೆ ಎಂಬ ಟ್ರೋಲ್ ವೈರಲ್ ಆದ ಬೆನ್ನಲ್ಲೇ ನಟ ಪ್ರಥಮ್ ಇದರ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ತನ್ನ ಹಾಗೂ ಕ್ರಾಂತಿ ಸಿನಿಮಾದ ಕಲೆಕ್ಷನ್ ಬಗ್ಗೆ ಮಾಡಲಾಗಿರುವ ಟ್ರೋಲ್ ಫೋಟೊವನ್ನು ಹಂಚಿಕೊಂಡಿರುವ ಪ್ರಥಮ್ ‘ಇದು ಸುಳ್ಳು ಸುದ್ದಿ. ನಾನು ಪೂಜೆ ಮಾಡೋ ಕಬ್ಬಾಳಮ್ಮನ ಸಾಕ್ಷಿಯಾಗಿಯೂ ಇದಕ್ಕೂ ನನಗೂ ಸಂಬಂಧವಿಲ್ಲ. ಹಾಗೂ ಮುಖ್ಯವಾಗಿ ನಮ್ಮ ಸಿನಿಮಾ ಅಷ್ಟು ಕಲೆಕ್ಷನ್ ಮಾಡಿಲ್ಲ. ದರ್ಶನ್ ಸರ್ ದೊಡ್ಡವರು. ಸುಮ್ಮನೆ ಸುಳ್ಳು ಹೋಲಿಕೆ ಬೇಡ. ಆದರೆ ಈಶ್ವರನ ಸಾಕ್ಷಿಯಾಗಿ ಇದು ಸುಳ್ಳು ಹಾಗೂ ನನಗೂ ಇದಕ್ಕೂ ಸಂಬಂಧವಿಲ್ಲ. ದಯವಿಟ್ಟು ನಿಲ್ಲಿಸಿ’ ಎಂದು ಬರೆದುಕೊಂಡು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : Meghana Raj Chiranjeevi Sarja : ಪಯಣ ಪ್ರೀತಿಯ ಜೊತೆಗೆ : ಮೇಘನಾ ರಾಜ್‌ -ಚಿರಂಜೀವಿ ಸರ್ಜಾ ಹೊಸ ಪೋಟೋ ವೈರಲ್

ಇದನ್ನೂ ಓದಿ : Vadiraja Swami: ಹಯವದನ ನಿರ್ದೇಶನದಲ್ಲಿ ಬೆಳ್ಳಿತೆರೆ ಮೇಲೆ ಬರಲಿದೆ ಶ್ರೀ ವಾದಿರಾಜ ಸ್ವಾಮಿಗಳ ಜೀವನಾಧಾರಿತ ಕಥೆ

ಇದನ್ನೂ ಓದಿ : Kiara- Siddharth wedding: ಬಾಲಿವುಡ್ ನಲ್ಲಿ ಮೊಳಗಿತು ಮಂಗಳವಾದ್ಯ: ಫೆಬ್ರವರಿ 6 ರಂದು ಕಿಯಾರಾ- ಸಿದ್ಧಾರ್ಥ್ ಕಲ್ಯಾಣ

ಇನ್ನು ಈ ರೀತಿ ಟ್ರೋಲ್‌ಗೆ ಒಳಗಾಗಿರುವ ಈ ಎರಡೂ ಪೋಸ್ಟರ್‌ಗಳೂ ಸಹ ಅಧಿಕೃತವಾಗಿಲ್ಲ. ಸಿನಿಮಾವನ್ನು ನಿರ್ಮಿಸುವ ನಿರ್ಮಾಪಕರು ಸಿನಿಮಾ ಮೊದಲ ದಿನ ಇಷ್ಟನ್ನೇ ಗಳಿಕೆ ಮಾಡಿದೆ ಎಂದು ತಾವೇ ಪೋಸ್ಟರ್ ಬಿಡುಗಡೆ ಮಾಡಿ ಹೇಳಿದರೆ ಮಾತ್ರ ಅದು ಅಧಿಕೃತ ಕಲೆಕ್ಷನ್ ಪೋಸ್ಟರ್ ಎನಿಸಿಕೊಳ್ಳಲಿದೆ. ಈ ರೀತಿಯ ರೂಢಿ ತೆಲುಗು ಸಿನಿರಂಗದಲ್ಲಿದ್ದು, ಕೆಜಿಎಫ್ ಹಾಗೂ ರಾಬರ್ಟ್ ಸಿನಿತಂಡಗಳು ಸಹ ಮೊದಲ ದಿನದ ಕಲೆಕ್ಷನ್ ಅನ್ನು ಬಿಚ್ಚಿಟ್ಟು ಯಾವುದೇ ಗೊಂದಲ ಉಂಟಾಗದಂತೆ ನೋಡಿಕೊಂಡಿದ್ದವು. ಒಟ್ಟಿನಲ್ಲಿ ಸಿನಿಮಾ ನಿರ್ಮಾಣ ಸಂಸ್ಥೆಗಳು ಮೊದಲ ದಿನ ಸಿನಿಮಾ ಏನು ಕಲೆಕ್ಷನ್ ಮಾಡಿದೆ ಎಂಬುದನ್ನು ಬಿಚ್ಚಿಡದಿದ್ದರೆ ಈ ರೀತಿಯ ಗೊಂದಲ ಹಾಗೂ ಇದರಿಂದ ವಿವಾದ ಉಂಟಾಗುವುದು ತಪ್ಪಲ್ಲ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Pratham : The collection of nata Bhayankar’s movie is more than Kranti on the first day: The poster has gone viral

Comments are closed.