ಭಾನುವಾರ, ಜೂನ್ 15, 2025
HomeCinemaಒಂದು ಮಗುವಿಗಾಗಿ ಹಂಬಲಿಸಿದ್ರಾ ಧ್ರುವ ಸರ್ಜಾ ಪ್ರೇರಣಾ ದಂಪತಿ ! ಆಕ್ಷ್ಯನ್ ಪ್ರಿನ್ಸ್ ಬಿಚ್ಚಿಟ್ರು ಅಸಲಿ‌ನೋವು

ಒಂದು ಮಗುವಿಗಾಗಿ ಹಂಬಲಿಸಿದ್ರಾ ಧ್ರುವ ಸರ್ಜಾ ಪ್ರೇರಣಾ ದಂಪತಿ ! ಆಕ್ಷ್ಯನ್ ಪ್ರಿನ್ಸ್ ಬಿಚ್ಚಿಟ್ರು ಅಸಲಿ‌ನೋವು

- Advertisement -

Dhruva Sarja daughter : ಕಳೆದ ಎರಡು ವರ್ಷಗಳಿಂದ ನೋವಿನಲ್ಲೇ ಮುಳುಗಿದ್ದ ನಟ ಧ್ರುವ ಹಾಗೂ ಮೇಘನಾ ರಾಜ್ ಸರ್ಜಾ ಕುಟುಂಬದಲ್ಲಿ ಸದ್ಯ ಖುಷಿಯೊಂದು ಮುದ್ದಾದ ಮಗುವಿನ ರೂಪದಲ್ಲಿ ಬಂದಿದೆ. ಆಕ್ಷ್ಯನ್ ಪ್ರಿನ್ಸ್ ಧ್ರುವ ಸರ್ಜಾ ತಮ್ಮ‌ ನೀರಿಕ್ಷೆಯಂತೆ ಹೆಣ್ಣು ಮಗುವಿನ ತಂದೆಯಾಗಿದ್ದಾರೆ. ಈ ಖುಷಿಯಲ್ಲಿ ನಟ ಧ್ರುವ ಸರ್ಜಾ ಹೆಣ್ಣುಮಕ್ಕಳಿಗೆ ಮಹತ್ವದ ಸಂದೇಶವೊಂದನ್ನು ನೀಡಿದ್ದು, ಕೇವಲ ಖುಷಿಯೊಂದೇ ಅಲ್ಲ ಕಿವಿಮಾತೊಂದರ ಮೂಲಕವೂ ಧ್ರುವ ಸರ್ಜಾ ತಮ್ಮ ಸಂಭ್ರಮ ವನ್ನು ಹಂಚಿಕೊಂಡಿದ್ದಾರೆ.

ನಟ ಧ್ರುವ ಸರ್ಜಾ ಹಾಗೂ ಪ್ರೇರಣಾ ಶಂಕರ‌ ಚೊಚ್ಚಲ ಮಗುವಿನ ನೀರಿಕ್ಷೆಯಲ್ಲಿದ್ದರು. ಅದರಲ್ಲೂ ಈಗಾಗಲೇ ಮನೆಗೊಬ್ಬ ಗಂಡು ಮಗುವಾಗಿ ದಿ. ಚಿರು ಸರ್ಜಾ ಹಾಗೂ ನಟಿ ಮೇಘನಾ ಸರ್ಜಾ ಪುತ್ರ ರಾಯನ್ ಸರ್ಜಾ ಇರೋದರಿಂದ ಹೆಣ್ಣು ಮಗುವೇ ಆಗಬೇಕೆಂದು ಧ್ರುವ್ ಸರ್ಜಾ ನೀರಿಕ್ಷಿಸಿದ್ದರು. ಕೊನೆಗೂ ಧ್ರುವ್ ಸರ್ಜಾ ಆಸೆಯಂತೆ ಹೆಣ್ಣು‌ಮಗು ಜನಿಸಿದೆ. ಇದೇ ಹೊತ್ತಿನಲ್ಲಿ ತಮ್ಮ ಖುಷಿ ಹಂಚಿಕೊಂಡ ಧ್ರುವ ಸರ್ಜಾ ಎಲ್ಲ ದಂಪತಿಗಳಿಗೆ ಕಿವಿ ಮಾತು ಹೇಳಿದ್ದಾರೆ.

ಹೆಣ್ಣು ಮಕ್ಕಳ ಸಹಜವಾಗಿಯೇ ತುಂಬ ಗೌರವ ಇತ್ತು. ಆದರೆ ಈಗ ಹೆಣ್ಣುಮಕ್ಕಳು ಎದುರಿಸುವ ಸ್ಥಿತಿಯನ್ನು ಕಂಡು ಈ ಗೌರವ ಇಮ್ಮಡಿಸಿದೆ. ಯಾರಿಗೆ ಆಗಲಿ ಈ ಸಂದರ್ಭದಲ್ಲಿ ನಾನೊಂದು ಕಿವಿ ಮಾತು ಹೇಳಲು ಬಯಸುತ್ತೇನೆ. ಎಲ್ಲರ ಬದುಕಿನಲ್ಲೂ ಏರಿಳಿತಗಳು ಇರುತ್ತವೆ. ಅಬಾರ್ಷನ್ ಆಗಿರುತ್ತೆ. ಏನೇನೋ ಕಾಂಪ್ಲಿಕೇಶನ್ ಇರುತ್ತೆ. ಆದರೆ ಇದಕ್ಕೆಲ್ಲ ಕುಗ್ಗಬೇಡಿ ಎಂದು ನಾನು ಹೇಳಲು ಇಷ್ಟ ಪಡುತ್ತೇನೆ. ಯಾಕೆಂದರೇ ಇಂತಹ ಸಂಗತಿಗಳು ನಮ್ಮ ಬದುಕಿನಲ್ಲೂ ಇದ್ದವು.

ಆದರೆ ನಮಗೆ ಒಬ್ಬ ಒಳ್ಳೆಯ ಡಾಕ್ಟರ್ ಡಾ.ಮಾಧುರಿಯವರ ಮಾರ್ಗದರ್ಶನ ಸಿಕ್ತು. ಆ ವೈದ್ಯರಿಗೂ ನಾನು ಧನ್ಯವಾದ ಹೇಳುತ್ತೇನೆ. ಈಗ ಕಹಿ‌ ವಿಚಾರಗಳೆಲ್ಲ ಯಾಕೆ ಬಿಡಿ. ನನ್ನ ಆಸೆಯಂತೆ ಅಜ್ಜಿ ಮನೆಗೆ ಹಿಂತಿರುಗಿ ಬಂದಿದ್ದಾರೆ. ಅದಕ್ಕೆ ನನಗೆ ಖುಷಿಯಾಗಿದೆ. ಆ ಖುಷಿಯನ್ನು ಹೇಳಿಕೊಳ್ಳಲು ಸಾಧ್ಯವಿಲ್ಲ. ಆದರೆ ಈ ಹೊತ್ತಿನಲ್ಲಿ ಅಣ್ಣ ಇಲ್ಲ ಅನ್ನೋ ಕೊರಗು ನನ್ನ ಕಾಡುತ್ತಿದೆ. ಅಂಕಲ್ ಇಲ್ಲ ಆದರೆ ಸದ್ಯದಲ್ಲೇ ಬರುತ್ತಾರೆ. ನಮ್ಮ ಈ ಬ್ಯೂಟಿಫುಲ್ ಜರ್ನಿಯಲ್ಲಿ ಜೊತೆನಿಂತ ಎಲ್ಲರಿವೂ ನಾನು ಋಣಿ ಎಂದು ಭಾವನಾತ್ಮಕವಾಗಿ ಧ್ರುವ ಸರ್ಜಾ ಮಾತನಾಡಿದ್ದು ಬೈಟ್ ಎಲ್ಲೆಡೆ ವೈರಲ್ ಆಗಿದೆ.

ಮೂಲಗಳ ಮಾಹಿತಿ ಪ್ರಕಾರ ಪ್ರೇರಣಾಗೆ ಇದಕ್ಕೂ‌ಮೊದಲು ಒಂದು ಭಾರಿ ಅಬಾರ್ಷನ್ ಆಗಿದ್ದು ಇದರಿಂದ ಧ್ರುವ ಹಾಗೂ ಪ್ರೇರಣಾ ನಿರಾಸೆಗೊಂಡಿದ್ದರಂತೆ. ಇದೇ ವೇಳೆ ಪ್ರೇರಣಾ ಹೆರಿಗೆ ವೇಳೆ ಆಸ್ಪತ್ರೆಯಲ್ಲೇ ಇದ್ದ ನಟಿ ಮೇಘನಾ ಸರ್ಜಾ ಮನೆಗೊಂದು ಹೆಣ್ಣು ಮಗು ಬಂದಿದ್ದ ಕ್ಕೆ ಖುಷಿಯಾಗಿದೆ. ತಾಯಿ ಮಗು ಆರೋಗ್ಯವಾಗಿದ್ದಾರೆ ಎಂದರು.

ಇದನ್ನೂ ಓದಿ : Prerana Sarja baby girl : ಸರ್ಜಾ ಮನೆಗೆ ಮಹಾಲಕ್ಷ್ಮಿ: ಹೆಣ್ಣುಮಗುವಿಗೆ ಜನ್ಮನೀಡಿದ ಧ್ರುವ ಸರ್ಜಾ ಪತ್ನಿ ಪ್ರೇರಣಾ

ಇದನ್ನೂ ಓದಿ : Kantara : ಕಾಂತಾರ ಸಿನಿಮಾ ನೋಡುತ್ತಿದ್ದ ಮಹಿಳೆಯ ಮೇಲೆ ದೈವ ಆವಾಹನೆ

Prerana Sarja birth to baby girl What Dhruva Sarja say about her daughter

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular