Ponnian Selvam : ಕಲೆಕ್ಷನ್‌ ವಿಚಾರದಲ್ಲಿ ದಾಖಲೆ ಬರೆದ ಪೊನ್ನಿಯನ್‌ ಸೆಲ್ವಂ ಗಳಿಸಿದ್ದೆಷ್ಟು ಗೊತ್ತಾ ?

ಮಣಿರತ್ನಂ ನಿರ್ದೇಶನದ ಪೊನ್ನಿಯನ್‌ ಸೆಲ್ವಂ (Ponnian Selvam) ತೆರೆಕಂಡು ದಾಖಲೆಯ ಕಲೆಕ್ಷನ್‌ ಕಾಣುತ್ತಿದೆ. ಕಲ್ಕಿ ಕೃಷ್ಣಮೂರ್ತಿ ಆಧಾರಿತ ಪೊನ್ನಿಯನ್‌ ಸೆಲ್ವಂ ಚಿತ್ರವನ್ನು ಮಣಿರತ್ನಂ ಹಾಗೂ ಸುಭಾಸ್ಕರನ್‌ ಅಲ್ಲಿರಾಜ ನಿರ್ಮಾಣಮಾಡಿದ್ದಾರೆ. ಚಿಯಾನ್‌ ವಿಕ್ರಂ, ಐಶ್ವರ್ಯಾ ರೈ ಬಚ್ಚನ್‌, ಜಯಂ ರವಿ, ಕಾರ್ತಿ, ತ್ರಿಷಾ ಸೇರಿದತೆ ಬಹುತಾರಾ ಬಳಗವಿರುವ ಚಿತ್ರ ಪೊನ್ನಿಯನ್‌ ಸೆಲ್ವಂ ರಿಲೀಸ್‌ ಆಗಿ ಬಹಳಷ್ಟು ಸದ್ದು ಮಾಡುತ್ತಿದೆ.

ರಿಲೀಸ್‌ಗೂ ಮೊದಲೇ 15 ಕೋಟಿ ರೂಪಾಯಿಗೂ ಅಧಿಕ ಅಡ್ವಾನ್ಸ್‌ ಬುಕ್‌ ಆಗಿ ಬಹಳಷ್ಟು ಸದ್ದು ಮಾಡಿದ್ದ ಮುನಿರತ್ನಂ ಕನಸಿನ ಸಿನೆಮಾ ಬಿಡುಗಡೆ ಕಂಡ ಮೊದಲ ದಿನವೇ ಪ್ರಪಂಚದಾದ್ಯಂತ 80 ಕೋಟಿ ದಾಖಲೆ ಮೊತ್ತದ ಕಲೆಕ್ಷನ್‌ ಮಾಡಿದೆ. ಧಾರಾವಾಹಿ ಯಾಗಿ ಕಿರುತೆರೆಯಲ್ಲಿ ಸಂಚಲನ ಮೂಡಿಸಿದ್ದ, ಪೊನ್ನಿಯನ್‌ ಸೆಲ್ವಂ ಈಗ ಸಿನಿಮಾವಾಗಿ ಪ್ರೇಕ್ಷಕನ ಮುಂದೆ ಲಗ್ಗೆಯಿಟ್ಟು ಯಶಸ್ಸು ಕಂಡಿದೆ.

ಚೋಳ ಸಾಮ್ರಾಜ್ಯವನ್ನು ಉರುಳಿಸಲು‌ ಕರಿಕಾಲನ್ ಮಾಜಿ ಗೆಳತಿ ನಂದಿನಿಯೊಂದಿಗೆ ಯಶಸ್ವಿ ಆಗುತ್ತಾನೋ ಇಲ್ಲವೋ ಅನ್ನೋದು ಪೊನ್ನಿಯನ್‌ ಸೆಲ್ವಂ (Ponnian Selvam)1ರಲ್ಲಿ ಹೇಳಲಾಗಿದೆ. ಮದ್ರಾಸ್‌ ಟಾಕೀಸ್‌ ಹಾಗೂ ಲೈಕಾ ಪ್ರೊಡಕ್ಷನ್‌ ಅಡಿಯಲ್ಲಿ ಸಿನಿಮಾ ಮೂಡಿಬಂದಿದ್ದು ಸಿನಿಮಾಗೆ ಎ ಆರ್‌ ರೆಹಮಾನ್‌ ಸಂಗೀತ ಮತ್ತಷ್ಟು ಪುಷ್ಟಿ ನೀಡಿದ್ದು, ಚಿತ್ರಕ್ಕೆ ರವಿ ವರ್ಮನ್‌ ಛಾಯಗ್ರಹಣವಿದೆ.

ಸಿನಿಮಾದ ಕಲೆಕ್ಷನ್‌ ಕುರಿತಂತೆ ಸಿನಿಮಾ ತಂಡವೇ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಹೇಳಿಕೊಂಡಿದ್ದು ಸಿನಿಮಾ 80 ಕೋಟಿಯ ಬ್ರಹತ್‌ ಮೊತ್ತವನ್ನು ದಾಖಲಿಸಿದೆ. ಇನ್ನೂ ತಮಿಳಿನಲ್ಲಿ ಅಜಿತ್‌ ಅಭಿನಯದ ವಾಲಿಮೈ , ವಿಜಯ್‌ ಅಭಿನಯದ ಬೀಷ್ಟ್‌ ಚಿತ್ರದ ನಂತರದ ಸ್ಥಾನವನ್ನು ಪೊನ್ನಿಯನ್‌ ಸೆಲ್ವಂ ಚಿತ್ರ ಪಡೆದುಕೊಂಡಿದೆ.

ಇದನ್ನೂ ಓದಿ : ಸರ್ಜಾ ಮನೆಗೆ ಮಹಾಲಕ್ಷ್ಮಿ: ಹೆಣ್ಣುಮಗುವಿಗೆ ಜನ್ಮನೀಡಿದ ಧ್ರುವ ಸರ್ಜಾ ಪತ್ನಿ ಪ್ರೇರಣಾ

ಇದನ್ನೂ ಓದಿ : ಕಾಂತಾರ ಸಿನಿಮಾ ನೋಡುತ್ತಿದ್ದ ಮಹಿಳೆಯ ಮೇಲೆ ದೈವ ಆವಾಹನೆ

ಇದನ್ನೂ ಓದಿ : ಒಂದು ಮಗುವಿಗಾಗಿ ಹಂಬಲಿಸಿದ್ರಾ ಧ್ರುವ ಸರ್ಜಾ ಪ್ರೇರಣಾ ದಂಪತಿ ! ಆಕ್ಷ್ಯನ್ ಪ್ರಿನ್ಸ್ ಬಿಚ್ಚಿಟ್ರು ಅಸಲಿ‌ನೋವು

ಇನ್ನು ಕನ್ನಡದಲ್ಲಿಯೂ ಚಿತ್ರ ರಿಲೀಸ್ ಆಗಿದ್ದು ಕಾಂತಾರದ ಅಬ್ಬರ ದಿಂದಾಗಿ ಕೆಲ ಥಿಯೇಟರ್‌ ಗಳಲ್ಲಿ ಪೊನ್ನಿಯನ್‌ ಸೆಲ್ವಂ ಕೈಬಿಟ್ಟು ಕಾಂತಾರವನ್ನು ಪ್ರದರ್ಶಿಸಲಾಗುತ್ತಿದೆ. ಸಿನಿಮಾದಲ್ಲಿ ಬಹಳಷ್ಟು ಸಸ್ಪೆನ್ಸ್‌ ಥ್ರಿಲ್ಲರ್‌ ಇಲ್ಲದಿದ್ದರೂ ಒಮ್ಮೆ ನೋಡಬಹುದಾಗಿದೆ. ಒಟ್ಟಾರೆಯಾಗಿ 1955ರ ಕಾದಂಬರಿ ಆಧಾರಿತ ಸಿನಿಮಾ ಇದೀಗ ಪ್ರೇಕ್ಷಕನ ಮೆಚ್ಚುಗೆಗೆ ಪಾತ್ರವಾಗುತ್ತಿದೆ

Do you know how much Ponniyan Selvam earned in terms of collection?.

Comments are closed.