Football match:ಫುಟ್ಬಾಲ್‌ ಪಂದ್ಯದಲ್ಲಿ ಕಾಲ್ತುಳಿತಕ್ಕೆ 127 ಮಂದಿ ದುರ್ಮರಣ

ಜಕಾರ್ತ: ( Football match)ಇಂಡೋನೇಷ್ಯಾದ ಪೂರ್ವ ಜಾವಾ ಪ್ರಾಂತ್ಯದಲ್ಲಿ ಫುಟ್ಬಾಲ್‌ ಪಂದ್ಯದ ವೇಳೆಯಲ್ಲಿ ನಡೆದ ಘರ್ಷಣೆಯಿಂದಾಗಿ 127 ಜನರು ಸಾವನ್ನಪ್ಪಿದ್ದು,180 ಜನ ಗಾಯಗೊಂಡಿದ್ದಾರೆ. ಪಂದ್ಯ ವೀಕ್ಷಿಸಲು ಬಂದ ಪ್ರೇಕ್ಷಕರಿಂದ ನೂಕುನುಗ್ಗಲು ಉಂಟಾಗಿರುವುದರಿಂದ ಇಂತಹ ದುರ್ಘಟನೆ ಸಂಭವಿಸಿರುವ ಕುರಿತು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಇಂಡೋನೇಷ್ಯಾದ ಕ್ರೀಡಾಂಗಣದಲ್ಲಿ ಅರೆಮಾ ಎಫ್‌ಸಿ ಮತ್ತು ಪರ್ಸೆಬಾಯ್‌ ಕ್ಲಬ್‌ ನಡುವೆ ಫುಟ್ಬಾಲ್‌ ಪಂದ್ಯ ಎರ್ಪಡಿಸಲಾಗಿತ್ತು. ಸ್ಟೇಡಿಯಂನ ಸುತ್ತಲೂ ಎರಡು ತಂಡದ ಬೆಂಬಲಿಗರ ಜನಸಾಗರವೇ ಹರಿದಿತ್ತು. ಈ ಪಂದ್ಯದಲ್ಲಿ ಅರೆಮಾ ತಂಡ 2-3 ಅಂತರದಲ್ಲಿ ಸೋಲನ್ನು ಅನುಭವಿಸಿತ್ತು. ಈ ಕಾರಣದಿಂದ ಅಭಿಮಾನಿಗಳ ನಡುವೆ ಕಾದಾಟ ಶುರುವಾಗಿ ಗ್ರೌಂಡ್‌ ಗೆ ಇಳಿದು ಹೊಡೆದಾಡಿಕೊಂಡಿದ್ದಾರೆ. ಗಲಭೆ ಉಲ್ಬಣಗೊಲ್ಲುತ್ತಿದ್ದಂತೆ ಪೋಲಿಸರು ಅಶ್ರುವಾಯು ಹಾರಿಸಿ ಮತ್ತು ಲಾಠಿಚಾರ್ಜ್ ಮಾಡಿ ನಿಯಂತ್ರಿಸಲು ಪ್ರಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ನೂಕುನುಗ್ಗಲು ಉಂಟಾಗಿ ಹಲವಾರು ಜನರು ಸಾವನ್ನಪ್ಪಿದ್ದಾರೆ.

ಇಂಡೋನೇಷ್ಯಾದ ಕ್ರೀಡಾ ಮತ್ತು ಯುವ ಸಚಿವ ಜೈನುದ್ದಿನ್‌ ಅಮಾಲಿ ಬ್ರಾಡ್ಕಾಸ್ಟರ್‌ ಕೊಪಸ್ಗೆ ಈ ಘಟನೆಯ ಕುರಿತು ವಿಷಾದವನ್ನು ವ್ಯಕ್ತಪಡಿಸಿದ್ದಾರೆ. ಫುಟ್ ಬಾಲ್‌ ಪಂದ್ಯವನ್ನು ವೀಕ್ಷಿಸುವ ಸಂದರ್ಭದಲ್ಲಿ ಈ ಘಟನೆ ನಡೆದಿರುವುದು ಫುಟ್‌ ಬಾಲ್‌ ಕ್ರೀಡಾಸ್ಫೂರ್ತಿಗೆ ಧಕ್ಕೆ ತರುವಂತಹ ಘಟನೆ ಎಂದು ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ಇದನ್ನೂ ಓದಿ : International non-violence day:ಅಂತರಾಷ್ಟ್ರೀಯ ಅಹಿಂಸಾ ದಿನಾಚರಣೆ : ವಿಶ್ವಕ್ಕೆ ಮಾದರಿಯಾಯ್ತು ಗಾಂಧೀಜಿ ಪರಿಕಲ್ಪನೆ

ಇದನ್ನೂ ಓದಿ:Kantara : ಕಾಂತಾರ ಸಿನಿಮಾ ನೋಡುತ್ತಿದ್ದ ಮಹಿಳೆಯ ಮೇಲೆ ದೈವ ಆವಾಹನೆ

ಇದನ್ನೂ ಓದಿ:Zaid Khan : ನನಗೂ ನನ್ನ ಅಪ್ಪನಿಗೆ ಸಂಬಂಧವಿಲ್ಲ ಎಂದ ಝೈದ್ ಖಾನ್‌ : ಟ್ರೋಲ್‌ ಆದ ಜಮೀರ್‌ ಖಾನ್ ಪುತ್ರ

ಇದನ್ನೂ ಓದಿ:Prerana Sarja baby girl : ಸರ್ಜಾ ಮನೆಗೆ ಮಹಾಲಕ್ಷ್ಮಿ: ಹೆಣ್ಣುಮಗುವಿಗೆ ಜನ್ಮನೀಡಿದ ಧ್ರುವ ಸರ್ಜಾ ಪತ್ನಿ ಪ್ರೇರಣಾ

ಈ ದುರಂತದ ಬಳಿಕ ಇಡೋನೇಷ್ಯಾದಲ್ಲಿ ನಡೆಯುತ್ತಿರುವ BRI LIGA 1 ಎಲ್ಲಾ ಪಂದ್ಯಗಳನ್ನು ವಜಾಗೊಳಿಸಲಾಗಿದೆ. ಇಂಡೋನೇಷ್ಯಾದ ಸರ್ಕಾರವು ಕೂಡ ಈ ಘಟನೆಯ ಕುರಿತು ಕ್ಷಮೆಯಾಚಿಸಿದೆ. ಕೂಡಲೇ ಇದರ ಕುರಿತು ತನಿಖೆ ಮಾಡುವುದಾಗಿ ಭರವಸೆ ನೀಡಿದೆ.

Indonesia football match :127 people died due to stampede

Comments are closed.