Priyanka Chopra’s Diwali Celebration : ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಸದ್ಯ ತಮ್ಮ ತಾಯ್ತನವನ್ನು ಎಂಜಾಯ್ ಮಾಡುತ್ತಿದ್ದಾರೆ. ಇನ್ಸ್ಟಾಗ್ರಾಂನಲ್ಲಿ 83 ಮಿಲಿಯನ್ಗೂ ಅಧಿಕ ಫಾಲೋವರ್ಸ್ ಹೊಂದಿರುವ ಪ್ರಿಯಾಂಕಾ ಚೋಪ್ರಾ ತಮ್ಮ ಜೀವನದ ಬಹುತೇಕ ಅಪ್ಡೇಟ್ಸ್ಗಳನ್ನು ಇನ್ಸ್ಟಾ ಖಾತೆಯಲ್ಲಿ ಶೇರ್ ಮಾಡುತ್ತಲೇ ಇರ್ತಾರೆ. ವಿದೇಶದಲ್ಲಿದ್ದರೂ ಸಹ ಪ್ರಿಯಾಂಕಾ ಚೋಪ್ರಾ ತಮ್ಮ ಭಾರತೀಯತೆಯನ್ನು ಬಿಟ್ಟುಕೊಟ್ಟಿಲ್ಲ ಎಂಬುದು ಅವರ ಬಹುತೇಕ ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕವೇ ತಿಳಿಯುತ್ತೆ. ಈ ಮಾತಿಗೆ ಮತ್ತೊಂದು ಉದಾಹರಣೆ ಎಂಬಂತೆ ಪ್ರಿಯಾಂಕಾ ಚೋಪ್ರಾ ಇದೀಗ ದೀಪಾವಳಿಯನ್ನು ತಾವು ಆಚರಿಸಿರುವ ಫೋಟೋಗಳನ್ನು ಶೇರ್ ಮಾಡಿದ್ದಾರೆ.
ಪತಿ ನಿಕ್ ಜೋನಾಸ್, ತಾಯಿ ಮಧು ಚೋಪ್ರಾ ಹಾಗೂ ಪುತ್ರಿ ಮಾಲತಿ ಮೇರಿ ಚೋಪ್ರಾ ಜೋನಸ್ ಜೊತೆಯಲ್ಲಿ ಈ ಬಾರಿ ನಟಿ ಪ್ರಿಯಾಂಕಾ ಚೋಪ್ರಾ ದೀಪಾವಳಿಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಿದ್ದಾರೆ. ಹಬ್ಬದ ದಿನದಂದು ಕ್ಲಿಕ್ಕಿಸಿದ ಕೆಲವು ಸುಂದರ ಕ್ಷಣಗಳ ಫೋಟೋವನ್ನು ಪ್ರಿಯಾಂಕಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಫೋಟೋಗಳಲ್ಲಿ ಇರುವ ತಿನಿಸುಗಳನ್ನು ನೀವು ಒಮ್ಮೆ ಗಮನಿಸಿದರೆ ಸಾಕು ಪ್ರಿಯಾಂಕಾ ಚೋಪ್ರಾ ದೇಸಿ ಮೀಲ್ಸ್ನ್ನು ಎಷ್ಟು ಇಷ್ಟ ಪಡ್ತಾರೆ ಅನ್ನೋದಕ್ಕೆ ಬೇರೆ ಉದಾಹರಣೆ ಬೇಕಾಗೋದಿಲ್ಲ.
ಪ್ರಿಯಾಂಕಾ ಚೋಪ್ರಾ ಶೇರ್ ಮಾಡಿರುವ ಫೋಟೋಗಳನ್ನು ದೋಕ್ಲಾ, ಬೋಂಡಾ ಸೇರಿದಂತೆ ಸಾಕಷ್ಟು ತಿನಿಸುಗಳನ್ನು ಕಾಣಬಹುದಾಗಿದೆ. ಮತ್ತೊಂದು ಫೊಟೋದಲ್ಲಿ ದೀಪಾವಳಿ ಹಬ್ಬಕ್ಕೆಂದು ನಿಕ್ ಹಾಗೂ ಪ್ರಿಯಾಂಕಾ ತಮ್ಮ ಮಗುವಿನ ಜೊತೆಯಲ್ಲಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ದನ್ನು ಕಾಣಬಹುದಾಗಿದೆ. ಈ ಎಲ್ಲಾ ಫೋಟೋಗಳಲ್ಲಿ ಪ್ರಿಯಾಂಕಾ ಚೋಪ್ರಾ ತಮ್ಮ ಪುತ್ರಿ ಮಾಲತಿ ಮೇರಿ ಜೊತೆಯಲ್ಲಿ ಕಾಣಿಸಿಕೊಂಡರೂ ಸಹ ಮಗುವಿನ ಮುಖದ ಮೇಲೆ ಬಿಳಿ ಬಣ್ಣದ ಹಾರ್ಟ್ ಇಮೋಜಿಯನ್ನು ಹಾಕುವ ಮೂಲಕ ಪುತ್ರಿಯ ಮುಖವನ್ನು ಮುಚ್ಚಿದ್ದಾರೆ. ಈ ಮೂಲಕ ಪ್ರಿಯಾಂಕಾ ಚೋಪ್ರಾ ಮಗು ಹೇಗಿರಬಹುದು ಎಂಬ ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.
ಇದನ್ನೂ ಓದಿ : India vs Netherland: ಟಿ20 ವಿಶ್ವಕಪ್: ಭಾರತಕ್ಕೆ ನಾಳೆ ನೆದರ್ಲೆಂಡ್ಸ್ ಎದುರಾಳಿ, ಇಲ್ಲಿದೆ ಪಂದ್ಯದ ಪಿನ್ ಟು ಪಿನ್ ಡೀಟೇಲ್ಸ್
Priyanka Chopra’s Diwali Celebration In The US Featured Food, Family And Fashion