Rajinikanth Reviews ‘Kantara’:‘ಕಾಂತಾರ’ ಭಾರತೀಯ ಸಿನಿರಂಗದ ಮಾಸ್ಟರ್​ ಪೀಸ್​ ಸಿನಿಮಾ : ತಲೈವಾ ರಜನಿಕಾಂತ್​​

Rajinikanth Reviews ‘Kantara’ : ಚಿತ್ರರಂಗದಲ್ಲಿಯೇ ದೊಡ್ಡ ಮಟ್ಟದ ಸದ್ದನ್ನು ಮಾಡುತ್ತಿದೆ. ಮನುಷ್ಯ ಹಾಗೂ ಪ್ರಕೃತಿಯ ನಡುವಿನ ಸಂಘರ್ಷದ ಕತೆ ಇದಾಗಿದೆ. ಸಂಪೂರ್ಣ ಕರಾವಳಿ ಭಾಗದ ಸಂಸ್ಕೃತಿಯನ್ನು ಬಿಂಬಿಸಿರುವ ಈ ಸಿನಿಮಾ ಇದೀಗ ಪ್ರತಿಯೊಬ್ಬ ಸಿನಿ ರಸಿಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಭಾರತೀಯ ಚಿತ್ರರಂಗದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದ್ದ ನಟ ಯಶ್​ ನಟನೆಯ ಕೆಜಿಎಫ್​ 2 ಸಿನಿಮಾದ ದಾಖಲೆಗಳನ್ನೂ ಉಡೀಸ್​ ಮಾಡುತ್ತಿರುವ ಕಾಂತಾರ ಸಿನಿಮಾ ತನ್ನ ನಾಗಾಲೋಟವನ್ನು ಮುಂದುವರಿಸಿದೆ.


ಕಾಂತಾರ ಸಿನಿಮಾವನ್ನು ನಿರ್ದೇಶಿಸಿ ನಟಿಸಿದ ರಿಷಭ್​ ಶೆಟ್ಟಿಯ ಪರ್ಫಾಮೆನ್ಸ್​ ಬಗ್ಗೆ ಅಭಿಮಾನಿಗಳ ಜೊತೆಯಲ್ಲಿ ದೊಡ್ಡ ದೊಡ್ಡ ಸೆಲೆಬ್ರಿಟಿಗಳಲ್ಲಿಯೂ ಮೆಚ್ಚುಗೆಯ ಮಾತು ಕೇಳಿ ಬರ್ತಿದೆ. ಬಾಲಿವುಡ್​ ನಟಿ ಕಂಗನಾ ರಣಾವತ್​ , ನಟಿ ಶಿಲ್ಪಾ ಶೆಟ್ಟಿ, ನಟ ಪ್ರಭಾಸ್​​ ಬಳಿಕ ಇದೀಗ ಮೆಗಾಸ್ಟಾರ್​ ರಜನಿಕಾಂತ್​ ಕಾಂತಾರಾ ಸಿನಿಮಾವನ್ನು ಹಾಡಿ ಹೊಗಳಿದ್ದಾರೆ. ರಿಷಭ್​ ಶೆಟ್ಟಿ ನಟನೆಯ ಈ ಸಿನಿಮಾದ ಬಗ್ಗೆ ಟ್ವಿಟರ್​ನಲ್ಲಿ ಅನುಭವ ಹಂಚಿಕೊಂಡ ತಲೈವಾ ರಜನಿಕಾಂತ್​​ ಈ ಸಿನಿಮಾವನ್ನು ನೋಡಿದ ನನ್ನ ಮೈ ರೋಮಾಂಚನಗೊಂಡಿತ್ತು ಎಂದು ಬರೆದುಕೊಂಡಿದ್ದಾರೆ.


ತಿಳಿದುಕೊಂಡಿರುವುದಕ್ಕಿಂತ ತಿಳಿದುಕೊಳ್ಳದೇ ಇರುವ ವಿಚಾರಗಳೇ ಹೆಚ್ಚು ಎಂದು ರಜನಿಕಾಂತ್​​ ಬರೆದಿದ್ದಾರೆ. ಹೊಂಬಾಳೆ ಫಿಲ್ಮಂ ಹಾಗೂ ಕಾಂತಾರಾ ಸಿನಿಮಾ ನನ್ನ ಮೈ ರೋಮಾಂಚನಗೊಳಿಸಿದೆ. ಒಬ್ಬ ಬರಹಗಾರ, ನಿರ್ದೇಶಕ ಹಾಗೂ ನಟನಾಗಿ ರಿಷಭ್​ ಶೆಟ್ಟಿಯ ಕಾರ್ಯವೈಖರಿಗೆ ನನ್ನ ಹ್ಯಾಟ್ಸಾಫ್​​. ಇಡೀ ಚಿತ್ರ ತಂಡಕ್ಕೆ ನನ್ನ ಅಭಿನಂದನೆಗಳು. ಭಾರತೀಯ ಚಿತ್ರರಂಗದಲ್ಲಿಯೇ ಇದೊಂದು ಮಾಸ್ಟರ್​ಪೀಸ್​ ಸಿನಿಮಾ ಎಂದು ರಜನಿಕಾಂತ್​​ ಬರೆದುಕೊಂಡಿದ್ದಾರೆ.


ಕಾಂತಾರ ಸಿನಿಮಾ ವಿಶ್ವಾದ್ಯಂತ 211.5 ಕೋಟಿ ರೂಪಾಯಿಗಳನ್ನು ಬಾಕ್ಸಾಫೀಸಿನಲ್ಲಿ ದೋಚಿದೆ. ಅಲ್ಲದೇ ಸಿನಿಮಾದ ಕಲೆಕ್ಷನ್​ ಏರಿಕೆಯಾಗುತ್ತಲೇ ಇದೆ. ಈ ಮೂಲಕ ಕಾಂತಾರ ಸಿನಿಮಾ ಸಾರ್ವಕಾಲಿಕವಾಕಿ ಅತೀ ಹೆಚ್ಚು ಗಳಿಕೆ ಮಾಡಿದ ಕನ್ನಡ ಚಿತ್ರದ ಪಟ್ಟಿಯಲ್ಲಿ ಅಗ್ರಗಣ್ಯ ಸ್ಥಾನದಲ್ಲಿದೆ.

ಇದನ್ನು ಓದಿ : India vs Netherland: ಟಿ20 ವಿಶ್ವಕಪ್: ಭಾರತಕ್ಕೆ ನಾಳೆ ನೆದರ್ಲೆಂಡ್ಸ್ ಎದುರಾಳಿ, ಇಲ್ಲಿದೆ ಪಂದ್ಯದ ಪಿನ್ ಟು ಪಿನ್ ಡೀಟೇಲ್ಸ್

ಇದನ್ನೂ ಓದಿ : Priyanka Chopra’s Diwali Celebration :ಪುತ್ರಿಯ ಜೊತೆಯಲ್ಲಿ ದೀಪಾವಳಿ ಹಬ್ಬವನ್ನಾಚರಿಸಿ ಫೋಟೋ ಹಂಚಿಕೊಂಡ ಪ್ರಿಯಾಂಕ ಚೋಪ್ರಾ

Rajinikanth Reviews ‘Kantara’; Calls Rishab Shetty’s Film A ‘Masterpiece In Indian Cinema’

Comments are closed.