Ram Mandir in Ayodhya:2024ರ ಜನವರಿಯಿಂದ ಅಯೋಧ್ಯೆಯ ರಾಮ ಮಂದಿರ ಭಕ್ತರ ಪ್ರವೇಶಕ್ಕೆ ಮುಕ್ತ

ಉತ್ತರ ಪ್ರದೇಶ : Ram Mandir in Ayodhya : ರಾಮ ಜನ್ಮಭೂಮಿ ಅಯೋಧ್ಯೆಯ ರಾಮ ಮಂದಿರದಲ್ಲಿ ದೇವರ ವಿಗ್ರಹಗಳನ್ನು ಪ್ರತಿಷ್ಠಾಪನೆ ಮಾಡಿದ ಬಳಿಕ 2024ರ ಜನವರಿ ತಿಂಗಳಿನಿಂದ ಭಕ್ತರಿಗೆ ದೇವರ ದರ್ಶನಕ್ಕೆ ಮುಕ್ತ ಮಾಡಲಾಗುತ್ತದೆ ಎಂದು ರಾಮ ಮಂದಿರ ನಿರ್ಮಾಣದ ಮೇಲ್ವಿಚಾರಣೆಗೆಂದು ಸ್ಥಾಪಿಸಲಾದ ಟ್ರಸ್ಟ್​ನ ಪ್ರಮುಖ ಸದಸ್ಯರು ಅಧಿಕೃತ ಮಾಹಿತಿ ನೀಡಿದ್ದಾರೆ. ದೇಗುಲ ನಿರ್ಮಾಣ ಕಾಮಗಾರಿ ಶೇಕಡಾ 50ರಷ್ಟು ಪೂರ್ಣಗೊಂಡಿದೆ. ಮಂದಿರ ನಿರ್ಮಾಣದ ಒಟ್ಟಾರೆ ಪ್ರಗತಿ ತೃಪ್ತಿಕರವಾಗಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಮಾಹಿತಿಯನ್ನು ನೀಡಿದೆ.


ಮಕರ ಸಂಕ್ರಾಂತಿಯ ದಿನದಂದು ದೇಗುಲದ ಗರ್ಭಗುಡಿಯಲ್ಲಿ ರಾಮನ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿದ ಬಳಿಕ 2024ರ ಜನವರಿ ತಿಂಗಳಿನಿಂದ ದೇಗುಲವನ್ನು ಭಕ್ತರ ದರ್ಶನಕ್ಕೆ ತೆರೆಯಲಾಗುತ್ತದೆ ಎಂದು ಟ್ರಸ್ಟ್​ನ ಪ್ರಧಾನ ಕಾರ್ಯದರ್ಶಿ ಚಂಪತ್​ ರಾಯ್​ ಹೇಳಿದ್ದಾರೆ. ಮುಂದಿನ ವರ್ಷದ ಡಿಸೆಂಬರ್​ ವೇಳೆಗೆ ದೇಗುಲದ ನೆಲ ಮಹಡಿ ಸಿದ್ಧಗೊಳ್ಳಲಿದೆ. 2024ರ ಜನವರಿ 14ರ ಸುಮಾರಿಗೆ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.


ರಾಮ ಮಂದಿರ ನಿರ್ಮಾಣಕ್ಕೆ ಅಂದಾಜು 1800 ಕೋಟಿ ರೂಪಾಯಿ ವೆಚ್ಚ ಮಾಡಲಾಗುವುದು ಎಂದು ಚಂಪತ್​ ರಾಯ್​ ಹೇಳಿದರು. ಪ್ರಮುಖ ಹಿಂದೂ ಧರ್ಮದರ್ಶಿಗಳ ವಿಗ್ರಹಗಳನ್ನು ಪ್ರತಿಷ್ಠಾಪನೆ ಮಾಡಲು ಸ್ಥಳಾವಕಾಶ ಕಲ್ಪಿಸುತ್ತೇವೆ ಎಂದು ಹೇಳಿದ್ದಾರೆ. ಭಾನುವಾರದಂದು ಪ್ರಧಾನಿ ನರೇಂದ್ರ ಮೋದಿ ದೇವಾಲಯದ ನಿರ್ಮಾಣ ಕಾರ್ಯದ ಪ್ರಗತಿ ಪರಿಶೀಲನೆ ಮಾಡಿದ್ದರು. 2020ರ ಆಗಸ್ಟ್​ ಐದರಂದು ಪ್ರಧಾನಿ ಮೋದಿ ದೇವಾಲಯಕ್ಕೆ ಭೂಮಿ ಪೂಜೆ ಮಾಡಿದ್ದರು.


2019ರ ನವೆಂಬರ್​ 9ರಂದು ಸುಪ್ರೀಂ ಕೋರ್ಟ್ ನೀಡಿದ ಐತಿಹಾಸಿ ತೀರ್ಪು ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಾಣ ಮಾಡಲು ದಾರಿ ಮಾಡಿಕೊಟ್ಟಿತ್ತು. ರಾಮ ಮಂದಿರ ಸುತ್ತಲಿನ 70 ಎಕರೆ ಪ್ರದೇಶದಲ್ಲಿ ವಾಲ್ಮೀಕಿ, ಕೇವತ್​ , ಶಬರಿ, ಜಟಾಯು, ಸೀತಾ, ಗಣೇಶ ಹಾಗೂ ಲಕ್ಷ್ಮಣ ದೇವಾಲಯಗಳನ್ನು ನಿರ್ಮಿಸಲಾಗುತ್ತಿದೆ.


ದೇವಾಲಯದ ವಿಸ್ತೀರ್ಣ ಹಾಗೂ ಅದರ ಪ್ರಾಂಗಣದ ಅಳತೆಗಳನ್ನು ಗಮನದಲ್ಲಿಟ್ಟುಕೊಂಡು ಒಟ್ಟು 8 ಎಕರೆ ಜಾಗವನ್ನು ಸುತ್ತುವರಿದು ಆಯಾತಾಕಾರದ ಎರಡು ಅಂತಸ್ತಿನ ಪರಿಕ್ರಮ ರಸ್ತೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ಇದರ ಪೂರ್ವ ಭಾಗದಲ್ಲಿ ಮರಳುಗಲ್ಲಿನಿಂದ ಮಾಡಿದ ಪ್ರವೇಶ ದ್ವಾರ ಇರಲಿದೆ.

ಇದನ್ನು ಓದಿ : LIC HFL Vidyadhan Scholarship 2022 : LIC HFL ವಿದ್ಯಾಧನ್ ವಿದ್ಯಾರ್ಥಿವೇತನಕ್ಕೆ ಇಂದೇ ಅರ್ಜಿ ಸಲ್ಲಿಸಿ

ಇದನ್ನೂ ಓದಿ : India Offered Bad Sandwich : ಸಿಡ್ನಿಯಲ್ಲಿ ಭಾರತ ತಂಡಕ್ಕೆ “ಕೆಟ್ಟು ಹೋಗಿದ್ದ ಸ್ಯಾಂಡ್ ವಿಚ್” ನೀಡಿದ ವಿಶ್ವಕಪ್ ಆಯೋಜಕರು, ಐಸಿಸಿಗೆ ದೂರಿತ್ತ ಟೀಮ್ ಇಂಡಿಯಾ

Ram Mandir in Ayodhya will be opened to devotees in January 2024: Shri Ram Janmbhoomi Teerth Kshetra

Comments are closed.