James Pre Release Event : ಜೇಮ್ಸ್ ಫ್ರೀ ರಿಲೀಸ್ ಗೆ ಬಿಗ್ ಇವೆಂಟ್ : ಕಾರ್ಯಕ್ರಮಕ್ಕೆ ಬರ್ತಾರೆ ಚಿರಂಜೀವಿ, ಜ್ಯೂ ಎನ್.ಟಿ.ಆರ್

ಕರುನಾಡನ್ನು ಅಗಲಿ ಹೋದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneeth Raj Kumar) ಅಭಿನಯದ ಕೊನೆ‌ಚಿತ್ರ ಜೇಮ್ಸ್ (James Pre Release Event ) ತೆರೆಗೆ ಬರಲು ಸಿದ್ಧವಾಗಿದೆ. ದೊಡ್ಮನೆ ಮೂರು ನಾಯಕರು ಒಂದಾಗಿ‌ ನಟಿಸಿದ ಈ ಸಿನಿಮಾ‌ ನೋಡಲು ಅಭಿಮಾನಿಗಳು ಕಾದಿದ್ದಾರೆ. ಈ ಮಧ್ಯೆ ಅಪ್ಪು ಇಲ್ಲದೇ ಹೋದರೂ ಅಪ್ಪು ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಮುಂದಾಗಿರೋ ಅಭಿಮಾನಿಗಳ ಮಧ್ಯೆ ಚಿತ್ರತಂಡ ಜೇಮ್ಸ್ ಗೆ ಅದ್ದೂರಿ ಫ್ರೀ ರಿಲೀಸ್ ಇವೆಂಟ್ ಹಮ್ಮಿಕೊಂಡಿದೆ. ಈ ಸಮಾರಂಭಕ್ಕೆ ಅಪ್ಪು ಆಪ್ತರಾದ ಮೆಗಾಸ್ಟಾರ್ ಚಿರಂಜೀವಿ ಹಾಗೂ ಜ್ಯೂನಿಯರ್ ಎನ್ ಟಿ.ಆರ್ ಅತಿಥಿಗಳಾಗಲಿದ್ದಾರಂತೆ.

ಪುನೀತ್ ಇಲ್ಲದೇ ಆಚರಣೆಯಾಗುತ್ತಿರುವ ಅಪ್ಪುವಿನ ಮೊದಲ ಹುಟ್ಟುಹಬ್ಬದಂದು ಅಂದ್ರೇ ಮಾರ್ಚ್ 17 ರಂದು ಜೇಮ್ಸ್ ತೆರೆಗೆ ಬರಲಿದೆ. ಈ ಸಿನಿಮಾದ ಫ್ರೀ ರಿಲೀಸ್ ಇವೆಂಟ್ ನ್ನು ರಾಜ್ಯದ ನಾಲ್ಕು ಪ್ರಮುಖ ನಗರ ಹಾಗೂ ಚೈನೈ, ಹೈದ್ರಾಬಾದ್ ನಲ್ಲಿ ನಡೆಸಲು ಈಗಾಗಲೇ ಚಿತ್ರತಂಡ ನಿರ್ಧರಿಸಿದೆ. ಈ ಮಧ್ಯೆ ಕರ್ನಾಟಕದಲ್ಲಿ ಮೊದಲ ಜೇಮ್ಸ್ ಫ್ರೀ ರಿಲೀಸ್ ಇವೆಂಟ್ ಪುನೀತ್ ರಾಜ್ ಕುಮಾರ್ ರನ್ನು ದೇವರಂತೆ ಪೂಜಿಸುವ ಬಳ್ಳಾರಿಯಿಂದಲೇ ಆಗಲಿದ್ದು ಇದಕ್ಕಾಗಿ ಸಿದ್ಧತೆ ನಡೆದಿದೆ. ಮಾರ್ಚ್ 6 ರಂದು ಜೇಮ್ಸ್ ರಿಲೀಸ್ ನ ಮೊದಲ ಕಾರ್ಯಕ್ರಮ ಆರಂಭವಾಗಲಿದ್ದು, ಇದಕ್ಕಾಗಿ ಈಗಾಗಲೆ ಅಪ್ಪು ಅಭಿಮಾನಿಗಳು ಹೊಸಪೇಟೆಯಲ್ಲಿ ಸಿದ್ಧತೆ ನಡೆಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಮೆಗಾಸ್ಟಾರ್ ಚಿರಂಜೀವಿ ಹಾಗೂ ಜ್ಯೂನಿಯರ್ ಎನ್.ಟಿ.ಆರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರಂತೆ. ಕನ್ನಡದಲ್ಲಿ ಸಿದ್ಧವಾಗಿರೋ ಜೇಮ್ಸ್ ಸಿನಿಮಾ ಪುನೀತ್ ಪಾತ್ರಕ್ಕೆ ಶಿವಣ್ಣ ವಾಯ್ಸ್ ಓವರ್ ನಲ್ಲಿ ಮೂಡಿಬಂದಿದೆ. ಮಾತ್ರವಲ್ಲ ಅಭಿಮಾನಿಗಳ ಆಸೆ ಈಡೇರಿಸುವುದಕ್ಕಾಗಿ ದೊಡ್ಮನೆ ಯ ಮೂರು ಪ್ರತಿಭೆಗಳಾದ ಶಿವಣ್ಣ, ರಾಘಣ್ಣ ಹಾಗೂ ಪುನೀತ್ ಒಟ್ಟಿಗೆ ನಟಿಸಿದ್ದಾರೆ.

ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಈ ಸಿನಿಮಾ ಡಬ್ ಆಗಲಿದ್ದು, ಮಾರ್ಚ್ 17 ರಂದು ಅದ್ದೂರಿ ಕಾರ್ಯಕ್ರಮಗಳ ಮೂಲಕ ಸಿನಿಮಾ ರಿಲೀಸ್ ಆಗಲಿದೆ. ಮಾರ್ಚ್ 6 ರಂದು ಹೊಸಪೇಟೆಯಲ್ಲಿ ಆರಂಭವಾಗೋ ಈ ಕಾರ್ಯಕ್ರಮ ಮಾರ್ಚ್ 17 ರಂದು ಬೆಂಗಳೂರಿನಲ್ಲಿ ಇನ್ನಷ್ಟು ವಿಶೇಷತೆಗಳೊಂದಿಗೆ ಮುಂದುವರೆಯಲಿದೆ. ವಿರೇಶ್ ಚಿತ್ರಮಂದಿರದ ಬಳಿ ಅಪ್ಪು ಕಟೌಟ್ ನಿಲ್ಲಿಸಿ ಅದಕ್ಕೆ ಹೆಲಿಕ್ಯಾಪ್ಟರ್ ಮೂಲಕ ಪುಷ್ಪಾರ್ಚನೆ ನಡೆಯಲಿದೆಯಂತೆ. ಒಟ್ಟಿನಲ್ಲಿ ಪುನೀತ್ ಕೊನೆಯ ಚಿತ್ರಕ್ಕೆ ಅದ್ದೂರಿ ಸ್ವಾಗತ ಸಿಗೋದಂತು ಫಿಕ್ಸ್ ಎಂಬಂತಾಗಿದ್ದು ಚಿತ್ರಕ್ಕಾಗಿ ಅಭಿಮಾನಿಗಳು ಕಾದಿದ್ದಾರೆ.

ಇದನ್ನೂ ಓದಿ : ಪವರ್ ಸ್ಟಾರ್ ಹುಟ್ಟುಹಬ್ಬಕ್ಕೆ ಸಜ್ಜಾದ ಫ್ಯಾನ್ಸ್ : ನಾಲ್ಕು ದಿನಗಳ ಕಾಲ ನಡೆಯಲಿದೆ ಪುನೀತ್‌ ರಾಜ್‌ ಕುಮಾರ್ ಬರ್ತಡೇ

ಇದನ್ನೂ ಓದಿ : ಜೇಮ್ಸ್ ಗೆ ಅದ್ದೂರಿ ಸ್ವಾಗತ : ದೇಶದ ಹಲವೆಡೆ ಗ್ರ್ಯಾಂಡ್ ಫ್ರೀ ರಿಲೀಸ್ ಇವೆಂಟ್ ಆಯೋಜಿಸಿದ ಚಿತ್ರತಂಡ

ಇದನ್ನೂ ಓದಿ : ಪುನೀತ್ ರಾಜ್‍ಕುಮಾರ್ ಬಯೋಗ್ರಫಿ; ಆರ್ಡರ್ ಮಾಡುವುದು ಹೇಗೆ?

( Puneeth Raj Kumar Last Movie, James Pre Release Event participating Junior NTR and Chiranjeevi)

Comments are closed.