ಸ್ಯಾಂಡಲ್‌ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneeth Rajkumar )ಅಗಲಿ ಎರಡು ವರ್ಷಗಳೇ ಕಳೆದಿದೆ. ಆದರೆ ಅವರ ಅಗಲಿಕೆಯ ನೋವು ಇನ್ನೂ ಮರೆಯಾಗಿಲ್ಲ. ಇಂತಹ ಹೊತ್ತಲ್ಲೇ ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಬಾವುಕ ಸಂದೇಶವನ್ನು ನೀಡಿದ್ದು, ಅಪ್ಪು ಅವರ ನೆನಪನ್ನು ಸ್ಮರಿಸುತ್ತಾ ಅವರ ನಲ್ಮೆಯ ನಗುವನ್ನು ಸಂಭ್ರಮಿಸೋಣಾ ಎಂಬ ಸಂದೇಶ ನೀಡಿದ್ದಾರೆ.
ಪುನೀತ್ ರಾಜ್ ಕುಮಾರ್ ಅವರ ಪುಣ್ಯಸ್ಮರಣಿಯ ಸಂದರ್ಭದಲ್ಲಿಯೇ ಟ್ವೀಟ್ ಮಾಡಿರುವ ಅಶ್ವಿನಿ ಪುನೀತ್ ರಾಜ್ ಕುಮಾರ್ ನಮ್ಮೆಲ್ಲರ ಸತ್ಕಾರ್ಯಗಳಿಗೆ ಮಾರ್ಗದರ್ಶಿಯಾಗಿ ನಿಂತಿರುವ ಅವರು ಅವರ ಅನನ್ಯ ಚೇತನಕ್ಕೆ ಕಾಲವೇ ಸಾಕ್ಷಿಯಾಗಿದೆ. ಅಪ್ಪು ಅವರ ಮೇಲೆ ಸದಾ ತಮ್ಮ ಅಭಿಮಾನ ಮತ್ತು ಪ್ರೀತಿಯನ್ನು ತೋರುವ ಎಲ್ಲಾ ಬಂಧು ಮಿತ್ರರು ಹಾಗೂ ಅಭಿಮಾನಿಗಳಿಗೆ ನಮ್ಮ ಗೌರವಪೂರ್ಣ ವಂದನೆಗಳು ಎಂದಿದ್ದಾರೆ.

ನಾವೆಲ್ಲರೂ ಸದಾ ಅಪ್ಪು ಅವರ ನೆನಪುಗಳನ್ನು ಸ್ಮರಿಸುತ್ತಾ ಹಾಗೂ ಅವರ ನಲ್ಮೆಯ ನಗುವನ್ನು ಸಂಭ್ರಮಿಸೋಣಾ ಎಂದು ಅವರು ಟ್ವೀಟ್ ಮಾಡಿದ್ದಾರೆ. ಪುನೀತ್ ರಾಜ್ ಕುಮಾರ್ ಕಳೆದ ಎರಡು ವರ್ಗಗಳ ಹಿಂದೆ ಕಾರ್ಡಿಕ್ ಅರೆಸ್ಟ್‌ನಿಂದ ನಿಧನ ರಾಗಿದ್ದರು. ಅವರ ಅಗಲಿಕೆಯ ನೋವನ್ನು ಕಂಡು ಇಡೀ ಕರುನಾಡೇ ಮರಗಿತ್ತು. ಕನ್ನಡದ ಖ್ಯಾತಯುವ ನಟನ ಅಲಿಕೆಯನ್ನು ಅರಗಿಸಿಕೊಳ್ಳಲು ಇಂದಿಗೂ ಸಾಧ್ಯವಾಗಿಲ್ಲ.
ಇದನ್ನೂ ಓದಿ : ನಟ ದರ್ಶನ್ ತೂಗುದೀಪ್ ಹುಲಿ ಉಗುರಿನ ಪೆಂಡೆಂಟ್ ಅಧಿಕಾರಿಗಳ ವಶಕ್ಕೆ : ಅರಣ್ಯ ಇಲಾಖೆಯಿಂದ ನೋಟೀಸ್ ಜಾರಿ
ಪುನೀತ್ ರಾಜ್ ಕುಮಾರ್ ಎರಡನೇ ಪುಣ್ಯತಿಥಿಯ ಹಿನ್ನೆಲೆಯಲ್ಲಿ ನಿನ್ನೆ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಅವರ ಸಮಾಧಿಗೆ ಕುಟುಂಬಸ್ಥರು ಪೂಜೆ ಸಲ್ಲಿಸಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ ಅಣ್ಣ ನಟ, ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ದಂಪತಿ ಸೇರಿ ಇದೀಗ ಕಟುಂಬದವರೇ ಭಾಗಿಯಾಗಿದ್ದಾರೆ.
ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಪುನೀತ್ ರಾಜ್ ಕುಮಾರ್ ಅವರನ್ನು ಸ್ಮರಿಸಿದ್ದಾರೆ. ಪುನೀತ್ ಅಗಲಿಕೆ ಕನ್ನಡ ಚಿತ್ರರಂಗದ ಪಾಲಿಗೆ ಕನ್ನಡ ನಾಡಿಗೆ ತುಂಬಲಾರದ ನಷ್ಟ. ಹಠಾತ್ ನಿಧನವನ್ನು ಇಂದಿಗೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪುನೀತ್ ರಾಜ್ ಕುಮಾರ್ ಅವರದ್ದು ನಿಷ್ಕಲ್ಮಶ ಹೃದಯ ಎಂದಿದ್ದಾರೆ.
ಇದನ್ನೂ ಓದಿ : ದಸರಾ ಹಬ್ಬಕ್ಕೆ ಬ್ಲೂ ಸೀರೆಯಲ್ಲಿ ಸ್ಪೆಶಲ್ ಪೋಟೋಶೂಟ್: ಮತ್ತೊಮ್ಮೆ ಮಿಂಚಿದ ರಾಕಿಂಗ್ ನಟ ಯಶ್, ರಾಧಿಕಾ ಪಂಡಿತ್
ವರನಟ ಡಾ.ರಾಜ್ ಕುಮಾರ್, ಪಾರ್ವತಮ್ಮ ರಾಜ್ ಕುಮಾರ್ ದಂಪತಿಯ ಪುತ್ರನಾಗಿ ಜನಿಸಿದ್ದ ಪುನೀತ್ ರಾಜ್ ಕುಮಾರ್ ಅವರು ಬಾಲನಟರಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದರು. ನಂತರ ಪೂರ್ಣ ಪ್ರಮಾಣದ ನಟರಾಗಿ ಗುರುತಿಸಿಕೊಂಡಿದ್ದರು. ಚಿಕ್ಕಮಗಳೂರು ಮೂಲದ ಅಶ್ವಿನಿ ರೇವಂತ್ ಅವರನ್ನು ಪುನೀತ್ ರಾಜ್ ಕುಮಾರ್ ಮದವೆ ಆಗಿದ್ದರು.

6 ತಿಂಗಳ ಮಗುವಾಗಿದ್ದಾಗ ಅವರ ಥ್ರಿಲ್ಲರ್ ಸಿನಿಮಾ ಪ್ರೇಮದ ಕಾಣಿಕೆ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು. ನಂತರ ಸನಾದಿ ಅಪ್ಪಣ್ಣ, 1 ವರ್ಷದ ಮಗು ಆಗಿದ್ದಾಗ ತಾಯಿಗೆ ತಕ್ಕ ಮಗ, ಎರಡನೇ ವರ್ಷದಲ್ಲಿ ವಸಂತ ಗೀತೆ, ನಂತರದಲ್ಲಿ ಭೂಮಿಗೆ ಬಂದ ಭಗವಂತ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ : ಸ್ಯಾಂಡಲ್ ವುಡ್ ಕ್ವೀನ್ ರಮ್ಯ ಕೊಟ್ರು ಸಿಹಿಸುದ್ದಿ: ಸ್ವಾತಿ ಮುತ್ತಿನ ಮಳೆಹನಿಯೇ ನವೆಂಬರ್ 24 ರಂದು ತೆರೆಗೆ
ಚಲಿಸುವ ಮೋಡಗಳು ಸಿನಿಮಾಕ್ಕೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ಬಾಲ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಬೆಟ್ಟದ ಹೂವು ಸಿನಿಮಾಕ್ಕಾಗಿ ಪುನೀತ್ ರಾಜ್ ಕುಮಾರ್ ಅವರಿಗೆ ಅತ್ಯುತ್ತಮ ಬಾಲ ಕಲಾವಿದ 33 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. 2002 ರಲ್ಲಿ ಪುನೀತ್ ರಾಜ್ ಕುಮಾರ್ ಅಪ್ಪು ಸಿನಿಮಾದ ಮೂಲಕ ನಾಯಕನಾಗಿ ಸ್ಯಾಂಡಲ್‌ವುಡ್ ಗೆ ಎಂಟ್ರಿ ಕೊಟ್ಟಿದ್ದರು.
Puneeth Rajkumar 2nd years Death Anniversary Ashwini Puneeth Rajkumar Special Tweet