ನಟ ದರ್ಶನ್ ತೂಗುದೀಪ್ ಹುಲಿ ಉಗುರಿನ ಪೆಂಡೆಂಟ್ ಅಧಿಕಾರಿಗಳ ವಶಕ್ಕೆ : ಅರಣ್ಯ ಇಲಾಖೆಯಿಂದ ನೋಟೀಸ್ ಜಾರಿ

ಇದೀಗ ಸ್ಯಾಂಡಲ್‌ವುಡ್‌ ಖ್ಯಾತ ನಟ ದರ್ಶನ್‌ ತೂಗುದೀಪ ಅವರ ಬಳಿಯಲ್ಲಿ ಹುಲಿ ಉಗುರಿನ ಪೆಂಡೆಂಟ್‌ ಇದ್ದು, ಸದ್ಯ ಅರಣ್ಯ ಇಲಾಖೆಯ ಅಧಿಕಾರಿಗಳು ಪೆಂಡೆಂಟ್‌ ಅನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಬಿಗ್‌ಬಾಸ್‌ (Bigg Boss Kannada) ಮನೆಯಿಂದಲೇ ಸಂತೋಷ್‌ ವರ್ತೂರು ಬಂಧನದ ಬೆನ್ನಲ್ಲೇ ಇದೀಗ ಸ್ಯಾಂಡಲ್‌ವುಡ್‌ ನಟರಿಗೂ ಟೆನ್ಶನ್‌ ಶುರುವಾಗಿದೆ. ಖ್ಯಾತ ನಟ ದರ್ಶನ್‌ ತೂಗುದೀಪ್‌ (Darshan Thoogudeepa), ಜಗ್ಗೇಶ್‌, ನಿಖಿಲ್‌ ಕುಮಾರಸ್ವಾಮಿ ಅವರ ಬಳಿಯಲ್ಲಿ ಹುಲಿ ಉಗುರಿನ ಪೆಂಡೆಂಟ್‌ ವೈರಲ್‌ ಆಗಿತ್ತು. ಇದರ ಬೆನ್ನಲ್ಲೇ ಅರಣ್ಯ ಇಲಾಖೆಯ ಅಧಿಕಾರಿಗಳು ನಟರಿಗೆ ನೋಟೀಸ್‌ ನೀಡಿದ್ದಾರೆ.

ಇದೀಗ ಸ್ಯಾಂಡಲ್‌ವುಡ್‌ ಖ್ಯಾತ ನಟ ದರ್ಶನ್‌ ತೂಗುದೀಪ ಅವರ ಬಳಿಯಲ್ಲಿ ಹುಲಿ ಉಗುರಿನ ಪೆಂಡೆಂಟ್‌ ಇದ್ದು, ಸದ್ಯ ಅರಣ್ಯ ಇಲಾಖೆಯ ಅಧಿಕಾರಿಗಳು (Forest Department Official) ಪೆಂಡೆಂಟ್‌ ಅನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ನಟ ದರ್ಶನ್‌ ಅವರು ಹುಲಿ ಉಗುರು ಇರುವ ಸರವನ್ನು ಧರಿಸಿದ್ದು ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಸಂತೋಷ್‌ ವರ್ತೂರು ಬಂಧನದ ಬೆನ್ನಲ್ಲೇ ದರ್ಶನ್‌ ತೂಗುದೀಪ್‌ ಅವರ ಬಂಧನ ಯಾವಾಗ ಅನ್ನೋ ಕುರಿತು ಚರ್ಚೆಯೂ ನಡೆದಿತ್ತು. ಇದರ ಬೆನ್ನಲ್ಲೇ ಅರಣ್ಯ ಇಲಾಖೆಯ ಅಧಿಕಾರಿಗಳು ಅಲರ್ಟ್‌ ಆಗಿದ್ದಾರೆ.

Forest department issued notice after take custody Darshan Thoogudeepa tiger Claw Pendant
Image Credit To Original Source

ಸದ್ಯ ಲಭ್ಯವಿರುವ ಮಾಹಿತಿಯ ಪ್ರಕಾರ ದರ್ಶನ್‌ ತೂಗುದೀಪ್‌ ಅವರಿಗೆ ಹುಲಿ ಉಗುರಿನ ಸರದ ಕುರಿತು ಮಾಹಿತಿಯನ್ನು ಕೇಳಿದ್ದು, ನೋಟೀಸ್‌ ಜಾರಿ ಮಾಡಿದ್ದಾರೆ. ಅಲ್ಲದೇ ಅವರ ಬಳಿಯಲ್ಲಿದ್ದ ಹುಲಿ ಉಗುರಿನ ಪೆಂಡೆಂಟ್‌ ವಶ ಪಡಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: 7 ವರ್ಷಗಳ ಬಳಿಕ ಮಲೆಯಾಳಂನಲ್ಲಿ ಮೇಘನಾ‌ ರಾಜ್ ಸರ್ಜಾ ಸಿನಿಮಾ : ತತ್ಸಮ ತದ್ಬವ ಅ.27 ಕ್ಕೆ ರಿಲೀಸ್

ಇನ್ನು ನಟ ಜಗ್ಗೇಶ್‌ ಕೂಡ ಟಿವಿಯೊಂದರ ಸಂದರ್ಶನದಲ್ಲಿ ತಮ್ಮ ಬಳಿಯಲ್ಲಿ ಉಗುರಿನ ಪೆಂಡೆಂಟ್‌ ಇರುವ ಕುರಿತು ಹೇಳಿಕೊಂಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ತನ್ನ ತಾಯಿ ಹುಲಿ ಉಗುರಿನ ಪೆಂಡೆಂಟ್‌ ನನಗೆ ನೀಡಿದ್ದಾರೆ ಎಂದು ಸಂದರ್ಶನದಲ್ಲಿ ಹೇಳಿದ್ದರು. ವಿಡಿಯೋ ವೈರಲ್‌ ಆದ ಬೆನ್ನಲ್ಲೇ ಅರಣ್ಯ ಇಲಾಖೆಯ ಅಧಿಕಾರಿಗಳು ನೋಟೀಸ್‌ ಜಾರಿ ಮಾಡಿದ್ದಾರೆ.

Forest department issued notice after take custody Darshan Thoogudeepa tiger Claw Pendant
Image Credit To Original Source

ಇದನ್ನೂ ಓದಿ: ನಟ ದರ್ಶನ್‌ ತೂಗುದೀಪ್‌, ಜಗ್ಗೇಶ್‌, ಮುನಿರತ್ನ ಬಂಧನ ಸಾಧ್ಯತೆ ? ಸ್ಯಾಂಡಲ್‌ವುಡ್‌ಗೆ ಹುಲಿ ಉಗುರಿನ ಸಂಕಷ್ಟ

ಇನ್ನು ಯುವ ನಟ ನಿಖಿಲ್‌ ಕುಮಾರಸ್ವಾಮಿ ಬಳಿಯಲ್ಲಿಯೂ ಹುಲಿ ಉಗುರಿನ ಪೆಂಡೆಂಟ್‌ ಇರುವ ವಿಚಾರವೂ ವೈರಲ್‌ ಆಗಿದೆ. ಆದರೆ ಎಚ್ಚೆತ್ತುಕೊಂಡಿರುವ ನಿಖಿಲ್‌ ಕುಮಾರಸ್ವಾಮಿ ಅವರು ಈ ಕುರಿತು ಟ್ವೀಟ್‌ ಮಾಡಿದ್ದು, ತನ್ನ ಮದುವೆಗೆ ಈ ಸರ ಗಿಫ್ಟ್‌ ಆಗಿ ಬಂದಿದೆ. ಆದರೆ ಇದರಲ್ಲಿ ಇರುವುದು ಅಸಲಿ ಹುಲಿ ಉಗುರು ಅಲ್ಲಾ ಬದಲಾಗಿ ನಕಲಿ ಎಂದಿದ್ದಾರೆ. ಆದರೂ ನಿಖಿಲ್‌ ಕುಮಾರ ಸ್ವಾಮಿ ಅವರಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ನೋಟೀಸ್‌ ಜಾರಿ ಮಾಡಿದ್ದಾರೆ.

ಒಟ್ಟಿನಲ್ಲಿ ಸಂತೋಷ್‌ ವರ್ತೂರು ಹುಲಿ ಉಗುರಿನ ಪೆಂಡೆಂಟ್‌ ವಿವಾದ ಇದೀಗ ಸ್ಯಾಂಡಲ್‌ವುಡ್‌ ಅನ್ನೇ ನಡುಗಿಸಿಬಿಟ್ಟಿದೆ. ಇನ್ನಷ್ಟು ನಟರಿಗೆ ಇದೀಗ ನಡುಕ ಶುರುವಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಸದ್ಯ ಅಲರ್ಟ್‌ ಆಗಿದ್ದು, ಹುಲಿ ಉಗುರಿನ ಮೂಲ ಪತ್ತೆಗೆ ಮುಂದಾಗಿದ್ದಾರೆ.

Comments are closed.