ಸೋಮವಾರ, ಏಪ್ರಿಲ್ 28, 2025
HomeCinemaPuneeth Rajkumar Album : ಎಲ್ಲೂ ಹೋಗಿಲ್ಲ ಅಪ್ಪು ಎಂದ ಅನಿತಾ : ಮೂರೇ...

Puneeth Rajkumar Album : ಎಲ್ಲೂ ಹೋಗಿಲ್ಲ ಅಪ್ಪು ಎಂದ ಅನಿತಾ : ಮೂರೇ ದಿನದಲ್ಲಿ ದಾಖಲೆ ವೀವ್ಸ್‌

- Advertisement -

ಕನ್ನಡದ ರಾಜ್ ಕುಮಾರ್, ಸ್ಯಾಂಡಲ್ ವುಡ್ ಯುವರಾಜ್ ಪುನೀತ್ ರಾಜ್ ಕುಮಾರ್ ಅಗಲಿ ತಿಂಗಳುಗಳೇ ಕಳೆದಿದ್ದರೂ ಇನ್ನೂ ಅಭಿಮಾನಿಗಳ ಹೃದಯದಲ್ಲಿ ಅಪ್ಪು ಸ್ಮರಣೆ ಅವ್ಯಾಹತವಾಗಿ ಸಾಗಿದೆ. ಉದ್ಯಾನವನ ಕ್ಕೆ ಅಪ್ಪು ಹೆಸರು, ರಸ್ತೆಗೆ ಅಪ್ಪು ಹೆಸರು, ಪುತ್ಥಳಿ ಹೀಗೆ ನಾನಾ ರೂಪದಲ್ಲಿ ಜನರು ದೊಡ್ಮನೆ ಹುಡುಗನನ್ನು ನೆನಪಿಸಿ ಕೊಳ್ಳುತ್ತಲೇ ಇದ್ದಾರೆ. ನೀನೆಲ್ಲೂ ಹೋಗಿಲ್ಲ ಅಪ್ಪು ಅಪ್ಪು (Puneeth Rajkumar Album ) ಎನ್ನುವ ಮೂಲಕ ಫ್ಯಾನ್ ಒಬ್ಬರು ಪುನಿತ್ ಸ್ಮರಿಸಿದ್ದು, ಹಾಡು ಸಖತ್ ವೈರಲ್ ಆಗಿದೆ.

ಎಲ್ಲೂ ಹೋಗಿಲ್ಲ ಅಪ್ಪು ನೀನೆಲ್ಲೂ ಹೋಗಿಲ್ಲ ಅಪ್ಪು ಅಪ್ಪು ಅಪ್ಪು ಎನ್ನುವ ಹಾಡಿನ ಮೂಲಕ ಗೀತ ಸಾಹಿತಿ ಹಾಗೂ ಸಂಗೀತ ಸಂಯೋಜಕಿ ಅನಿತಾ ರಂಗಸ್ವಾಮಿ ದೊಡ್ಮನೆ ಅಪ್ಪುಗೆ ಗೀತನಮನ ಸಲ್ಲಿಸಿದ್ದಾರೆ. ಎಲ್ಲೂ ಹೋಗಿಲ್ಲ ಅಪ್ಪು ನೀನೆಲ್ಲೂ ಹೋಗಿಲ್ಲ ಅಪ್ಪು (Puneeth Rajkumar Album) ಎನ್ನುವ ಹಾಡಿನಲ್ಲಿ ಪುನೀತ್ ಹುಟ್ಟು,ಕುಟುಂಬ ಸೇರಿದಂತೆ ಎಲ್ಲವನ್ನು ನೆನಪಿಸುವ ಸಾಹಿತ್ಯ ರಚಿಸಲಾಗಿದ್ದು, ಅನಿತಾ ತಂದಿರುವ ಆಡಿಯೋ ಭಾವನಾತ್ಮಕವಾಗಿ ಹಾಗೂ ಅಷ್ಟೇ ಸುಮಧುರವಾಗಿ ಮೂಡಿ ಬಂದಿದೆ.

ಎಲ್ಲೂ ಹೋಗಿಲ್ಲ ಅಪ್ಪು ಎಂಬ ಈ ಹಾಡನ್ನು ಆನಂದ ಆಡಿಯೋದ ಯೂ ಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದ್ದು ಬಿಡುಗಡೆಯಾದ ಮೂರೇ ದಿನಕ್ಕೆ ಹಾಡು ೧.೫ ಲಕ್ಷ ವೀವ್ಸ್ ಪಡೆದುಕೊಂಡಿದೆ. ಕನ್ನಡದ ಹೆಮ್ಮೆಯ ಗಾಯಕರಾದ ಶಂಕರ್ ಮಹದೇವನ್, ರಾಜೇಶ್ ಕೃಷ್ಣನ್,ವಿಜಯ್ ರಾಘವೇಂದ್ರ, ಹೇಮಂತ್ ಕುಮಾರ್, ಅನುರಾಧಾ ಭಟ್ ಈ ಹಾಡಿಗೆ ಧ್ವನಿಯಾಗಿದ್ದಾರೆ.

ಇನ್ನು ಈ ಖ್ಯಾತ ಗಾಯಕರ ಜೊತೆ ಸರಿಗಮಪ ಖ್ಯಾತಿಯ ಹಾಡುಗಾರರು ಧ್ವನಿಗೂಡಿಸಿದ್ದಾರೆ. ಈ ಹಾಡಿಗೆ ಅಲ್ವಿನ್ ಫರ್ನಾಂಡಿಸ್ ಗಿಟಾರ್ ನುಡಿಸಿದ್ದರೇ, ಅಕಾಶ್ ಪರ್ವ ಕೀ ಬೋರ್ಡ್ ಸಾಥ್ ನೀಡಿದ್ದಾರೆ. ಸಂದೀಪ್ ಕೊಳಲು ನುಡಿಸಿದ್ದು,ಸರ್ಫರಾಜ್ ಖಾನ್ ಸಾರಂಗಿ ಸಂಗೀತ ಸಂಯೋಜನೆಯಲ್ಲಿ ಜೊತೆಯಾಗಿದ್ದಾರೆ. ಜೀವನ್ ಕ್ಲಾಡ್ ಡಿ ಸೋಜಾ ವಿಡಿಯೋ ನಿರ್ದೇಶನ ಮಾಡಿದ್ದು,ಸಂಜಯ್ ಕುಮಾರ್ ಎಂಪಿ ಧ್ವನಿಮುದ್ರಣ ಮಾಡಿದ್ದಾರೆ.

ಸ್ವತಃ ಹಲವು ಸಿನಿಮಾಗಳಿಗೆ ಹಾಡಿನ ಮೂಲಕ ಜೀವ ತುಂಬುತ್ತಿದ್ದ ಪುನೀತ್ (Puneeth Rajkumar Album) ಈಗ ಈ ಹಾಡಿನ ಮೂಲಕ ಕನ್ನಡಿಗರ ಪಾಲಿಗೆ ಅಚ್ಚಳಿಯದ ನೆನಪಾಗಿ ಉಳಿದು ಹೋಗಿದ್ದಾರೆ. ಇತ್ತೀಚಿಗಷ್ಟೇ ಪುನೀತ್ ಅಭಿನಯದ ಕೊನೆ ಚಿತ್ರ ಜೇಮ್ಸ್ ತೆರೆ ಕಂಡಿದ್ದು, ಪ್ರೇಕ್ಷಕರಿಂದ ಅಭೂತಪೂರ್ವ ಪ್ರತಿಕ್ರಿಯೆ ಪಡೆದುಕೊಂಡಿದೆ.

ಇದನ್ನೂ ಓದಿ : ಸಿನಿಮಾ ಹೇಗಿತ್ತು ಅಂತ ಕೇಳೋಕೆ ಪುನೀತ್ ಪೋನ್ ಮಾಡಲ್ಲ: ಭಾವುಕರಾದ ಶಿವಣ್ಣ

ಇದನ್ನೂ ಓದಿ : ಶಾಲೆಯಲ್ಲಿ ಪಾಠವಾಗಲಿದೆ ಅಪ್ಪು ಬದುಕು: ಪಠ್ಯಕ್ರಮಕ್ಕೆ ಸೇರ್ಪಡೆಗೊಳಿಸಲು ಅಭಿಮಾನಿಗಳ ಒತ್ತಡ

Puneeth Rajkumar Album Song ellu Hogilla neenellu hogill Appu

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular