Hotel food Prices : ಅಡುಗೆ ಎಣ್ಣೆ ಬೆಲೆ ಏರಿಕೆ ಎಫೆಕ್ಟ್ : ಏಪ್ರಿಲ್ 1 ರಿಂದ ಹೊಟೇಲ್ ಫುಡ್ ಬೆಲೆ ಹೆಚ್ಚಳ

ಬೆಂಗಳೂರು : ಕೊರೋನಾದಿಂದ ಆದಾಯ ಕೊರತೆ, ಉದ್ಯೋಗ ‌ನಷ್ಟ, ವ್ಯಾಪಾರದಲ್ಲಿ ಕುಸಿತ ಹೀಗೆ ನಾನಾ ಸಮಸ್ಯೆಯಿಂದ ಸಂಕಷ್ಟಕ್ಕಿಡಾಗಿರುವ ಜನರಿಗೆ ಬೆಲೆ ಏರಿಕೆ ಮತ್ತಷ್ಟು ಬರೆ ಎಳೆಯಲಾರಂಭಿಸಿದೆ. ಪೆಟ್ರೋಲ್,ಡಿಸೇಲ್, ಎಲ್ ಪಿ ಜಿ ಗ್ಯಾಸ್ ,ಹಾಲಿನ ಬಳಿಕ ಈಗ ಹೊಟೇಲ್ ತಿಂಡಿಯೂ ಮತ್ತಷ್ಟು ದುಬಾರಿಯಾಗಲಿದ್ದು, ಅಡುಗೆ ಎಣ್ಣೆ(Cooking Oil) ಕೊರತೆ ಹಾಗೂ ಬೆಲೆ ಏರಿಕೆ ಮುಂದಿಟ್ಟುಕೊಂಡು ಮತ್ತಷ್ಟು ಬೆಲೆ ಏರಿಕೆ (Hotel food Prices ) ಮಾಡಲು ನಗರದ ಹೊಟೇಲ್ ಸಂಘ ನಿರ್ಧರಿಸಿದ್ದು, ಏಪ್ರಿಲ್ 1 ರಿಂದ ಹೊಟೇಲ್ ತಿಂಡಿ ನಿಮ್ಮ ಉದರ ತುಂಬಿಸುತ್ತೇ ಆದರೂ ಜೇಬು ಖಾಲಿ ಮಾಡೋದಂತು ಗ್ಯಾರಂಟಿ.

ರಷ್ಯಾ ಉಕ್ರೇನ್ ಯುದ್ಧ ಕಾರಣಕ್ಕೆ ನಗರವೂ ಸೇರಿದಂತೆ ರಾಜ್ಯದಲ್ಲಿ ಅಡುಗೆ ಎಣ್ಣೆ ಬೆಲೆ ಏರಿಕೆಯಾಗಿದೆ. ತಾತ್ಕಾಲಿಕವಾಗಿ ಅಭಾವ ಸೃಷ್ಟಿಸಿ ಎಣ್ಣೆ ದರ ಏರಿಕೆ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿರುವಾಗಲೇ ಇದೇ ಕಾರಣವನ್ನು ಮುಂದಿಟ್ಟುಕೊಂಡು ಹೊಟೇಲ್ ಮಾಲೀಕರ ಸಂಘ ದರ ಏರಿಕೆಗೆ ಮುಂದಾಗುತ್ತಿದೆ. ಹೊಟೇಲ್ ಗಳಲ್ಲಿ ಸಾಮಾನ್ಯವಾಗಿ ಊಟಕ್ಕೆ ಪೂರಿ,ಚಪಾತಿ ನೀಡಲಾಗುತ್ತದೆ. ಅಲ್ಲದೇ ಬೊಂಡ,ಬಜ್ಜಿ,ಕಬಾಬ್ ಸೇರಿದಂತೆ ಎಲ್ಲ ಖಾದ್ಯ ತಯಾರಿಕೆಗೂ ಎಣ್ಣೆ ಅನಿವಾರ್ಯ. ಹೀಗಾಗಿ ಎಣ್ಣೆ ದರ ಏರಿಕೆ ಆಗಿರುವುದರಿಂದ ಆಹಾರದ ಬೆಲೆ ಏರಿಸೋದು ಅನಿವಾರ್ಯ ಅನ್ನೋದು ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಅಭಿಪ್ರಾಯ.

ಏಪ್ರಿಲ್ 1 ರಿಂದ ನಗರದ ಹೊಟೇಲ್ ಗಳು ಊಟ ತಿಂಡಿಯ ದರವನ್ನು ಮೊದಲಿಗಿಂತ ಶೇಕಡಾ 10 ರಷ್ಟು ಹೆಚ್ಚಿಸಲು ನಿರ್ಧರಿಸಿದ್ದಾರೆ. ಈಗಾಗಲೇ ನಗರದ ಹಲವು ಹೊಟೇಲ್ ಗಳು ಬೆಲೆ ಏರಿಕೆಯನ್ನು ಜಾರಿಗೆ ತಂದಿವೆ. ರಸ್ತೆ ಬದಿ ಬಜ್ಜಿ ಬೋಂಡಾ ಮಾರಾಟಗಾರರು 10ರೂಪಾಯಿ ಮೂರು ಬಜ್ಜಿ ಬದಲು ಎರಡೇ ನೀಡಿ ದರ ಏರಿಕೆ ಸ್ವಾಮಿ ಅಂತಿದ್ದಾರೆ. ನಗರದ ಹೊಟೇಲ್ ಗಳಲ್ಲಿ ಸನ್ ಪ್ಲವರ್ ರಿಫೈಯನ್ಡ್ ಬಳಕೆಮಾಡಲಾಗುತ್ತದೆ. ಆದರೆ ಮಾರುಕಟ್ಟೆಯಲ್ಲಿ ಹೊಟೇಲ್ ಮಾಲೀಕರ ಬೇಡಿಕೆಗೆ ತಕ್ಕಷ್ಟು ಎಣ್ಣೆ ಸಪ್ಲೈ ಇಲ್ಲ. 10 ಟಿನ್ ಎಣ್ಣೆ ಕೇಳಿದಲ್ಲಿ 5 ಟನ್ ಪೊರೈಕೆ ಮಾಡುತ್ತಾರೆ.

ಹೀಗಾಗಿ ಗ್ರಾಹಕರ ಬೇಡಿಕೆಗೆ ಅನುಸಾರವಾಗಿ ಪೂರಿ,ಬಜ್ಜಿ,ಬೊಂಡಾದಂತಹ ಖಾದ್ಯಗಳನ್ನು ಪೊರೈಸಲು ಬೆಲೆ ಹೆಚ್ಚು ಕೊಟ್ಟಾದರೂ ಎಣ್ಣೆ ತರೋದು ಅನಿವಾರ್ಯವಾಗಿದೆ. ಹೀಗಾಗಿ ನಾವು ದರ ಏರಿಸುತ್ತಿದ್ದೇವೆ ಎಂದು ಹೊಟೇಲ್ ಮಾಲೀಕರ ಸಂಘ ಸ್ಪಷ್ಟನೆ ನೀಡಿದೆ. ಹೀಗಾಗಿ ಏಪ್ರಿಲ್ 1 ರಿಂದ ಹೊಟೇಲ್ ತಿಂಡಿ,ಊಟ ನಿಮ್ಮ ಜೇಬಿಗೆ ದೊಡ್ಡ ಕತ್ತರಿಯನ್ನೇ ಹಾಕೋದಂತು ಫಿಕ್ಸ್.

ಇದನ್ನೂ ಓದಿ : ಬಿಎಂಟಿಸಿಗೆ ಬಿಸಿ ತುಪ್ಪ ವಾದ ಎಲೆಕ್ಟ್ರಿಕ್ ಬಸ್ : ಮತ್ತೆ ನಷ್ಟದ ಹಾದಿಯಲ್ಲಿ ಬೆಂಗಳೂರು ಸಾರಿಗೆ

ಇದನ್ನೂಓದಿ : ಮ್ಯಾಗಿ ಬೆಲೆ ಏರಿಕೆ; ಇನ್ನೂ ಯಾವೆಲ್ಲ ತಿಂಡಿ ತಿನಿಸಿನ ಬೆಲೆ ಏರಿಕೆಯಾಗಿದೆ?

(Cooking Oil Price Hike, hotel food prices Increase from April 1)

Comments are closed.