ಭಾನುವಾರ, ಏಪ್ರಿಲ್ 27, 2025
HomeCinemaPuneeth Rajkumar James Teaser: ಭಾವನೆಗಳು ಬ್ಯುಸಿನೆಸ್​ಗಿಂತ ದೊಡ್ಡದು: ಜೇಮ್ಸ್ ಟೀಸರ್ ಬಿಡುಗಡೆ

Puneeth Rajkumar James Teaser: ಭಾವನೆಗಳು ಬ್ಯುಸಿನೆಸ್​ಗಿಂತ ದೊಡ್ಡದು: ಜೇಮ್ಸ್ ಟೀಸರ್ ಬಿಡುಗಡೆ

- Advertisement -

ಕನ್ನಡಿಗರ ಅಭಿಮಾನದ ದೊರೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಕೊನೆಯ ಚಿತ್ರ ಜೇಮ್ಸ್ ಟೀಸರ್ (Puneeth Rajkumar James Teaser) ಬಿಡುಗಡೆಯಾಗಿದೆ. ಚಿತ್ರದ ಟೀಸರ್‌ನಲ್ಲಿ ಪುನೀತ್ ರಾಜ್‌ಕುಮಾರ್ ಅವರ ಅಭಿನಯವನ್ನು ಅಭಿಮಾನಿಗಳು ಕಣ್ತುಂಬಿಸಿಕೊಂಡಿದ್ದಾರೆ. ಸರಳ ಸಜ್ಜನ ಮೇರು ನಟನಿಗೆ ಬಹುಪರಾಕ್ ಹೇಳುತ್ತಿದ್ದಾರೆ. ಅಲ್ಲದೇ ಡಾ ಶಿವರಾಜ್‌ಕುಮಾರ್ ಮತ್ತು ರಾಘವೇಂದ್ರ ರಾಜ್‌ಕುಮಾರ್ ಅವರು ಸಹ (Dr Shivarajkumar Raghavendra Rajkumar) ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆಯೇ ಎಂಬ ಕುತೂಹಲ ಹೆಚ್ಚಿದೆ ಡಾ ಶಿವರಾಜ್‌ಕುಮಾರ್ ಅವರ ಡೈಲಾಗ್ ಒಂದು ಟೀಸರ್‌ನ ಕೊನೆಯ ಹಂತದಲ್ಲಿ ಕೇಳಿಸುವುದು ಇನ್ನಷ್ಟು ನಿರೀಕ್ಷೆಗಳನ್ನು ಹೆಚ್ಚಿಸಿದೆ.

ಜೇಮ್ಸ್ ಚಿತ್ರದ ಇನ್ನೊಂದು ವಿಶೇಷ ಅಂದರೆ ಪುನೀತ್ ರಾಜ್ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಮತ್ತು ಶಿವರಾಜ್ ಕುಮಾರ್ ಈ ಮೂರು ಜನ ಅಣ್ಣತಮ್ಮಂದಿರು ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರು ಒಟ್ಟಿಗೆ ಸಿನಿಮಾ ಮಾಡುವ ಕನಸುಕಂಡಿದ್ದರು. ಆದರೆ, ಅದು ಈ ಮೂಲಕ ನೆರವೇರುತ್ತಿದೆ. ಚಿತ್ರವನ್ನು ಚೇತನ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಟೀಸರ್ ಪೂರ್ತಿ ಪುನೀತ್ ರಾಜ್ ಕುಮಾರ್ ರಾರಾಜಿಸಿಲ್ಲ. ಕಡೆಯ 33 ಸೆಕೆಂಡ್ ಗಳು ಮಾತ್ರ ಪುನೀತ್ ಕಾಣಿಸಿಕೊಂಡಿದ್ದಾರೆ. ಅವರ ಎಂದಿನ ಫೈಟಿಂಗ್ ತುಣುಕುಗಳು ಟೀಸರ್ ನ ಹೈಲೇಟ್. ಟೀಸರ್ ಆರಂಭದಲ್ಲಿ, ‘ಭಾವನೆಗಳು ಬ್ಯುಸಿನೆಸ್ ಗಿಂತ ದೊಡ್ಡದು- ಜೇಮ್ಸ್’ ಎನ್ನುವ ಇಂಗ್ಲೀಷಿನ ಹೇಳಿಕೆಯ ಮೂಲಕ, ಸಿನಿಮಾದಲ್ಲಿ ಎಮೋಷನ್ ಗೇನು ಕಡಿಮೆ ಇಲ್ಲ ಅನ್ನೋದನ್ನು ಸೂಚ್ಯವಾಗಿ ತಿಳಿಸಲಾಗಿದೆ.

ಜೇಮ್ಸ್ ಸಿನಿಮಾ ಮಾರ್ಚ್ 17ರಂದು ಬಿಡುಗಡೆಗೆ ಸಿದ್ಧವಾಗಿದೆ. ಆವತ್ತೇ ಪುನೀತ್ ರಾಜ್ ಕುಮಾರ್ ಅವರ ಹುಟ್ಟಿದ ದಿನ. ಈ ಸಂದರ್ಭವನ್ನು ಸ್ಮರಣೀಯ ಗೊಳಿಸಲು ಇಡೀ ಚಿತ್ರತಂಡ ಕಂಕಣಬದ್ದವಾಗಿ ಪೋಸ್ಟ್ ಪ್ರೊಡಕ್ಷನ್ ನಲ್ಲಿ ತೊಡಗಿಕೊಂಡಿದೆ. ಇತ್ತೀಚೆಗಷ್ಟೇ ಶಿವರಾಜ್ ಕುಮಾರ್ ಜೇಮ್ಸ್ ನ ಪುನೀತ್ ಅವರ ಪಾತ್ರದ ಡಬ್ಬಿಂಗ್ ಅನ್ನು ಕೇವಲ ಎರಡೂವರೆ ದಿನಗಳಲ್ಲಿ ಪೂರೈಸಿದ್ದರು. ಜನವರಿ 26 ಗಣರಾಜ್ಯೋತ್ಸವದಂದು ಜೇಮ್ಸ್ ಚಿತ್ರದ ವಿಶೇಷ ಪೋಸ್ಟರ್ ಬಿಡುಗಡೆಯಾಗಿತ್ತು. ಈಗ ಟೀಸರ್ ಬಿಡುಗಡೆಗೊಂಡಿದೆ.

ಬಿಡುಗಡೆಯಾಗಿ ಕೇವಲ ಒಂದುಗಂಟೆ ಅವಧಿಯಲ್ಲಿ 7 ಸಾವಿರಕ್ಕೂ ಹೆಚ್ಚು ಜನ ವೀಕ್ಷಣೆ ಮಾಡಿದ್ದಾರೆ. ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ಏಕಕಾಲಕ್ಕೆ ಜೇಮ್ಸ್ ಟೀಸ್ ರ್ ಬಿಡುಗಡೆಗೊಂಡಿದೆ.1.28 ನಿಮಿಷದ ಟೀಸರ್ ಬಾಲಿವುಡ್ ಶೈಲಿಯಲ್ಲಿ,ಬಹಳ ಶ್ರೀಮಂತವಾಗಿ ಚಿತ್ರಿತವಾಗಿದೆ.

ಟೀಸರ್ ನಲ್ಲಿ ಕೇಳುವ, ನೂರು ಜನ ಗನ್ ಗಳನ್ನು ಇಟ್ಟುಕೊಂಡಿರೋ ವೇಸ್ಟ್ ಬಾಡಿಗಳಿಗಿಂತ ಒಬ್ಬ ಗನ್ ಥರ ಇರೋನ್ನನ್ನು ಹುಡುಕಿಕೊಡಿ ಅನ್ನೋ ಮಸ್ತ್ ಡೈಲಾಗ್ ಪುನೀತ್ ಅವರಿಗೆ ಹೇಳಿಮಾಡಿಸಿದಂತಿದೆ.


ಇದನ್ನೂ ಓದಿ : ರಕ್ಷಿತ್ ಶೆಟ್ಟಿ ಮತ್ತು ರಮ್ಯಾ ಮದುವೆಯಾಗ್ತಾರಾ? ಇಲ್ಲಿದೆ ಬಿಗ್ ಅಪ್‌ಡೇಟ್

ಇದನ್ನೂ ಓದಿ : ಹನಿಮೂನ್ ನಲ್ಲೂ ಹಾಟ್ ಪೋಟೋಸ್ : ಮೌನಿ ರಾಯ್ ಬಿಕನಿ ಅವತಾರಕ್ಕೆ ಅಭಿಮಾನಿಗಳ ಫಿದಾ

(Puneeth Rajkumar James official Teaser release Dr Shivarajkumar Raghavendra Rajkumar PRK Productions)

RELATED ARTICLES

Most Popular