Hijab Row WhatsApp Status: ವಾಟ್ಸಾಪ್ ಸ್ಟೇಟಸ್ ಹಾಕೋ ಮುನ್ನ ಎಚ್ಚರ; ರೌಡಿ ಶೀಟರ್ ಕೇಸ್ ಬೀಳಬಹುದು ಹುಷಾರು

ವಾಟ್ಸಾಪಲ್ಲಿ ಸ್ಟೇಟಸ್ಸನ್ನೋ, ಫೇಸ್‌ಬುಕ್‌ನಲ್ಲಿ ಏನನ್ನೋ ಬರೆದು ಪೋಸ್ಟ್ ಹಾಕುವುದನ್ನೋ ನಾವು ಬಹುತೇಕ ಪ್ರತಿದಿನ ಮಾಡುತ್ತಿರುತ್ತೇವೆ. ನಮ್ಮ ಅಭಿಪ್ರಾಯಗಳನ್ನು ಬರೆದು ಪೋಸ್ಟ್ ಮಾಡುತ್ತೇವೆ. ಫೋಟೋ-ವಿಡಿಯೋಗಳನ್ನು ಹಂಚಿಕೊಳ್ಳುತ್ತೇವೆ. ಆದರೆ ಸದ್ಯ ನಡೆಯುತ್ತಿರುವ ಒಂದು ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಸ್ಟೇಟಸ್ ಪೋಸ್ಟ್ ಮಾಡುವ ಕುರಿತು ಎಚ್ಚರಿಕೆ ನೀಡುತ್ತಿದೆ. ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಸ್ಟೇಟಸ್ ಅಥವಾ ಅಭಿಪ್ರಾಯಗಳನ್ನು ಪೋಸ್ಟ್ ಮಾಡುವವರಿಗೆ ಒಂದು ಎಚ್ಚರಿಕೆ (Hijab Row WhatsApp Status) ಸಂದೇಶ ನೀಡಿದ್ದಾರೆ ಎಂಬ ಸಂದೇಶ ಹಲವೆಡೆ ಹರಿದಾಡುತ್ತಿದೆ.ಇದು ಅಧಿಕೃತ ಸಂದೇಶವೇ ಎಂಬ ಮಾಹಿತಿ ತಿಳಿದುಬಂದಿಲ್ಲ.

ಸದ್ಯ ಶಾಲಾ ಕಾಲೇಜುಗಳ ತರಗತಿಗಳಲ್ಲಿ ಹಿಜಾಬ್ ಧರಿಸಿಕೊಂಡು ಕೂರುವ ಕುರಿತು ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಅಲ್ಲದೇ ಹಿಜಾಬ್‌ಗೆ ಪ್ರತಿಯಾಗಿ ಕೇಸರಿ ಶಾಲು ಧರಿಸಿ ವಿದ್ಯಾರ್ಥಿಗಳು ಬಂದಿದ್ದರು. ಈಕುರಿತು ಗಲಭೆ-ಗಲಾಟೆಗಳು ನಡೆದಿರುವುದು ನಮಗೆಲ್ಲ ಗೊತ್ತೇ ಇದೆ. ಹೀಗಾಗಿ ಹಿಜಾಬ್-ಕೇಸರಿ ಶಾಲು ಗಲಾಟೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಹೇಳಿಕೆ ನೀಡುವವರಿಗೆ ಎಚ್ಚರಿಕೆ ನೀಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ವಾಟ್ಸಾಪ್ ಗ್ರೂಪ್‌ಗಳಲ್ಲಿ ಈ ಕೆಳಗಿನಂತೆ ಬರೆಯಲಾದ ವಾಟ್ಸಾಪ್ ಸಂದೇಶ ಹರಿದಾಡುತ್ತಿದೆ. ಇದು ಉತ್ತರ ಕನ್ನಡ ಪೊಲೀಸರು ಹೊರಡಿಸಿದ ಅಧಿಕೃತ ಪ್ರಕಟಣೆ ಅಲ್ಲ ಎಂದು ಸಹ ಹೇಳಲಾಗಿದೆ

“ಕಾರವಾರ ಜಿಲ್ಲೆಯ ಎಲ್ಲ ತಾಲೂಕು ಹಾಗೂ ನಗರ ಮತ್ತು ಗ್ರಾಮಗಳಲ್ಲಿ ಯಾರಾದರೂ ಹಿಜಾಬ್ ಮತ್ತು ಕೇಸರಿ ಶಾಲು ವಿಚಾರಕ್ಕೆ ಸಂಬಂಧಿಸಿ ವಾಟ್ಸಾಪ್, ಫೇಸ್‌ಬುಕ್ ಮತ್ತು ಇನ್ಸ್‌ಟಾಗ್ರಾಮ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ರೀತಿಯ ಪೋಸ್ಟರ್ ಮತ್ತು ಪ್ರಚೋದನಕಾರಿ ಹೇಳಿಕೆ  ಹಾಕಿದಲ್ಲಿ ಇದಕ್ಕೆ ಸಂಬಂಧಪಟ್ಟಂತೆ ಯಾರಾದ್ರೂ ಗುಂಪುಗಾರಿಕೆ, ಗಲಾಟೆ, ದೊಂಬಿ ವಗೈರೆ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಂಡು ರೌಡಿ ಶೀಟ್‌ಗಳನ್ನು ತೆಗೆಯಲಾಗುವುದು. ಒಂದು ವೇಳೆ ಇದರ ಬಗ್ಗೆ ಮಾಹಿತಿ ಇದ್ದಲ್ಲಿ ಕಾನೂನು ಕೈಗೆತ್ತಿಕೊಳ್ಳದೆ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸುವುದು” ಎಂದು ಉತ್ತರ ಕನ್ನಡದ ಪೊಲೀಸ್ ಅಧೀಕ್ಷಕರು ಸೂಚನೆ ನೀಡಿದ್ದಾರೆ.

ಕಳೆದ ಕೆಲ ದಿನಗಳಿಂದ ಕರ್ನಾಟಕದಲ್ಲಿ ನಡೆಯುತ್ತಿರುವ ಒಂದು ಘಟನೆ-ಪ್ರತಿಭಟನೆ-ಹೋರಾಟ ಇಡೀ ದೇಶವಷ್ಟೇ ಅಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ.  ಹಿಜಾಬ್‌ ವಿವಾದಕ್ಕೆ (Hijab Row) ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ (Karnataka High Court) ತ್ರಿ ಸದಸ್ಯ ಪೀಠ ವಿಚಾರಣೆಯನ್ನು(Hijab controversy hearing postponement) ಸೋಮವಾರಕ್ಕೆ ಮುಂದೂಡಿದೆ. ಮುಂದಿನ ಆದೇಶದವರೆಗೆ ಶಾಲೆ, ಕಾಲೇಜುಗಳಲ್ಲಿ ಹಿಜಾಬ್‌ ಹಾಗೂ ಕೇಸರಿ ಶಾಲು (Hijab and Saffron Shawl Controversy) ಸೇರಿದಂತೆ ಯಾವುದೇ ಧಾರ್ಮಿಕ ಉಡುಗೆಗಳನ್ನು ತೊಡುವಂತಿಲ್ಲಎಂದು ಮೌಖಿಕ ಸೂಚನೆ (Hijab controversy hearing postponement) ನೀಡಿದೆ ಹೈಕೋರ್ಟ್. ಸದ್ಯ ಭಯಂಕರ ಚರ್ಚೆ ಮತ್ತು ವಿವಾದದ ಸ್ವರೂಪದಲ್ಲಿರುವ ಮುಸ್ಲಿಂ ಮಹಿಳೆಯರು ಧರಿಸುವ ಉಡುಪು ಹಿಜಾಬ್. ಇದು ಹಲವು ಬಣ್ಣಗಳಲ್ಲಿರುತ್ತದೆ ಮತ್ತು ವಿವಿಧ ತೆರನಾದ ಬಟ್ಟೆಗಳಿಂದ ರೂಪಿಸಲಾಗುವ ಉಡುಪಾಗಿದೆ. ಹಿಜಾಬ್ ಮಹಿಳೆಯರ ಕೂದಲು ಮತ್ತು ಕುತ್ತಿಗೆಯನ್ನು ಮುಚ್ಚುತ್ತದೆ. ಆದರೆ ಮುಖವನ್ನು ಮುಚ್ಚುವುದಿಲ್ಲ. ಆದರೆ ಹಿಜಾಬ್‌ನ್ನು ಕೆಲವು ದೇಶಗಳಲ್ಲಿ (Countries banned Face Veils) ನಿಷೇಧಿಸಲಾಗಿದೆ.

ಇದನ್ನೂ ಓದಿ: Hijab Explainer: ಹಿಜಾಬ್ ಎಂದರೇನು? ಬುರ್ಖಾ, ನಿಕಾಬ್‌ಗೂ ಹಿಜಾಬ್‌ಗೂ ಇರುವ ವ್ಯತ್ಯಾಸವೇನು?

(Hijab Row WhatsApp Status be alert before in social media WhatsApp status)

Comments are closed.