ಅನ್ನದಾತನ ಅಂಗಳದಲ್ಲಿ‌ ಪುನೀತ್‌ ರಾಜ್‌ ಕುಮಾರ್ : ರೈತನ ಅಭಿಮಾನಕ್ಕೆ ಮೆಚ್ಚಿದ ಅಪ್ಪು ಪತ್ನಿ ಅಶ್ವಿನಿ

ಅಪ್ಪು ಸತ್ತು ವರ್ಷಗಳು ಉರುಳುತ್ತಲೇ ಇದ್ದರೂ ದೊಡ್ಮನೆ ರಾಜಕುಮಾರ್ ನ ಮೇಲಿನ ಪ್ರೀತಿ ಅಭಿಮಾನ ಜನರ ಮನಸ್ಸಿನಿಂದ ಒಂದಿಂಚೂ ಮಾಯವಾಗಿಲ್ಲ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ( Puneeth Raj Kumar) ಅಭಿಮಾನಿಗಳೇ ವಿಭಿನ್ನ. ನೆಚ್ಚಿನ ನಟ ಅಗಲಿದಾಗಿನಿಂದ ವಿಭಿನ್ನವಾಗಿ ತಮ್ಮ ಪ್ರೀತಿಯ ನಾಯಕನಿಗೆ ಗೌರವ ಸಲ್ಲಿಸುತ್ತಲೇ ಬಂದಿದ್ದಾರೆ. ಈ ಅಭಿಮಾನಿಗಳ ಪ್ರೀತಿಗೆ ಪುನೀತ್ ಪತ್ನಿ ಅಶ್ವಿನಿ (Ashwini Puneeth Rajkumar) ಕೂಡ ಅಷ್ಟೇ ಗೌರವ ನೀಡುತ್ತ ಬಂದಿದ್ದಾರೆ. ರಾಯಚೂರಿನ ವಿಶೇಷ ಚೇತನ ರೈತರೊಬ್ಬರ ಅಪ್ಪು ಅಭಿಮಾನಕ್ಕೆ ಸ್ವತಃ ಅಶ್ವಿನಿ ಕೂಡ ಮನಸೋತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ರೈತನ ಅಭಿಮಾನವನ್ನು ಅಶ್ವಿನಿ ಪುನಿತ್‌ ರಾಜ್‌ ಕುಮಾರ್‌ ಅವರು  ಹಂಚಿಕೊಂಡಿದ್ದಾರೆ. ಅಪ್ಪು ಸತ್ತು ವರ್ಷಗಳು ಉರುಳುತ್ತಲೇ ಇದ್ದರೂ ದೊಡ್ಮನೆ ರಾಜಕುಮಾರ್ ನ ಮೇಲಿನ ಪ್ರೀತಿ ಅಭಿಮಾನ ಜನರ ಮನಸ್ಸಿನಿಂದ ಒಂದಿಂಚೂ ಮಾಯವಾಗಿಲ್ಲ. ಇಂದಿಗೂ ಜನರು ರಕ್ತದಾನ ಶಿಬಿರ, ಪಾರ್ಕ್ ನಿರ್ಮಾಣ, ಪುಸ್ತಕ ವಿತರಣೆ ಹೀಗೆ ನಾನಾ ಕಾರ್ಯಕ್ರಮದ ಮೂಲಕ ಅಗಲಿದ ಅಪ್ಪುಗೆ ನಮನ ಸಲ್ಲಿಸುತ್ತಲೇ ಇದ್ದಾರೆ.

ಅದರಲ್ಲೂ ಇಲ್ಲೊಬ್ಬ ವಿಶೇಷ ಚೇತನ ಅನ್ನದಾತ ತನ್ನ ಕೃಷಿಭೂಮಿಯಲ್ಲಿ ಪರಮಾತ್ಮನಿಗೆ ಗೌರವ ಸಲ್ಲಿಸಿದ್ದಾನೆ. ಅನ್ನ ನೀಡುವ ಭತ್ತದ ಸಸಿಗಳಲ್ಲೇ ದೊಡ್ಮನೆಯ ರಾಜಕುಮಾರ್ ನನ್ನು ಮೂಡಿಸಿ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.

Puneeth Rajkumar Photos Grow in Paddy From photos goes Viral
Image Credit to Original Source

ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಡೋಣಿ ಬಸವಣ್ಣ ಕ್ಯಾಂಪ್ ನ ರೈತ ಹಾಗೂ ಅಪ್ಪು ಅಭಿಮಾನಿ ವಿಶೇಷ ಚೇತನ ಸತ್ಯನಾರಾಯಣ್ ತಮ್ಮ ಎರಡು ಎಕರೆ ಕೃಷಿ ಭೂಮಿಯನ್ನು ಅಪ್ಪು ಅಭಿಮಾನ ಕ್ಕಾಗಿ ಮೀಸಲಿರಿಸಿದ್ದಾರೆ. ಎರಡು ಎಕರೆ ಜಮೀನಿನಲ್ಲಿ ಸತ್ಯನಾರಾಯಣ್ ಜಪಾನ್ ತಂತ್ರಜ್ಞಾನದ ಮೂಲಕ ವಿವಿಧ ಭತ್ತದ ತಳಿಗಳನ್ನು ಪುನೀತ್ ಭಾವಚಿತ್ರದ ರೂಪದಲ್ಲಿ ಸಿದ್ಧಪಡಿಸಿದ್ದಾರೆ.

ಇದನ್ನೂ ಓದಿ : ಬಾಲಿವುಡ್ ನಟಿಯರಿಗೂ ಸೆಡ್ಡು ಹೊಡೆಯೋ ಸುಂದರಿ: ಇದು ಧನ್ಯಾ ರಾಮಕುಮಾರ್ ಮನಸೆಳೆಯೋ ಪೋಟೋಶೂಟ್

ತೆಲಂಗಾಣ, ಗುಜರಾತ್ ನಿಂದ ತಂದ ಗೋಲ್ಡನ್ ರೋಸ್, ಕಾಲಭಟ್ಟಿ ಹೆಸರಿನ 100 ಕೆಜಿ ಭತ್ತದ ಬೀಜಗಳನ್ನು ನೆಟ್ಟು ಸಾವಯವ ರೀತಿಯಲ್ಲೇ ಬೆಳೆಸಿ 3 ಲಕ್ಷ ರೂಪಾಯಿ ವೆಚ್ಚದಲ್ಲಿ 90 ದಿನ ಶ್ರಮವಹಿಸಿ ಅನ್ನದಾತನ ಅಂಗಳದಲ್ಲಿ ಪುನೀತ್ ರನ್ನು ಜೀವಂತವಾಗಿರಿಸಿ ತಮ್ಮ ಅಭಿಮಾನ ಮೆರೆದಿದ್ದಾರೆ.

ಒಂದೊಂದು ಅಕ್ಷರವನ್ನು 40 ಅಡಿಯಾಗಿ ರೂಪಿಸಿದ್ದು ಸತ್ಯನಾರಾಯಣ್ ತಮ್ಮ ಅಂಗವೈಕಲ್ಯವನ್ನು ಮೆಟ್ಟಿ ನಿಂತು ಈ ಸಾಹಸ ಮಾಡಿದ್ದಾರೆ. ಸದ್ಯ ಸತ್ಯನಾರಾಯಣ ಈ ಭಾವಚಿತ್ರವನ್ನು ಪುನೀತ್ ದ್ವೀತಿಯ ಪುಣ್ಯ ಸ್ಮರಣೆಗೆ ಅರ್ಪಿಸುವ ಚಿಂತನೆಯಲ್ಲಿದ್ದು, ಅದಕ್ಕಾಗಿ ಸ್ವತಃ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರನ್ನೇ ಆಹ್ವಾನಿಸುವ ಸಿದ್ಧತೆಯಲ್ಲಿದ್ದಾರಂತೆ‌.

Puneeth Rajkumar Photos Grow in Paddy From photos goes Viral
Image Credit to Original Source

ಇನ್ನೂ ಈ ವಿಶೇಷ ಅಭಿಮಾನಿಯ ಅಭಿಮಾನದ ಅಪ್ಪು ವಿಡಿಯೋವನ್ನು ಸ್ವತಃ ಅಶ್ವಿನಿ ಪುನೀತ್ ರಾಜ್ ಕುಮಾರ್ ತಮ್ಮ ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಪುನೀತ್ ಭಾವಚಿತ್ರವನ್ನು ಕೃಷಿಭೂಮಿಯಲ್ಲಿ ಅರಳಿಸುವ ಮುನ್ನ ಭೂಮಿ ಹದ ಮಾಡೋದರಿಂದ ಆರಂಭಿಸಿ ಕೃಷಿ, ಬಿತ್ತನೆ ಹೀಗೆ ಎಲ್ಲ ಹಂತದ ವಿಡಿಯೋಗಳನ್ನು ಸೇರಿಸಿ ಸಿದ್ಧಪಡಿಸಲಾದ ವಿಡಿಯೋ ಹಂಚಿಕೊಂಡಿರೋ ಅಶ್ವಿನಿ ಅಭಿಮಾನಿಯ ಅಭಿಮಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಮೇಘನಾ‌ ರಾಜ್‌ ಸರ್ಜಾ ಮನಗೆದ್ದ ಮಾತು ! ಅಶ್ವಿನಿ ಪುನೀತ್ ರಾಜ್‌ ಕುಮಾರ್‌ ಕೊಟ್ಟ ಪ್ರೇರಣೆ ನೆನೆದ ಕುಟ್ಟಿಮಾ

ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಶ್ರೀನಿವಾಸ್ ಕ್ಯಾಂಪ್ ನ ಶ್ರೀ ಕೆ.ಸತ್ಯನಾರಾಯಣ್ ಅವರು ತಮ್ಮ ಎರಡು ಎಕರೆ ಜಮೀನಿನಲ್ಲಿ ಭತ್ತದಲ್ಲಿ ಅಪ್ಪು ಅವರ ವಿಶೇಷ ಚಿತ್ರ ನಿರ್ಮಿಸಿ ತಮ್ಮ ಪ್ರೀತಿ ತೋರಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಅಶ್ವಿನಿ ಬರೆದುಕೊಂಡಿರೋ ಪೋಸ್ಟ್ ಗೆ ಈಗಾಗಲೇ ಸಾವಿರಾರು ಲೈಕ್ಸ್ ಬಂದಿದ್ದು ಅಪ್ಪು ಅಭಿಮಾನಿಗಳು ಪುನೀತ್ ರನ್ನು ಬೆಳೆಯುತ್ತಿರೋ ಭತ್ತದ ಸಸಿಗಳಲ್ಲಿ ಕಂಡು ಖುಷಿಯಾಗಿದ್ದಾರೆ. ಸದ್ಯದಲ್ಲೇ ಅಶ್ವಿನಿ ಖುದ್ದು ರೈತನ ಕೃಷಿಭೂಮಿಗೆ ಭೇಟಿ ನೀಡಲಿದ್ದು ಅಪ್ಪು ಮೇಲಿನ ಅಭಿಮಾನಕ್ಕೆ ಗೌರವವಾಗಿ ಸತ್ಯನಾರಾಯಣ ಅವರನ್ನು ಸನ್ಮಾನಿಸಲಿದ್ದಾರಂತೆ.

Puneeth Rajkumar Photos Grow in Paddy From photos goes Viral

Comments are closed.