ಭಾನುವಾರ, ಏಪ್ರಿಲ್ 27, 2025
HomeCinemaPuneeth Rajkumar Tattoo : ಎದೆ ಮೇಲೆ ಅಪ್ಪು ಟ್ಯಾಟೂ ಮೂಲಕ ಪುನೀತ್ ರಾಜ್‌ ಕುಮಾರ್‌...

Puneeth Rajkumar Tattoo : ಎದೆ ಮೇಲೆ ಅಪ್ಪು ಟ್ಯಾಟೂ ಮೂಲಕ ಪುನೀತ್ ರಾಜ್‌ ಕುಮಾರ್‌ ಗೆ ರಾಘಣ್ಣನ ವಿಶಿಷ್ಟ ಗೌರವ

- Advertisement -

ಹುಟ್ಟುತ್ತ ಅಣ್ಣ ತಮ್ಮಂದಿರು ಬೆಳೆಯುತ್ತ ದಾಯಾದಿಗಳು ಅನ್ನೋ ಮಾತಿದೆ. ಆದರೆ ಸಿನಿರಂಗದ ದೊಡ್ಮನೆಯಲ್ಲಿ (Puneeth Rajkumar Tattoo) ಈ ಮಾತು ಸುಳ್ಳಾಗಿದೆ. ದೇಹ ಬೇರೆ ಬೇರೆಯಾದರೂ ಆತ್ಮ ಒಂದೇ ಎಂಬ ಒಗ್ಗಟ್ಟಿನಿಂದ ಡಾ.ರಾಜ್ ಕುಮಾರ್ ಕುಟುಂಬದ ಮಕ್ಕಳು ಬದುಕುತ್ತಿದ್ದಾರೆ. ಹೃದಯಾಘಾತ ದಿಂದ ಪುನೀತ್ ರಾಜ್ ಕುಮಾರ್ ನಿಧನರಾಗಿದ್ದರೂ ಪುನೀತ್ ಸಹೋದರ ರಾಘಣ್ಣ ಪ್ರತಿನಿತ್ಯ ಸಹೋದರನ ನೆನಪಿನಲ್ಲೇ ಇರುತ್ತಾರೆ. ಈಗ ಒಂದು ಹೆಜ್ಜೆ ಮುಂದೇ ಹೋಗಿ ತಮ್ಮನ ಹೆಸರನ್ನು ದೇಹದೊಂದಿಗೆ ಬೆಸೆದುಕೊಂಡಿದ್ದಾರೆ.

ಪುನೀತ್ ರಾಜ್ ಕುಮಾರ್ ನಿಧನ ಲಕ್ಷಾಂತರ ಅಭಿಮಾನಿಗಳಿಗೆ ಮಾತ್ರವಲ್ಲ ಅವರ ಫಿಟನೆಸ್ ಹಾಗೂ ವರ್ಕೌಟ್ ನ್ನು ಹತ್ತಿರದಿಂದ ಕಂಡ ಕುಟುಂಬದವರಿಗೂ ಶಾಕ್ ತಂದಿದ್ದು ಸುಳ್ಳಲ್ಲ. ಅದರಲ್ಲೂ ಅನಾರೋಗ್ಯದಿಂದ ಸಾವಿನ ದವಡೆವರೆಗೂ ಹೋಗಿ ಬಂದಿದ್ದ ಪುನೀತ್ ರಾಜ್ ಕುಮಾರ್ ಸಹೋದರ ರಾಘವೇಂದ್ರ್ ರಾಜ್ ಕುಮಾರ್ ಗೆ ಪ್ರೀತಿಯ ಅಪ್ಪು ನಿಧನ ದೊಡ್ಡ ಶಾಕ್ ತಂದಿತ್ತು. ಆಪ್ಪು ನಿಧನದ ಬಳಿಕ ರಾಘವೇಂದ್ರ ರಾಜಕುಮಾರ್ ಸದಾ ಕಾಲ ಬಹುತೇಕ ಕಾರ್ಯಕ್ರಮ, ಸಮಾರಂಭ , ಅಪ್ಪು ನೆನಪಿನ ಕಾರ್ಯಕ್ರಮ ಹೀಗೆ ಎಲ್ಲೆಡೆಯೂ ಕಣ್ಣೀರುಗರೆಯುತ್ತಲೇ ಮಾತನಾಡಿದ್ದಾರೆ.

ಅಷ್ಟೇ ಅಲ್ಲ ಪುನೀತ್ ರನ್ನು ಹೂತಿಲ್ಲ ಬಿತ್ತಿದ್ದೇವೆ ಎನ್ನುವ ಮೂಲಕ ತಮ್ಮ ದುಃಖವನ್ನು ಮರೆಯುವ ಪ್ರಯತ್ನ ಮಾಡುತ್ತ ಬಂದಿದ್ದಾರೆ. ಮಾತ್ರವಲ್ಲ ಪುನೀತ್ ನಿಧನದ ಬಳಿಕ ಪ್ರತಿನಿತ್ಯವೂ ಮನೆ ಮಗನಂತಿದ್ದ ಪುನೀತ್ ಹೆಸರನ್ನು ಸದಾ ನೆನಪಿಸಿಕೊಳ್ಳುವ ಉದ್ದೇಶದಿಂದ ಪುನೀತ್ ಹೆಸರಿನ ಬ್ಯಾಡ್ಜ್ ಧರಿಸಲಾರಂಭಿಸಿದ್ದರು. ಆದರೆ ಈಗ ಮತ್ತೊಂದೆ ಹೆಜ್ಜೆ ಮುಂದೇ ಹೋಗಿರುವ ರಾಘವೇಂದ್ರ್ ರಾಜಕುಮಾರ್, ಪುನೀತ್ ಹೆಸರನ್ನು ತಮ್ಮ ದೇಹದ ಮೇಲೆ ಹಚ್ಚೆಯ ಮೂಲಕ ಶಾಶ್ವತವಾಗಿಸಿದ್ದಾರೆ‌.

ಇದನ್ನೂ ಓದಿ : Rebel star Ambareesh’s birthday : ರೆಬೆಲ್ ಸ್ಟಾರ್ ಅಂಬರೀಶ್ ಹುಟ್ಟುಹಬ್ಬ : ವಿಶೇಷವಾಗಿ ಸ್ಮರಿಸಿದ ಪತ್ನಿ ಸುಮಲತಾ ಅಂಬರೀಶ್

ತಮ್ಮ ಬಲ ಎದೆಯ ಮೇಲೆ ರಾಘಣ್ಣ ಅಪ್ಪು ,ಟೊಟೊ ,ನುಕ್ಕಿ ಎಂದು ಬರೆಸಿಕೊಂಡಿದ್ದಾರೆ. ಸ್ವತಃ ಈ ಪೋಟೋವನ್ನು ರಾಘಣ್ಣ ಸೋಷಿಯಲ್ ಮೀಡಿಯಾ ದಲ್ಲಿ ಶೇರ್ ಮಾಡಿದ್ದು ಅಭಿಮಾನಿಗಳು, ರಾಘಣ್ಣ ಪುನೀತ್ ರಾಜ್ ಕುಮಾರ್ ಮೇಲಿಟ್ಟಿರುವ ಪ್ರೀತಿ,ಅಭಿಮಾನವನ್ನು ಕಂಡು ಅಕ್ಷರಶಃ ಕಣ್ಣೀರಾಗಿದ್ದಾರೆ. ಬೆಂಗಳೂರಿನ ಟ್ಯಾಟೂ ಸೆಂಟರ್ ಒಂದರಲ್ಲಿ ರಾಘಣ್ಣ ಅಪ್ಪು ಹೆಸರಿನ ಹಚ್ಚೆ ಹಾಕಿಸಿಕೊಂಡಿದ್ದಾರೆ. ಪುನೀತ್ ತಮ್ಮ ಅನಾರೋಗ್ಯ ಸೇರಿದಂತೆ ಎಲ್ಲ ಹೊತ್ತಿನಲ್ಲೂ ಮಗನಂತೆ ನಿಂತು ಸೇವೆ ಮಾಡಿದ್ದಾನೆ. ಅವನಿಗೆ ಜನರು ತೋರುವ ಅಭಿಮಾನ ನೋಡಿದ್ರೇ ನಾನೇ ಹೋಗಿ ಅವನೇ ಬದುಕಿ ಬರಬೇಕಿತ್ತು ಎಂದು ರಾಘಣ್ಣ ಹಲವು ಭಾರಿ ಹೇಳಿಕೊಂಡಿದ್ದರು. ಈಗ ಅಪ್ಪು ಟ್ಯಾಟೂ ಮೂಲಕ ಸಹೋದರನ ಮೇಲಿನ ತಮ್ಮ ಅಭಿಮಾನ ಮೆರೆದಿದ್ದಾರೆ.

Puneeth Rajkumar Tattoo : Raghavendra Rajkumar’s unique tribute to Puneeth Rajkumar with appu tattoo on chest

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular