ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ‘ಯುವರತ್ನ’ ಬಹು ನಿರೀಕ್ಷಿತ ಸಿನಿಮಾ. ಸ್ಯಾಂಡಲ್ ವುಡ್ ನಲ್ಲಿ ಈಗಾಗಲೇ ಸಿನಿಮಾ ದೊಡ್ಡ ಮಟ್ಟದಲ್ಲಿ ಹವಾ ಕ್ರಿಯೇಟ್ ಮಾಡಿದೆ. ಈ ನಡುವಲ್ಲೇ ಸಿನಿಮಾದ ಪೋಟೋಗಳನ್ನು ಕಿಡಿಗೇಡಿಗಳು ಆನ್ ಲೈನ್ ನಲ್ಲಿ ಲೀಕ್ ಮಾಡಿದ್ದಾರೆ.

ನಿರ್ದೇಶಕ ಸಂತೋಷ್ ಆನಂದ ರಾಮ್ ಸಿನಿಮಾದ ಪೋಸ್ಟರ್, ಟೀಸರ್ ಗಳನ್ನು ಈಗಾಗಲೇ ಬಿಡುಗಡೆ ಮಾಡಿದ್ದಾರೆ. ಮಾತ್ರವಲ್ಲ ಕೊರೊನಾ ಮುಗಿಯುತ್ತಿದ್ದಂತೆಯೇ ಸಿನಿಮಾದ ಹಾಡೊಂದನ್ನು ಬಿಡುಗಡೆ ಮಾಡುವುದಾಗಿಯೂ ಹೇಳಿದ್ದಾರೆ.
ಈ ನಡುವಲ್ಲೇ ಸಿನಿಮಾದ ಪೋಟೋಗಳು ವೈರಲ್ ಆಗಿವೆ. ಹೀಗಾಗಿ ನಿರ್ದಶಕ ಸಂತೋಷ್ ಆನಂದ ರಾಮ್, ವೈರಲ್ ಆಗಿರುವ ಪೋಟೋಗಳನ್ನು ಎಲ್ಲರೂ ಡಿಲೀಟ್ ಮಾಡುವಂತೆ ಮನವಿ ಮಾಡಿದ್ದಾರೆ.
ತಮ್ಮ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ‘ಎಲ್ಲಾ ಪವರ್ ಸ್ಟಾರ್ ಅಭಿಮಾನಿಗಳಲ್ಲಿ ನನ್ನ ವಿನಂತಿ. ಯುವರತ್ನ ಸಿನಿಮಾದ ಪೋಟೋಗಳನ್ನು ಯಾರೋ ಕಡಿಗೇಡಿಗಳು ಲೀಕ್ ಮಾಡಿದ್ದಾರೆ. ಪ್ರತೀ ಅಭಿಮಾನಿಗೂ ನನ್ನ ಕೋರಿಕೆ. ದಯವಿಟ್ಟು ನೀವು ಸ್ಟಿಲ್ಸ್ ಗಳನ್ನು ಶೇರ್ ಮಾಡುವುದರು ಬಿಡಿ. ಡಿಲೀಟ್ ಮಾಡಿ. ಅದು ನೀವು ಅಪ್ಪು ಸರ್ ಹಾಗೂ ಯುವರತ್ನ ಸಿನಿಮಾಗೆ ಸೂಚಿಸುವ ಗೌರವ ಎಂದು ಭಾವಿಸುತ್ತೇವೆ ಅಂತಾ ಬರೆದುಕೊಂಡಿದ್ದಾರೆ. ಪೋಸ್ಟರ್ ನಲ್ಲಿ ನಾನು ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ ಅಭಿಮಾನಿ #IdeletYuvarathanaPic,#supportYuvarathanaa ಎಂದು ವಿನಂತಿಸಿಕೊಂಡಿದ್ದಾರೆ.