ನಟನೆ. ನಿರ್ದೇಶನದ ನಡುವಲ್ಲೇ ಕೃಷಿಕರಾದ ರಿಯಲ್ ಸ್ಟಾರ್ !

0

ರಿಯಲ್ ಸ್ಟಾರ್ ಉಪೇಂದ್ರ… ಕನ್ನಡ ಚಿತ್ರರಂಗಕ್ಕೆ ರಿಯಲಿಸ್ಟಿಕ್ ಸಿನಿಮಾಗಳನ್ನು ಕೊಟ್ಟ ನಟ, ನಿರ್ದೇಶಕ. ಸದಾ ಸಿನಿಮಾ, ಪ್ರಜಾಕೀಯದ ಜೊತೆಗೆ ಬ್ಯುಸಿಯಾಗಿರುತ್ತಿದ್ದ ಉಪೇಂದ್ರ ಇದೀಗ ಕೃಷಿಕರಾಗಿದ್ದಾರೆ. ಮಾತ್ರವಲ್ಲ ತಮ್ಮ ಜಮೀನಿನಲ್ಲಿ ಹೂವು ಹಾಗೂ ವಿವಿಧ ತರಕಾರಿಗಳನ್ನು ಬೆಳೆದು ಸೈ ಎನಿಸಿಕೊಂಡಿದ್ದಾರೆ.

ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಚಿತ್ರರಂಗ ಸ್ತಬ್ದವಾಗಿದೆ. ನಟ, ನಟಿಯರು ಮನೆಯಲ್ಲಿಯೇ ಬಂಧಿಯಾಗಿದ್ದಾರೆ. ಈ ನಡುವಲ್ಲೇ ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಜಮೀನಿನಲ್ಲಿ ಸಾವಯವ ಕೃಷಿ ಮಾಡಿ ತಾನೊಬ್ಬ ಮಾದರಿ ರೈತ ಅನ್ನುವುದನ್ನು ಸಾಬೀತು ಮಾಡಿದ್ದಾರೆ.

ರಿಯಲ್ ಸ್ಟಾರ್ ಉಪೇಂದ್ರ ಹುಟ್ಟಿ ಬೆಳೆದಿದ್ದು ಸಿಲಿಕಾನ್ ಸಿಟಿ ಬೆಂಗಳೂರು ಆದ್ರೂ ಕೂಡ, ಅವರ ಹುಟ್ಟೂರು ಉಡುಪಿ ಜಿಲ್ಲೆಯ ತೆಕ್ಕಟ್ಟೆ. ಹೀಗಾಗಿಯೇ ಉಪೇಂದ್ರ ಅವರಿಗೆ ಕೃಷಿ, ರೈತರ ಬಗ್ಗೆ ಸಾಕಷ್ಟು ಕಾಳಜಿಯಿದೆ. ಬಾಲ್ಯದಿಂದಲೂ ಕೃಷಿಕಾಯಕವನ್ನು ಕಣ್ಣಾರೆ ಕಂಡಿದ್ದರಿಂದ ಕೃಷಿಕ ಸಮಸ್ಯೆ ರಿಯಲ್ ಸ್ಟಾರ್ ಅವರಿಗೆ ಚೆನ್ನಾಗಿಯೇ ಅರಿವಿದೆ. ಕೃಷಿ ಮೇಲಿನ ಆಸಕ್ತಿಯಿಂದಲೇ ಸಿಲಿಕಾನ್ ಸಿಟಿಯಲ್ಲಿದ್ದರೂ ಕೃಷಿ ಜಮೀನು ಖರೀದಿಸಿ ಅದರಲ್ಲಿಯೇ ಒಂದಿಷ್ಟು ಕೃಷಿಯನ್ನು ಮಾಡುತ್ತಲೇ ಬಂದಿದ್ದಾರೆ.

ಇದೀಗ ಲಾಕ್ ಡೌನ್ ಅವಧಿಯಲ್ಲಿ ಸುಮ್ಮನೆ ಇರಬಾರದು ಅಂತಾನೇ ತಮ್ಮ ಜಮೀನಿನಲ್ಲಿ ವಿವಿಧ ತರಕಾರಿ ಬೆಳೆಗಳನ್ನು ಬೆಳೆದು ಯಶಸ್ವಿಯಾಗಿದ್ದಾರೆ. ಉಪ್ಪಿ ಕೇವಲ ಕಾರ್ಮಿಕರನ್ನು ಬಳಸಿ ತಮ್ಮ ಜಮೀನಿನಲ್ಲಿ ಕೃಷಿ ಕಾರ್ಯ ಮಾಡಿಲ್ಲ, ಬದಲಾಗಿ ತಮ್ಮ ಕೈಯಿಂದಲೇ ತರಕಾರಿ ಗಿಡಗಳನ್ನು ಬೆಳೆಯುವ ಮೂಲಕ ಮಾದರಿಯಾಗಿ ನಿಂತಿದ್ದಾರೆ.

ಅದ್ರಲ್ಲೂ ರಾಸಾಯನಿಕಯುಕ್ತ ತರಕಾರಿ ಆರ್ಭಟ ಹೆಚ್ಚುತ್ತಿರೋ ಇಂದಿನ ದಿನಗಳಲ್ಲಿ ಕೇವಲ ಸಾವಯವ ಗೊಬ್ಬರವನ್ನು ಬಳಕೆ ಮಾಡಿ ತರಕಾರಿ ಬೆಳೆದಿದ್ದಾರೆ. ಅಲ್ಲದೇ ತಮ್ಮ ಕಾರ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಕೃಷಿ ಹಾಗು ಸಾವಯವ ಕೃಷಿಗೆ ಉತ್ತೇಜನ ನೀಡುವ ಕಾಯಕವನ್ನು ಮಾಡುತ್ತಿದ್ದಾರೆ.

ನಟನಾಗಿ ವಿಭಿನ್ನತೆಯಿಂದಲೇ ಹೆಸರು ಮಾಡಿದ್ದ ರಿಯಲ್ ಸ್ಟಾರ್ ಉಪೇಂದ್ರ, ಪ್ರಜಾಕೀಯ ಅನ್ನೋ ಹೊಸ ಕಾಸ್ಟೆಪ್ಟ್ ಮೂಲಕ ರಾಜಕೀಯ ವ್ಯವಸ್ಥೆಯನ್ನೇ ಬದಲಾಯಿಸೋದಕ್ಕೆ ಪಣತೊಟ್ಟಿದ್ದಾರೆ. ಈ ನಡುವಲ್ಲೇ ಕೃಷಿ ಕಾಯಕವನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಇದೀಗ ರಿಯಲ್ ಸ್ಟಾರ್ ಉಪೇಂದ್ರ ಅವರ ಸಾವಯವ ಕೃಷಿಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

https://www.instagram.com/tv/CBYBT4LgHeZ/
Leave A Reply

Your email address will not be published.