ಅಲ್ಲು ಅರ್ಜುನ್ ಹಾಗೂ ಸುಕುಮಾರ್ ಕಾಂಬಿನೇಷನ್ನಲ್ಲಿ ಬೆಳ್ಳಿತೆರೆಗೆ ಅಪ್ಪಳಿಸಿರುವ ಸಿನಿಮಾ ಪುಷ್ಪಾ(Pushpa Box Office Collection) ಬಾಕ್ಸಾಫೀಸಿನಲ್ಲಿ ಗಲ್ಲಾಪೆಟ್ಟಿಗೆ ಸೌಂಡ್ ಮಾಡುತ್ತಿದೆ. ನಟಿ ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಈ ಸಿನಿಮಾ ರಿಲೀಸ್ ಆದ ಮೊದಲ ದಿನವೇ ಕೋಟಿಗಟ್ಟಲೇ ಕಲೆಕ್ಷನ್ ಸಂಪಾದಿಸುವಲ್ಲಿ ಯಶಸ್ವಿಯಾಗಿದೆ ಎನ್ನಲಾಗಿದೆ.
ವಿಶೇಷವಾಗಿ ಮಹಾರಾಷ್ಟ್ರದಲ್ಲಿ ಪುಷ್ಪಾ ಸಿನಿಮಾ ಭರ್ಜರಿ ಹಿಟ್ ಆದಂತೆ ಕಾಣುತ್ತಿದೆ.ಮೊದಲ ದಿನವೇ ಪುಷ್ಪಾ ಸಿನಿಮಾವು ಇಲ್ಲಿ ಬರೋಬ್ಬರಿ 3 ಕೋಟಿ ರೂಪಾಯಿಯನ್ನು ಸಂಪಾದಿಸಿದೆ. ಅದರಲ್ಲೂ 1.50 ಕೋಟಿ ರೂಪಾಯಿ ಹಣವು ಕೇವಲ ಮುಂಬೈ ನಗರದಲ್ಲೇ ಗಳಿಸಲಾಗಿದೆ.
ಆದರೆ ಉತ್ತರ ಭಾರತದಲ್ಲಿ ಪುಷ್ಪಾ ಸಿನಿಮಾ ಕ್ರೇಜ್ ಅಷ್ಟೊಂದು ಇದ್ದಂತೆ ಕಾಣುತ್ತಿಲ್ಲ. ದೆಹಲಿ ಹಾಗೂ ಪಂಜಾಬ್ ಭಾಗಗಳಲ್ಲಂತೂ ಪುಷ್ಪಾ ಅತ್ಯಂತ ಕಡಿಮೆ ಪ್ರದರ್ಶನ ಕಂಡಿದೆ ಎನ್ನಲಾಗಿದೆ. ಇನ್ನು ಹೋಮ್ಟೌನ್ ಬಗ್ಗೆ ಮಾತನಾಡೊದಾದ್ರೆ ಪುಷ್ಪಾ ಸಿನಿಮಾವು 11. 45 ಕೋಟಿ ಸಂಗ್ರಹಿಸುವ ಮೂಲಕ ಬಾಕ್ಸಾಫೀಸಿನಲ್ಲಿ ಹೊಸ ದಾಖಲೆಯನ್ನೇ ನಿರ್ಮಿಸಿದೆ. ತೆಲಂಗಾಣದಲ್ಲೂ ಐದು ಪ್ರದರ್ಶನ ಕಂಡಿರುವ ಈ ಸಿನಿಮಾ ಉತ್ತಮ ಮೊತ್ತದ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.
ಹಿಂದಿ ಟ್ರೇಡ್ ಸಮೀಕ್ಷೆಯ ಪ್ರಕಾರ ಪುಷ್ಪಾ ಸಿನಿಮಾವು ವೀಕೆಂಡ್ನಲ್ಲಿ ಉತ್ತಮ ಕಲೆಕ್ಷನ್ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ. ಅಲ್ಲದೆ ಪುಷ್ಪಾ ಸಿನಿಮಾದ ಹಿಂದಿ ಆವೃತ್ತಿಯು ಕೆಜಿಎಫ್ನ ಒಂದು ದಿನದ ಸಂಗ್ರಹವನ್ನು ಮೀರಿಸಿದೆ ಎನ್ನಲಾಗಿದೆ. ತಮಿಳುನಾಡಿನಲ್ಲಿ ಪುಷ್ಪಾ ಸಿನಿಮಾವು ಬರೋಬ್ಬರಿ 4 ಕೋಟಿ ರೂಪಾಯಿ ಗಳಿಸಿದೆ ಎನ್ನಲಾಗಿದೆ.ರಾಜ್ಯದಲ್ಲಿ ಈಗಾಗಲೇ 3.60 ಕೋಟಿ ರೂಪಾಯಿಗಳನ್ನು ಬಾಚಿರುವ ಪುಷ್ಪಾ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಮಲಯಾಳಂ ಭಾಷೆಯಲ್ಲಿಯೂ ಈ ಸಿನಿಮಾ ಉತ್ತಮ ಆರಂಭವನ್ನು ಪಡೆದುಕೊಂಡಿದೆ. ‘ಪುಷ್ಪ’ದ ಸಂಪೂರ್ಣ ವಿರಾಮ ಇಲ್ಲಿದೆ – ದೇಶಾದ್ಯಂತ ವಿವಿಧ ಪ್ರದೇಶಗಳಲ್ಲಿನ ಸಂಗ್ರಹಗಳು
- ಮುಂಬೈ – 1,41,00,000
- ದೆಹಲಿ / ಯುಪಿ – 62,00,000
- ಪೂರ್ವ ಪಂಜಾಬ್ – 14,00,000
- ರಾಜಸ್ಥಾನ – 16,00,000
- ಸಿಪಿ ಬೇರಾರ್ – 49,00,000
- ಆಂಧ್ರ ಪ್ರದೇಶ – 30,50,00,000
- ಮೈಸೂರು / ಕರ್ನಾಟಕ – 5,23,00,000
- ತಮಿಳುನಾಡು – 3,07,00,000
- ಕೇರಳ – 1,28,00,000
- ಪಶ್ಚಿಮ ಬಂಗಾಳ – 24,00,000
- ಬಿಹಾರ – 20,00,000
ಇದನ್ನು ಓದಿ : Omicron third wave : ‘ಫೆಬ್ರವರಿಯಿಂದ ದೇಶದಲ್ಲಿ ಕೊರೊನಾ ಮೂರನೇ ಅಲೆ’ : ಕೋವಿಡ್ ಸೂಪರ್ಮಾಡೆಲ್ ಸಮಿತಿ
ಇದನ್ನೂ ಓದಿ: Nora Fatehi : ಮಿಂಚಿನಂತೆ ಬಳುಕುವ ತಾರೆ : ಬಾಲಿವುಡ್ ನ ನಂ1. ಐಟಂ ಡ್ಯಾನ್ಸರ್ ನೋರಾ ಪತೇಹಿ
ಇದನ್ನೂ ಓದಿ : ಐಟಂ ಸಾಂಗ್ ಅಂದ್ರೇ ನಂಗೇ ದೇವರ ಹಾಡಿದ್ದಂತೆ : ಪುಷ್ಪ ಮ್ಯೂಸಿಕ್ ಡೈರೈಕ್ಟರ್ ವಿವಾದ
ಇದನ್ನೂ ಓದಿ : ಬಿಗ್ ಸ್ಕ್ರಿನ್ ಗೆ ಮದ್ಯದ ದೊರೆ : ವೆಬ್ ಸೀರಿಸ್ ರೂಪದಲ್ಲಿ ವಿಜಯ್ ಮಲ್ಯ ಸ್ಟೋರಿ
Pushpa Box Office Collection opening day: Beats ‘KGF’ Day 1 collections