Bengaluru Metro :ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ BMRCL

ಬೆಂಗಳೂರು : ಸಿಲಿಕಾನ್ ಸಿಟಿ ಮಂದಿಗೆ ಮೆಟ್ರೋ ಸೇವೆ(Bengaluru Metro) ಅನ್ನೋದು ಒಂದು ರೀತಿ ಲೈಫ್​ ಸೇವರ್ ಇದ್ದಂತೆ. ಟ್ರಾಫಿಕ್​ ಜಂಜಾಟಗಳಿಂದ ಮುಕ್ತಿ ಸಿಗಬೇಕು ಅಂದರೆ ರಾಜಧಾನಿ ಮಂದಿ ಮೆಟ್ರೋ ಸರ್ವೀಸ್​ಗೆ ಜೈ ಅಂತಾರೆ. ಬಿಎಂಆರ್​ಸಿಎಲ್​ ಕೂಡ ನಗರದಾದ್ಯಂತ ತನ್ನ ಸೇವೆಯನ್ನು ವಿಸ್ತರಿಸುವ ಸಲುವಾಗಿ ಕಾಮಗಾರಿಗಳನ್ನು ನಡೆಸುತ್ತಲೇ ಇದೆ. ಪ್ರಯಾಣಿಕರ ಅನುಕೂಲಕ್ಕೆ ಒಂದಿಲ್ಲೊಂದು ಸೌಲಭ್ಯಗಳನ್ನು ನೀಡುತ್ತಲೇ ಬಂದಿರುವ ಮೆಟ್ರೋ ಇದೀಗ ತನ್ನ ಸೇವಾ ಅವಧಿಯನ್ನು ಇನ್ನೂ ಹೆಚ್ಚಿಸಲು ನಿರ್ಧರಿಸಿದೆ.


ಈ ಸಂಬಂಧ ಶನಿವಾರ ಮಾಹಿತಿ ನೀಡಿರುವ ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್​ ಲಿಮಿಟೆಡ್​​ ಬೆಳಗ್ಗೆ ಮೆಟ್ರೋ ಸೇವೆಯು ಒಂದು ಗಂಟೆ ಮುಂಚಿತವಾಗಿ ಪ್ರಯಾಣಿಕರಿಗೆ ಸಿಗಲಿದೆ ಎಂದು ಹೇಳಿದೆ.
ಸೋಮವಾರದಿಂದ ಬೆಂಗಳೂರು ನಮ್ಮ ಮೆಟ್ರೋ ಸೇವೆಯು ಬೆಳಗ್ಗೆ 5 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಲಭ್ಯವಿರಲಿದೆ ಎಂದು ಬಿಎಂಆರ್​ಸಿಎಲ್​ ಹೇಳಿಕೆ ನೀಡಿದೆ. ಇಲ್ಲಿಯವರೆಗೆ ಮೆಟ್ರೋ ಸೇವೆಯು ಬೆಳಗ್ಗೆ ಆರು ಗಂಟೆಯಿಂದ ಆರಂಭವಾಗುತ್ತಿತ್ತು.


ಕೋವಿಡ್​ಗೂ ಮುಂಚೆ ಬಿಎಂಆರ್​ಸಿಎಲ್​ ನಮ್ಮ ಮೆಟ್ರೋ ಬೆಳಗ್ಗೆ 5 ಗಂಟೆಯಿಂದಲೇ ಪ್ರಯಾಣಿಕರಿಗೆ ಸೇವೆ ನೀಡುತ್ತಿತ್ತು. ಆದರೆ ಕೋವಿಡ್ ಸಾಂಕ್ರಾಮಿಕದ ಬಳಿಕ ವಿವಿಧ ಬದಲಾವಣೆಗಳನ್ನು ತರಲಾಗಿದ್ದು ಮೆಟ್ರೋ ಸೇವೆಯು ಪ್ರಸ್ತುತ 6 ಗಂಟೆಯಿಂದ ಆರಂಭವಾಗುತ್ತಿತ್ತು. ಆದರೆ ಸೋಮವಾರದಿಂದ ಪುನಃ 5 ಗಂಟೆಯಿಂದಲೇ ಮೆಟ್ರೋ ಸರ್ವೀಸ್​ ಆರಂಭವಾಗಲಿದೆ ಎಂದು ಬಿಎಂಆರ್​ಸಿಎಲ್​ ಅಧಿಕೃತ ಹೇಳಿಕೆ ನೀಡಿದೆ. ಅಂದರೆ ನಾಳೆ ಬೆಳಗ್ಗೆ ಐದು ಗಂಟೆಯಿಂದ ಟರ್ಮಿನಲ್​ ನಿಲ್ದಾಣಗಳಾದ ಕೆಂಗೇರಿ, ಸಿಲ್ಕ್​​ ಇನ್​ಸ್ಟಿಟ್ಯೂಸ್​, ನಾಗಸಂದ್ರ ಹಾಗೂ ಬೈಯಪ್ಪನಹಳ್ಳಿಗಳಲ್ಲಿ ಮೆಟ್ರೋವನ್ನು ನೀವು ಮುಂಜಾನೆ ಐದು ಗಂಟೆಗೇ ಏರಬಹುದು. ಈ ನಿಲ್ದಾಣಗಳಲ್ಲಿ ಕೊನೆಯ ರೈಲು ರಾತ್ರಿ 11 ಗಂಟೆಗೆ ಹೊರಡಲಿದೆ.


ರವಿವಾರ ಮೆಟ್ರೋ ಸೇವೆಯು ಬೆಳಗ್ಗೆ 7 ಗಂಟೆಯಿಂದ ಲಭ್ಯವಿರಲಿದೆ. ಅಲ್ಲದೇ ನಾಡಪ್ರಭು ಕೆಂಪೇಗೌಡ ನಿಲ್ದಾಣ ಹಾಗೂ ಮೆಜೆಸ್ಟಿಕ್​ನಲ್ಲಿ ಕೊನೆಯ ರೈಲು ರಾತ್ರಿ 11:30ಕ್ಕೆ ಹೊರಡಲಿದೆ ಎಂದೂ ಬಿಎಂಆರ್​ಸಿಎಲ್​ ಇದೇ ವೇಳೆ ಮಾಹಿತಿ ನೀಡಿದೆ.

Bengaluru Metro services to begin at 5 am from December 20

ಇದನ್ನು ಓದಿ :Omicron Mangalore : ದಕ್ಷಿಣ ಕನ್ನಡದಲ್ಲಿ ಓಮಿಕ್ರಾನ್‌ ಸ್ಪೋಟ : ಒಂದೇ ದಿನ 5 ಕಾಲೇಜು ವಿದ್ಯಾರ್ಥಿಗಳಿಗೆ ಓಮಿಕ್ರಾನ್‌ ದೃಢ

ಇದನ್ನೂ ಓದಿ: 100 Cantonment Zone: 15 ದಿನ 100 ಕಂಟೋನ್ಮೆಂಟ್ ಝೋನ್ : ಸದ್ದಿಲ್ಲದೇ ಹೆಚ್ಚುತ್ತಿದೆ ಕೊರೋನಾ

Comments are closed.