ಸೋಮವಾರ, ಏಪ್ರಿಲ್ 28, 2025
HomeCinemaRashmika Saree Photoshoot : ಸೀರೆಯಲ್ಲಿ ಮಿಂಚಿದ ಪುಷ್ಪ ಸುಂದರಿ : ರಶ್ಮಿಕಾ ಮಂದಣ್ಣ ...

Rashmika Saree Photoshoot : ಸೀರೆಯಲ್ಲಿ ಮಿಂಚಿದ ಪುಷ್ಪ ಸುಂದರಿ : ರಶ್ಮಿಕಾ ಮಂದಣ್ಣ ಸ್ಪೆಶಲ್ ಪೋಟೋಶೂಟ್

- Advertisement -

ಸಿನಿಮಾ ಹಾಗೂ ಗಾಸಿಪ್ ವಿಚಾರಕ್ಕೆ ಸದಾ ಸುದ್ದಿಯಲ್ಲಿರೋ ನಟಿ ರಶ್ಮಿಕಾ ಮಂದಣ್ಣ ಈಗ ಸುಂದರವಾದ ಪೋಟೋ ಶೂಟ್ ಮೂಲಕ ಗಮನ ಸೆಳೆದಿದ್ದಾರೆ. ಸ್ಯಾಂಡಲ್ ವುಡ್ ಮೂಲಕ ಕೆರಿಯರ್ ಆರಂಭಿಸಿ ಆರಂಭದಲ್ಲಿ ಕರ್ನಾಟಕದ ಕ್ರಶ್ ಎನ್ನಿಸಿಕೊಂಡ ರಶ್ಮಿಕಾ ಇತ್ತೀಚಿಗೆ ನ್ಯಾಶನಲ್‌ಕ್ರಶ್ ಪಟ್ಟಕ್ಕೇರಿದ್ದಾರೆ. ಇದೆಲ್ಲದರ ಜೊತೆಗೆ ಸದ್ಯ ಪುಷ್ಪ ಸಿನಿಮಾದ ಅದ್ಭುತ ಗೆಲುವಿನ ಸಂಭ್ರಮದಲ್ಲಿರೋ ರಶ್ಮಿಕಾ ಹೊಸ ಪೋಟೋ ಶೂಟ್ (Rashmika Saree Photoshoot)ಮೂಲಕ ಸೋಷಿಯಲ್‌ಮೀಡಿಯಾದಲ್ಲಿ ಸಂಚಲನ ಮೂಡಿಸಿದ್ದಾರೆ.

ಟಾಲಿವುಡ್ ನ ಬಹುನೀರಿಕ್ಷಿತ ಸಿನಿಮಾ ಪುಷ್ಪಾದಲ್ಲಿ ನಟಿ ರಶ್ಮಿಕಾ ಡಿ ಗ್ಲ್ಯಾಮರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸಾಮಾನ್ಯವಾಗಿ ನಟಿಯರು ಡಿ‌ ಗ್ಲ್ಯಾಮರ್ ಪಾತ್ರದಲ್ಲಿ ನಟಿಸಲು ಒಪ್ಪಿಕೊಳ್ಳೋದಿಲ್ಲ. ಆದರೆ ರಶ್ಮಿಕಾ ಮಾತ್ರ ಹಳ್ಳಿ ಹುಡುಗಿ ಪಾತ್ರದಲ್ಲಿ ಮೇಕಪ್ ಇಲ್ಲದೇ ನಟಿಸಲು ಸಿದ್ಧವಾದರು. ಅಷ್ಟೇ ಅಲ್ಲ ಸಾಮೇ ಸಾಮೇ ಹಾಡಿನ ಮೂಲಕ ಬಹು ಭಾಷೆಯಲ್ಲಿ ಮನೆಮಾತಾದರು.

ಈ ಎಲ್ಲ ಸಂಭ್ರಮದ ನಡುವೆ ನಟಿ ರಶ್ಮಿಕಾ ಹೊಸ ಪೋಟೋ ಶೂಟ್ ಗೆ ಪೋಸ್ ನೀಡಿದ್ದಾರೆ. ಸದಾ ಶಾರ್ಟ್ಸ್ ಆಂಡ್ ಹಾಟ್ ಡ್ರೆಸ್ ಗಳಲ್ಲೇ ಕಾಣಿಸಿಕೊಳ್ಳೋ ರಶ್ಮಿಕಾ ಈ ಭಾರಿ ಕ್ರೀಂ ಕಲರ್ ಸೀರೆಯಲ್ಲಿ ಮಿಂಚಿದ್ದಾರೆ. ಈಶಾನ್ ಗಿರಿ ಫೋಟೋಗ್ರಫಿ ಯಲ್ಲಿ ನಟಿ ರಶ್ಮಿಕಾ‌ಮಂದಣ್ಣ ಸಖತ್ ಬ್ಯೂಟಿಫುಲ್ ಎನ್ನಿಸುವಂತೆ ಕಾಣಿಸಿಕೊಂಡಿದ್ದು, ಕ್ರೀಂ ಕಲರ್ ಸೀರೆ, ಆ್ಯಂಟಿಕ್ ಗೋಲ್ಡ್ ನಲ್ಲಿ ರಶ್ಮಿಕಾ ಮೋಹಕ ಸೌಂದರ್ಯ ಅನಾವರಣಗೊಂಡಿದೆ. ಈ ಪೋಟೋಗಳನ್ನು ರುಮಿ‌ ಕವಿತೆಯ ಸಾಲುಗಳೊಂದಿಗೆ ಹಂಚಿಕೊಂಡಿರೋ ರಶ್ಮಿಕಾ, ” Let the Beauty Of what you love be what you do” ಎಂದಿದ್ದಾರೆ.

ರಶ್ಮಿಕಾ ಸೀರೆಯಲ್ಲಿ ಮಿಂಚುತ್ತಿರುವ ಈ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಅಭಿಮಾನಿಗಳ ಸಂಭ್ರಮದಿಂದ ಪೋಟೋ ಶೇರ್ ಮಾಡ್ತಿದ್ದಾರೆ. ಮೂಲಗಳ ಮಾಹಿತಿ ಪ್ರಕಾರ ರಶ್ಮಿಕಾ ಈ ಪೋಟೋ ಶೂಟ್ ತಮ್ಮ ನೆಕ್ಸ್ಟ್ ಮೂವಿಗಾಗಿ ಮಾಡಿದ್ದು, ಬಿಗ್ ಪ್ರಾಜೆಕ್ಟ್ ವೊಂದಕ್ಕೆ ಸಿದ್ಧವಾಗುತ್ತಿದ್ದಾರಂತೆ.

ಪುಷ್ಪ ಸಿನಿಮಾದ ಬಳಿಕ ರಶ್ಮಿಕಾ ಬೇಡಿಕೆ ಮತ್ತಷ್ಟು ಹೆಚ್ಚಿದ್ದು ಸದ್ಯ ಪುಷ್ಪ ಸಿಕ್ವೆನ್ಸ್ 2 ದಲ್ಲಿ ನಟಿಸುತ್ತಿದ್ದಾರೆ. ಮೂಲಗಳ ಮಾಹಿತಿ ಪ್ರಕಾರ ರಶ್ಮಿಕಾ ಪುಷ್ಪ ಸಿಕ್ವೆನ್ಸ್ 2 ಗಾಗಿ ತಮ್ಮ ಸಂಭಾವನೆಯನ್ನು 5 ಕೋಟಿಗೆ ಹೆಚ್ಚಿಸಿಕೊಂಡಿದ್ದಾರಂತೆ.

ಇದನ್ನೂ ಓದಿ : ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದ ಪ್ರಿಯಾಂಕಾ ಚೋಪ್ರಾ ದಂಪತಿ

ಇದನ್ನೂ ಓದಿ :  ರಾಕಿಂಗ್ ಸ್ಟಾರ್ ಯಶ್ ಕನ್ನಡ ಪಾಠ : ರಾಧಿಕಾ ಪಂಡಿತ್ ಹಂಚಿಕೊಂಡ್ರು ಸ್ಪೇಶಲ್ ವಿಡಿಯೋ

(Pushpa Movie Actress Rashmika Mandanna saree Special Photoshoot)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular