Karnataka night curfew cancel :ವೀಕೆಂಡ್ ಕರ್ಪ್ಯೂ ಆಯ್ತು ಈಗ ನೈಟ್ ಕರ್ಪ್ಯೂ ಸರದಿ: ಸಿಎಂ ಮೇಲೆ ಒತ್ತಡ ತಂತ್ರಕ್ಕೆ ಸಿದ್ಧವಾಯ್ತು ಮಾಸ್ಟರ್ ಪ್ಲ್ಯಾನ್

ಬೆಂಗಳೂರು : ರಾಜ್ಯದಲ್ಲಿ ಸದ್ಯ ಕೊರೋನಾ ಹಾಗೂ ಓಮೈಕ್ರಾನ್ ಪ್ರಕರಣಗಳಲ್ಲಿ ಸಣ್ಣ ಇಳಿಕೆ ಕಂಡುಬಂದಿದೆ. ಇದರ ಬೆನ್ನಲ್ಲೇ ಸರ್ಕಾರವೂ ವೀಕೆಂಡ್ ಕರ್ಪ್ಯೂಗೆ ವಿನಾಯ್ತಿ‌ ನೀಡಿದ್ದು ಕೇವಲ ನೈಟ್ ಕರ್ಪ್ಯೂ ಮಾತ್ರ ಜಾರಿಯಲ್ಲಿದೆ. ಈ‌ ಮಧ್ಯೆ ಉದ್ದಿಮೆಗಳ ಒತ್ತಡಕ್ಕೆ ಮಣಿದು ನೈಟ್ ಕರ್ಪ್ಯೂ ಸಡಿಲಿಸಿದ ಸರ್ಕಾರದ‌ಮೇಲೆ ನೈಟ್ ಕರ್ಪ್ಯೂ ಸಡಿಲಿಸುವಂತೆಯೂ (Karnataka night curfew cancel) ಒತ್ತಡ ಹೇರಲು ಪ್ಲ್ಯಾನ್ ಸಿದ್ಧವಾಗಿದೆ.

ಹೌದು ಸರ್ಕಾರದ ಮೇಲೆ ಒತ್ತಡ ಹೇರಿ ನೈಟ್ ಕರ್ಪ್ಯೂವನ್ನು ರದ್ದು ಮಾಡಿಸಲು ಅಥವಾ ಅವಧಿಯನ್ನು ಮೊಟಕುಗೊಳಿಸಲು ಒತ್ತಡ ಹೇರುವ‌ತಂತ್ರ ಅನುಸರಿಸಲು ಉದ್ದಿಮೆಗಳು ಮುಂದಾಗಿವೆ. ಈಗಾಗಲೇ ಹಲವು ಉದ್ದಿಮೆಗಳು ಸೇರಿ ಈ ಬಗ್ಗೆ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ. ಮುಂದಿನ ವಾರ ಸಿಎಂ ಬೊಮ್ಮಾಯಿ ಭೇಟಿಗೆ ಸಿದ್ಧತೆನಡೆದಿದೆ. ಉದ್ದಿಮೆಗಳ ಅನುಕೂಲಕ್ಕಾಗಿ ರಾತ್ರಿ 11:30 ರಿಂದ ಬೆಳಗ್ಗೆ 5ರವರೆಗೆ ಸಮಯ ಬದಲಾವಣೆಗೆ ಮನವಿ ಮಾಡಲು ವ್ಯಾಪಾರಸ್ಥರು ಚಿಂತನೆ ನಡೆಸಿದ್ದಾರೆ.

ಸದ್ಯ ರಾಜ್ಯದಲ್ಲಿ ರಾತ್ರಿ 10 ರಿಂದ ಬೆಳಗ್ಗೆ 5 ರವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿದೆ. ಇದರಿಂದ ಬಾರ್, ರೆಸ್ಟೋರೆಂಟ್, ಪಬ್ ಗಳ ವ್ಯಾಪಾರಕ್ಕೆ ತೊಂದರೆ ಉಂಟಾಗುತ್ತಿದೆ. ಹೀಗಾಗಿ ನೈಟ್ ಕರ್ಪ್ಯೂ ಅವಧಿಯನ್ನು ಒಂದೂವರೆ ಗಂಟೆ ಮುಂದೂಡಲು ಉದ್ದಿಮೆಗಳ ಮುಖ್ಯಸ್ಥರು ಸಿಎಂಗೆ ಮನವಿ ಮಾಡಲಿದ್ದಾರಂತೆ.

  • ಬೆಂಗಳೂರು ಹೋಟೆಲ್ ಮಾಲೀಕರ ಸಂಘ
  • ಬಾರ್, ಪಬ್ & ರೆಸ್ಟೊರೆಂಟ್
  • ಬೇಕರಿ & ಕಾಂಡಿಮೆಂಟ್ಸ್ ಸಂಘ
  • ಬೆಂಗಳೂರು ಮಾಲ್ ಅಸೋಸಿಯೇಷನ್
  • ಥಿಯೇಟರ್ ಮಾಲೀಕರು
  • ಬೀದಿ ಬದಿ ವ್ಯಾಪಾರಿಗಳ ಸಂಘ
  • ಕ್ಯಾಟರಿಂಗ್ ಉದ್ಯಮ

ಸೇರಿದಂತೆ ಹಲವು ಸಾರ್ವಜನಿಕ ಉದ್ದಿಮೆಗಳು ಸಮಯದಲ್ಲಿ ವಿನಾಯ್ತಿ ಕೋರುತ್ತಿದ್ದಾರೆ. ಇದಕ್ಕೆ ಈ ವ್ಯಾಪಾರಸ್ಥರು ಕಾರಣ ಕೂಡ ನೀಡುತ್ತಿದ್ದು,ಥಿಯೇಟರ್ ಗಳಲ್ಲಿ 2nd ಶೋಗೆ ಕತ್ತರಿ ಬಿದ್ದಿದೆ ಇದರಿಂದ ನಷ್ಟವಾಗುತ್ತಿದೆ. ಹೀಗಾಗಿ ಸಮಯ ಸಡಿಲಿಸಿದ್ರೆ ಸ್ವಲ್ಪ‌ ಚೇತರಿಕೆಯಾಗಲಿದೆ. ಅಲ್ಲದೇ ರಾತ್ರಿ ಪಾಳಿ ಕೆಲಸ ಮುಗಿಸಿ ಬರುವವರಿಗೆ ಹೋಟೆಲ್ ಊಟವೇ ಆಧಾರ ಹೀಗಾಗಿ 11.30ರ ತನಕ ಅವಕಾಶ ನೀಡಬೇಕು.ಬಾರ್ ಗಳಲ್ಲಿ ರಾತ್ರಿ 8ರ ನಂತರ ವ್ಯಾಪಾರ ಶುರು, ಸಂಜೆ ಪಾರ್ಟಿಯ ಊಟದ ಸಮಯ 8ಕ್ಕೆ ಶುರುವಾಗಿ ರಾತ್ರಿ 11ರವರೆಗೂ ಇರುತ್ತೆ ಹೀಗಾಗಿ ಅವಕಾಶ ಬೇಕು ಅನ್ನೋದು ವ್ಯಾಪಾರಸ್ಥರ ಅಳಲು. ಇತ್ತ ಕಲ್ಯಾಣ ಮಂಟಪ ಮಾಲೀಕರಿಂದಲೂ 50:50 ರೂಲ್ಸ್ ಡಿಮ್ಯಾಂಡ್ ಇಟ್ಟಿದ್ದು, ಈಗಾಗಲೇ ಸಭೆ ನಡೆಸಿರೋ ಕಲ್ಯಾಣಮಂಟಪ‌ಮಾಲೀಕರು ಸಿಎಂ ಭೇಟಿ ಮಾಡಿ ಮನವಿ ಮಾಡಲಿದ್ದಾರೆ.

ಇದನ್ನೂ ಓದಿ : ಭಾರತದಲ್ಲಿಂದು ಕೊಂಚ ಇಳಿಕೆ ಕಂಡ ಕೊರೊನಾ : 3.33 ಲಕ್ಷ ಹೊಸ ಕೋವಿಡ್‌ ಪ್ರಕರಣ, 535 ಸಾವು

ಇದನ್ನೂ ಓದಿ : cat missing : ಕಾರ್, ಹಣ, ಚಿನ್ನ ಆಯ್ತು ಈಗ ಮಾರ್ಜಾಲ ಸರದಿ : ಬೆಕ್ಕಿನ ಕಳ್ಳರನ್ನು ಹುಡುಕಲು ಖಾಕಿ ಮೊರೆ ಹೋದ ಮಾಲೀಕ

( Karnataka night curfew cancel demand for businessmen’s, memorandum to chief minister Basavaraj Bommai)

Comments are closed.