ಪುಷ್ಪ ಸಿನಿಮಾ ಯಶಸ್ಸಿನ ಬಳಿಕ ಬಹುಭಾಷಾ ಬೆಡಗಿ ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಗೆ ಎಲ್ಲಿಲ್ಲದ ಬೇಡಿಕೆ ಬರುತ್ತಿದೆ. ಈಗಾಗಲೇ ಸಾಲು ಸಾಲು ಸಿನಿಮಾದಲ್ಲಿ ಬ್ಯುಸಿಯಾಗಿರೋ ರಶ್ಮಿಕಾ ಈಗ ಟಾಲಿವುಡ್, ಕಾಲಿವುಡ್ ಬಾಲಿವುಡ್ ನ ಬ್ಯುಸಿ ಹಿರೋಯಿನ್. ಇಂತಿಪ್ಪ ರಶ್ಮಿಕಾ ಈಗ ಟಾಲಿವುಡ್ ನ ಯಂಗ್ ಹೀರೋಗೆ ಜೊತೆಯಾಗಲಿದ್ದಾರಂತೆ. ಟಾಲಿವುಡ್ ಅಂಗಳದಿಂದ ರಶ್ಮಿಕಾ ಅಭಿಮಾನಿಗಳಿಗೆ ಸಿಹಿಸುದ್ದಿ ಸಿಕ್ಕಿದ್ದು, ನಟಿ ರಶ್ಮಿಕಾ (Rashmika Mandanna) ಟಾಲಿವುಡ್ ನ ಯಂಗೆಸ್ಟ್ ಹೀರೋ ರಾಮ್ ಪೊತಿನೇನಿ ಜೊತೆ ರೋಮ್ಯಾನ್ಸ್ ಮಾಡಲಿದ್ದಾರಂತೆ.
ಟಾಲಿವುಡ್ ನ ಮಾಸ್ ನಿರ್ದೇಶಕ ಖ್ಯಾತಿಯ ಬೊಯಪಾಟಿ ಶ್ರೀನು ಹೊಸ ಚಿತ್ರವೊಂದಕ್ಕೆ ಸಿದ್ಧವಾಗಿದ್ದಾರೆ. ಈ ಸಿನಿಮಾದಲ್ಲಿ ರಾಮ್ ಪೊತಿನೇನಿ ನಾಯಕರಾಗಿದ್ದಾರೆ. ಇದೇ ಸಿನಿಮಾ ಕ್ಕೆ ಹೀರೋಯಿನ್ ನೀರಿಕ್ಷೆಯಲ್ಲಿದ್ದ ಶ್ರೀನು ರಶ್ಮಿಕಾರನ್ನು ಸಂಪರ್ಕಿಸಿದ್ದು ಕತೆ ಕೇಳಿದ ಮಿಶನ್ ಮಜ್ನು ಬೆಡಗಿ ರಶ್ಮಿಕಾ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರಂತೆ. ನಿರ್ದೇಶಕ ಬೊಯಪಾಟಿ ಶ್ರೀನು ಈಗಾಗಲೇ ಸಿನಿಮಾದ ಫ್ರೀ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದು ಸದ್ಯದಲ್ಲೇ ಸಿನಿಮಾ ಶೂಟಿಂಗ್ ಆರಂಭವಾಗಲಿದೆಯಂತೆ.
ಪುಷ್ಪ ಸಿನಿಮಾದ ನಟನೆ ಹಾಗೂ ಸಾಮಿ ಸಾಮಿ ಹಾಡಿನ ಯಶಸ್ಸಿನ ಬಳಿಕ ರಶ್ಮಿಕಾ ದೆಸೆ ಬದಲಾಗಿದೆ. ರಶ್ಮಿಕಾ ಮೇಲೆ ಟಾಲಿವುಡ್ ಸೇರಿದಂತೆ ಎಲ್ಲ ಚಿತ್ರರಂಗದ ನಿರ್ಮಾಪಕ ನಿರ್ದೇಶಕರು ಕಣ್ಣಿಟ್ಟಿದ್ದಾರೆ. ಪುಷ್ಪ ಸಿನಿಮಾದ ಬಳಿಕ ರಶ್ಮಿಕಾ ಕೂಡ ಬದಲಾಗಿದ್ದು ಸಿನಿಮಾ ಆಯ್ಕೆ ಹಾಗೂ ನಟನೆಯಲ್ಲಿ ಚ್ಯೂಸಿಯಾಗಿದ್ದಾರಂತೆ. ಮಾತ್ರವಲ್ಲ ಸಂಭಾವನೆಯನ್ನು 1 ಕೋಟಿಯಿಂದ ಮೂರು ಕೋಟಿಗೆ ಹೆಚ್ಚಿಸಿಕೊಂಡಿದ್ದಾರಂತೆ.
ಸದ್ಯ ರಶ್ಮಿಕಾ ಅಭಿಮಾನಿಗಳಿಗೆ ಒಂದಾದ ಮೇಲೊಂದು ಸಿಹಿಸುದ್ದಿ ಸಿಗುತ್ತಲೇ ಇದೆ. ಇತ್ತೀಚಿಗಷ್ಟೇ ರಶ್ಮಿಕಾ ನಟನೆಯ ಆಡವಾಳ್ಲು ಮಿಕು ಜೋಹಾರ್ಲು ಸಿನಿಮಾ ತೆರೆಕಂಡಿತ್ತು. ಆದರೆ ಈ ಸಿನಿಮಾದಲ್ಲಿ ರಶ್ಮಿಕಾ ನಟನೆಯ ವಿಶೇಷ ಪ್ರಭಾವ ಬೀರುವ ಲ್ಲಿ ಯಶಸ್ವಿಯಾಗಲಿಲ್ಲ. ಇದರ ಬಳಿಕ ರಶ್ಮಿಕಾ ನಟನೆಯ ಬಾಲಿವುಡ್ ನ ಚೊಚ್ಚಲ ಸಿನಿಮಾ ಮಿಶನ್ ಮಜ್ನು ಕೂಡ ರಿಲೀಸ್ ಗೆ ಸಿದ್ಧವಾಗಿದೆ. ಇದಾದ ಬಳಿಕ ಬಿಗ್ ಬೀ ಜೊತೆ ರಶ್ಮಿಕಾ ತೆರೆಹಂಚಿಕೊಂಡ ಗುಡ್ ಬೈ ಸಿನಿಮಾ ತೆರೆಗೆ ಬರಲಿದೆ. ಸದ್ಯ ರಶ್ಮಿಕಾ ಪುಷ್ಪ ಸಿಕ್ವೆನ್ಸ್ ಟೂ ಶೂಟಿಂಗ್ ಗೆ ಸಜ್ಜಾಗಿದ್ದಾರೆ. ಅಷ್ಟೇ ಅಲ್ಲ ರಶ್ಮಿಕಾ ಮಂದಣ್ಣ ಎಂಬ ಯೂಟ್ಯೂಬ್ ಚಾನೆಲ್ ಕೂಡ ಆರಂಭಿಸಿದ್ದಾರೆ.
#RAPO19 is #𝐓𝐇𝐄𝐖𝐀𝐑𝐑𝐈𝐎𝐑𝐑 🔥#RAPO19FirstLook pic.twitter.com/dedw7G3SBD
— RAm POthineni (@ramsayz) January 17, 2022
ಇದನ್ನೂ ಓದಿ : ನಟನೆ ಬಳಿಕ ಧಾರಾವಾಹಿ ನಿರ್ಮಾಣ : ಮೇಘಾ ಶೆಟ್ಟಿ ಕಂಡು ಹುಬ್ಬೇರಿಸಿದ ಅಭಿಮಾನಿಗಳು
ಇದನ್ನೂ ಓದಿ : ಪ್ರಭಾಸ್, ರಾಜಮೌಳಿ ಕಾಂಬಿನೇಷನ್‌ನಲ್ಲಿ ತೆರೆಗೆ ಬರಲಿದೆ ಬಾಹುಬಲಿ -3
( Pushpa Movie Actress Rashmika Mandanna with Ram Pothineni in the warrior )