Major accident : ಟ್ರ್ಯಾಕ್ಸ್‌ ಪಲ್ಟಿ : 5 ಭಕ್ತರ ಸಾವು, 9 ಮಂದಿಗೆ ಗಾಯ

ವಿಜಯನಗರ : ಟ್ರ್ಯಾಕ್ಸ್‌ ಪಲ್ಟಿಯಾಗಿ ಐವರು ಭಕ್ತರು ಸಾವನ್ನಪ್ಪಿ, 9 ಮಂದಿ ಗಂಭೀರವಾಗಿ ಗಾಯಗೊಂಡಿರುವ ಭೀಕರ ಅಪಘಾತ (Major accident ) ವಿಜಯಪುರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬಣವಿಕಲ್ಲು ಗ್ರಾಮದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ 50 ರ ಬಳಿಯಲ್ಲಿ ನಡೆದದಿದೆ.

ವಿಜಯಪುರ ಜಿಲ್ಲೆಯನಿಡಗುಂದಿ ಗ್ರಾಮದ ಸಿದ್ದಯ್ಯ ಕಾಳಗಿ( 48 ವರ್ಷ ), ಕಲ್ಲವ್ವ( 60 ವರ್ಷ ), ಕುಂತವ್ವ( 50 ವರ್ಷ ), ನೀಲಮ್ಮ( 54 ವರ್ಷ ), ಲಕ್ಷ್ಮೀಬಾಯಿ ( 60 ವರ್ಷ ) ಮೃತ ದುರ್ದೈವಿಗಳಾಗಿದ್ದಾರೆ. ಅಪಘಾತ ನಡೆಯುತ್ತಿದ್ದಂತೆಯೇ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ, ಉಳಿದ ಮೂವರು ಆಸ್ಪತ್ರೆಗೆ ಸಾಗಿಸುವ ವೇಳೆಯಲ್ಲಿ ಸಾವನ್ನಪ್ಪಿದ್ದಾರೆ. ಇನ್ನು ಟ್ರ್ಯಾಕ್ಸ್‌ನಲ್ಲಿದ್ದ ಸುಮಾರು ೯ ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ.

ತಮಿಳುನಾಡಿನಲ್ಲಿರುವ ರಾಮೇಶ್ವರಂ ದೇವಸ್ಥಾನವನ್ನು ನೋಡಲು ವಿಜಯಪು ಜಿಲ್ಲೆಯ ನಿಡಗುಂಡಿ ಗ್ರಾಮದ ನಿವಾಸಿಗಳು ಟ್ರ್ಯಾಕ್ಸ್‌ ನಲ್ಲಿ ಸಾಗುತ್ತಿದ್ದರು. ಈ ವೇಳೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಮೇಲ್ನೋಟಕ್ಕೆ ಟ್ರ್ಯಾಕ್ಸ್‌ ಚಾಲಕನ ಅತಿವೇಗ ಮತ್ತು ಚಾಲಕನ ಅಜಾಗರೂಕತೆಯೇ ಅಪಘಾತಕ್ಕೆ (Major accident) ಕಾರಣ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಪಘಾತದ ಸ್ಥಳಕ್ಕೆ ಕಾನಹೊಸಳ್ಳಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಪ್ರಕರಣ ದಾಖಲು ಮಾಡಿಕೊಂಡಿದ್ದು ತನಿಖೆಯನ್ನು ನಡೆಸುತ್ತಿದ್ದಾರೆ.

Major accident ಹಂದಿಗೆ ಕಾರು ಢಿಕ್ಕಿ : ಇಬ್ಬರು ಸಾವು

ಚಿತ್ರದುರ್ಗ: ರಸ್ತೆಯಲ್ಲಿ ಅಡ್ಡಬಂದ ಹಂದಿಗೆ ಕಾರು ಗುದ್ದಿ ಪಲ್ಟಿಯಾದ ಘಟನೆ ಹಿರಿಯೂರು ತಾಲ್ಲೂಕಿನ ಐಮಂಗಲ ಗ್ರಾಮದಲ್ಲಿ ನಡೆದಿದೆ. ತಾಯಿ, ಮಗ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರವಿಚಂದ್ರ (40), ತಾಯಿ ಯಲ್ಲಮ್ಮ (65) ಮೃತರು. ಗಾಯಾಳುಗಳಿಗೆ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಐಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಜೇಬು ಕಳ್ಳತನ ಮಾಡಿ ಸಿಕ್ಕಿ ಬಿದ್ದ ಖ್ಯಾತ ನಟಿಯ ಬಂಧನ

ಇದನ್ನೂ ಓದಿ : ಗುಂಡಿಕ್ಕಿ ಭಾರತದ ಖ್ಯಾತ ಅಂತರಾಷ್ಟ್ರೀಯ ಕಬ್ಬಡಿ ಆಟಗಾರ ಸಂದೀಪ್ ನಂಗಲ್‌ ಹತ್ಯೆ

( Major accident : Five killed, nine wounded in Vijayanagar district)

Comments are closed.