ಮೊನ್ನೆ ಮೊನ್ನೆ ಬಿಡುಗಡೆಯಾಗಿರೋ ತೆಲುಗಿನ ಫ್ಯಾನ್ ಇಂಡಿಯಾ ಸಿನಿಮಾ ಪುಷ್ಪ ನೀರಿಕ್ಷೆಯಂತೆ ಬಾಕ್ಸಾಫೀಸಿನಲ್ಲಿ ಭರ್ಜರಿ ಪಯಣ ಆರಂಭಿಸಿದೆ. ಈಗಾಗಲೇ ಕೆಜಿಎಫ್ ಗಳಿಕೆಯ ದಾಖಲೆ ಮೀರಿಸುತ್ತಿರುವ ಪುಷ್ಪ ಬಾಲಿವುಡ್ ನಲ್ಲಂತೂ ಈಗಾಗಲೇ 59 ಕೋಟಿ ಗಳಿಸಿದ್ದು ಇನ್ನು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಿನಿಮಾದ ಒಟ್ಟು ಗಳಿಕೆ 75 ಕೋಟಿ ಮೀರಿಸುತ್ತಿದ್ದು ಕೋಟಿಕ್ಲಬ್ ಸೇರುವ ನೀರಿಕ್ಷೆ ಮೂಡಿಸಿದೆ. ಈ ಮಧ್ಯೆ ಸಿನಿಮಾದ ಯಶಸ್ಸಿಗೆ ಕಾರಣವಾದ ನಟ ಅಲ್ಲೂ ಅರ್ಜುನ್, ನಾಯಕಿ ರಶ್ಮಿಕಾ ಹಾಗೂ ಐಟಂ ಸಾಂಗ್ ನಿಂದಲೇ ಸಿನಿಮಾದಲ್ಲಿ ಮಿಂಚಿದ ಸಮಂತಾ ಸಿನಿಮಾಗೆ (Allu Arjun Rashmika Samantha) ಎಷ್ಟು ಸಂಭಾವನೆ ಪಡೆದಿರಬಹುದು ಎಂಬ ಸಂಗತಿ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಪುಷ್ಪ ಟಾಲಿವುಡ್ ನ ಬಹುನೀರಿಕ್ಷಿತ ಸಿನಿಮಾ, ಅಂದಾಜು 200 ರಿಂದ 250 ಕೋಟಿ ಬಜೆಟ್ ನಲ್ಲಿ ಮೂಡಿ ಬಂದ ಸಿನಿಮಾ ಸಖತ್ ಹಿಟ್ ಎನ್ನಿಸಿದ್ದು ಜನ ಮುಗಿಬಿದ್ದು ಸಿನಿಮಾ ನೋಡ್ತಿದ್ದಾರೆ. ಇಂಥ ಬಿಗ್ ಬಜೆಟ್ ಸಿನಿಮಾದಲ್ಲಿ ನಟ-ನಟಿಯರಿಗೆ ಸಿಕ್ಕ ಸಂಭಾವನೆ ಎಷ್ಟು ಅನ್ನೋದು ಅಭಿಮಾನಿಗಳ ಕುತೂಹಲ. ಈ ಕುತೂಹಲಕ್ಕೆ ಈಗ ಉತ್ತರ ಸಿಕ್ಕಿದ್ದು, ಸಖತ್ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿರೋ ಅಲ್ಲು ಅರ್ಜುನ್ ಬರೋಬ್ಬರಿ 18 ರಿಂದ 20 ಕೋಟಿ ಸಂಭಾವನೆ ಪಡೆದುಕೊಂಡಿದ್ದಾರಂತೆ.
ಪುಷ್ಪ ಸಿನಿಮಾದ ಸಿಕ್ವೆನ್ಸ್ 2 ಕೂಡಾ ತೆರೆಗೆ ಬರಲಿದ್ದು, ಎರಡು ಸಿನಿಮಾಗೆ ಸೇರಿ ಇಷ್ಟು ಸಂಭಾವನೆನಾ ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಇನ್ನು ಡಿ ಗ್ಲ್ಯಾಮರ್ ಪಾತ್ರದಲ್ಲಿ ಕಾಣಿಸಿದ್ದರೂ ಸಾಮೇ ಸಾಮೇ ಎಂದು ಮೋಡಿ ಮಾಡಿದ ಬಹುಭಾಷಾ ನಟಿ ರಶ್ಮಿಕಾ ಈ ಸಿನಿಮಾಗಾಗಿ ಬರೋಬ್ಬರಿ 10 ಕೋಟಿ ಸಂಭಾವನೆ ಪಡೆದಿದ್ದಾರಂತೆ. ಆದರೆ ಟಾಲಿವುಡ್ ಹಿರೋಯಿನ್ ಗಳ ಸಂಭಾವನೆ ಇನ್ನೂ 3 ಕೋಟಿ ದಾಟಿಲ್ಲ. ಹೀಗಾಗಿ ರಶ್ಮಿಕಾ ಇಷ್ಟು ದೊಡ್ಡ ಮೊತ್ತದ ಸಂಭಾವನೆಯನ್ನು ಎರಡು ಸಿನಿಮಾಗಾಗಿ ಪಡೆದಿರಬಹುದು ಎನ್ನಲಾಗುತ್ತಿದೆ.
ಇದನ್ನೂ ಓದಿ : ಸಿಂಗಲ್ ರಶ್ಮಿಕಾ ಮಿಂಗಲ್ ಆದ್ರು : ಗೋವಾದಲ್ಲಿ ನ್ಯಾಶನಲ್ ಕ್ರಶ್ ಜೊತೆಗಿದ್ದವರ್ಯಾರು ಗೊತ್ತಾ?
ಇನ್ನೂ ಒಂದೇ ಒಂದು ಹಾಡಿನಲ್ಲಿ ಸಿನಿಮಾಕ್ಕೆ ಜೀವ ತುಂಬಿದ ಬೋಲ್ಡ್ ಬೆಡಗಿ ಸಮಂತಾ ಒಂದೇ ಒಂದು ಐಟಂ ಸಾಂಗ್ ಗಾಗಿ 2 ಕೋಟಿ ಹಣ ಪಡೆದುಕೊಂಡಿದ್ದಾರಂತೆ. ಇನ್ನು ಸಿನಿಮಾದ ವಿಲನ್ ರೋಲ್ ನಲ್ಲಿ ಮಿಂಚಿದ ಫಹಾದ್ ಪಾಸಿಲ್ 3.5 ರಿಂದ 4 ಕೋಟಿ ಗಳಿಸಿದ್ದಾರಂತೆ. ಆದರೆ ಇದೆಲ್ಲದಕ್ಕಿಂತ ಇಂಟ್ರಸ್ಟಿಂಗ್ ಸಂಗತಿ ಅಂದ್ರೇ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿ ಪುಷ್ಪದಂತಹ ಸಿನಿಮಾ ನಿರ್ದೇಶಿಸಿದ ಸುಕುಮಾರನ್ ಇವರೆಲ್ಲರಿಗಿಂತ ಅತಿ ಹೆಚ್ಚು ಅಂದ್ರೇ 25 ಕೋಟಿ ಸಂಭಾವನೆ ಪಡೆದಿದ್ದಾರೆ. ಒಟ್ಟಿನಲ್ಲಿ ಪುಷ್ಪ ಸಿನಿಮಾ ಕೆಜಿಎಫ್ ಗಳಿಕೆಮೀರಿಸೋದರ ಜೊತೆಗೆ ಹೀರೋ,ಹೀರೋಯಿನ್ ಸಂಭಾವನೆಯಲ್ಲೂ ಹೊಸ ದಾಖಲೆ ಬರೆದಿದೆ.
ಇದನ್ನೂ ಓದಿ : ಶ್ರೀಲಂಕಾ ಬೆಡಗಿ ಮತ್ತು ಇಡಿ ವಂಚಕ : ತೆರೆಗೆ ಬರುತ್ತಾ ಜಾಕ್ವಲಿನ್ ಫರ್ನಾಂಡಿಸ್ ಲೈಫ್ ಸ್ಟೋರಿ
ಇದನ್ನೂ ಓದಿ : ಗಾಯ ಆರಲು ಏನೋ ಬೇಕೋ ಅದನ್ನು ಮಾಡೋಣ: ಹೊಸ ವರ್ಷಕ್ಕೆ ಸಮಂತಾ ಸಂದೇಶ
(pushpa movie super hit, movie, Allu Arjun, Rashmika Samantha know how much is paid)