ಮೊನ್ನೆ ಮೊನ್ನೆ ರಿಲೀಸ್ ಆಗಿರೋ ತೆಲುಗಿನ ಪುಷ್ಪ ಸಿನಿಮಾ ಗೆದ್ದಿದೆ. ನಿರ್ದೇಶಕರು ಹೀರೋನನ್ನು ಭುಜದ ಮೇಲೆ ಹೊತ್ತು ಮೆರೆಸಿದ್ದಾರೆ ಎಂಬ ಮಾತಿದ್ದರೂ ಸಿನಿಮಾ ಗೆಲುವಿನಲ್ಲಿ ಹಾಡುಗಳ ಪಾತ್ರ ದೊಡ್ಡದಿದೆ. ಆದರೆ ಇಂಥ ಹಿಟ್ ಹಾಡುಗಳನ್ನು ನೀಡಿದ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ( Pushpa Music Director Controversy) ಮಾತ್ರ ಅನಗತ್ಯ ಮಾತುಗಳನ್ನಾಡಿ ವಿವಾದಕ್ಕೆ ಸಿಲುಕಿದ್ದಾರೆ.
ಪುಷ್ಪ ಸಿನಿಮಾ ಅದ್ದೂರಿಯಾಗಿ ತೆರೆಕಂಡಿದೆ. ಮಾತ್ರವಲ್ಲ ಒಂದಕ್ಕಿಂದ ಒಂದು ಹಿಟ್ ಹಾಡುಗಳಿಂದ ಸಿನಿಮಾ ಕೂಡ ಗೆದ್ದಿದೆ. ಆದರೆ ಗೆಲುವಿನ ಬೆನ್ನಲ್ಲೇ ಸಿನಿಮಾದ ಸಂಗೀತ ನಿರ್ದೇಶಕ ದೇವೀಶ್ರೀ ಪ್ರಸಾದ್ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಇತ್ತೀಚಿಗೆ ಸಿನಿಮಾ ಕುರಿತ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಸಿನಿಮಾದ ಐಟಂ ಸಾಂಗ್ ಅನ್ನೋದು ನನ್ನ ಪಾಲಿಗೆ ದೇವರ ಹಾಡಿದ್ದಂತೆ. ಐಟಂ ಸಾಂಗ್ ಎಂದರೇ ದೇವರ ಧ್ಯಾನದ ಒಂದು ಪ್ರಾಕಾರದಂತೆ ಎಂದಿದ್ದರು. ದೇವಿಶ್ರೀ ಈ ಮಾತು ಇದೀಗ ವಿವಾದಕ್ಕೆ ಕಾರಣವಾಗಿದ್ದು, ಬಿಜೆಪಿಪಕ್ಷ ಸೇರಿದಂತೆ ಹಲವರು ವಿರೋಧಿಸಿದ್ದಾರೆ.
ಈ ವಿಚಾರಕ್ಕೆ ಎಂಎಲ್ ಗೆ ರಾಜಾ ಸಿಂಗ್ ಮಾತನಾಡಿದ್ದು, ದೇವಿಶ್ರೀ ಪ್ರಸಾದ್ ಒಬ್ಬ ಹೆಸರಾಂತ ಸಂಗೀತ ನಿರ್ದೇಶಕ ಅವರು ಹೇಗೆ ಐಟಂ ಸಾಂಗ್ ನ್ನು ದೇವರ ಹಾಡಿಗೆ ಹೋಲಿಸುತ್ತಾರೆ. ಇದು ಅವರಿಗೆ ಅಗತ್ಯವೂ ಇರಲಿಲ್ಲ. ಇದರಿಂದ ಹಲವರಿಗೆ ನೋವಾಗಿದೆ. ಹೀಗಾಗಿ ಅವರು ಬೇಷರತ್ತಾಗಿ ಕ್ಷಮೆ ಕೇಳಬೇಕು. ಇಲ್ಲದಿದ್ದರೇ ಹಿಂದೂಗಳು ಅವರಿಗೆ ಬಿಸಿ ಮುಟ್ಟಿಸುತ್ತಾರೆ ಎಂದಿದ್ದಾರೆ.
ಅಲ್ಲದೇ ಇಂತಹ ಹೇಳಿಕೆಗಳ ಬಳಿಕ ಅವರು ತೆಲಂಗಾಣದಲ್ಲಿ ನೆಮ್ಮದಿಯಾಗಿ ಇರಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಆದರೆ ತಮ್ಮ ಹೇಳಿಕೆಗೆ ವ್ಯಕ್ತ ವಾಗಿರುವ ವಿರೋಧದ ಬಗ್ಗೆ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಯಾವುದೇ ರೀತಿ ಪ್ರತಿಕ್ರಿಯೆ ನೀಡಿಲ್ಲ. ವಿವಾದಕ್ಕೆ ಯಾವುದೇ ಪ್ರತಿಕ್ರಿಯೆ ಕೂಡ ನೀಡದೆ ಮೌನವಾಗಿದ್ದಾರೆ.
ದೇವಿಶ್ರಿ ಪ್ರಸಾದ್ ಪುಷ್ಪ ಸಿನಿಮಾ ಕ್ಕೆ ಉತ್ತಮ ಸಂಗೀತ ನಿರ್ದೇಶನ ಮಾಡಿದ್ದು ಅವರು ನಿರ್ಮಿಸಿದ ಏ ಬಿಡ್ಡ, ಸಾಮಿ ಓ ಸಾಮಿ, ಊ ಅಂಟಾವಾ ಮಾವಾ ಉಹೂ ಅಂಟಾವಾ ಹಾಡುಗಳು ಸಖತ್ ಹಿಟ್ ಆಗಿದ್ದು ಎಲ್ಲೆಡೆ ವೈರಲ್ ಆಗಿದೆ. ಅದರಲ್ಲೂ ಊ ಅಂಟಾವಾ ಹಾಡಿಗೆ ಸಮಂತಾ ಸೊಂಟ ಬಳುಕಿಸಿದ್ದು ಮತ್ತಷ್ಟು ಜನ ಮೆಚ್ಚುಗೆಗೆ ಪಾತ್ರವಾಗಿದೆ.
ಇದನ್ನೂ ಓದಿ : ಬಾತ್ ರೂಂನಲ್ಲಿ ಸೆಲ್ಪಿ ವಿಡಿಯೋ : ನಟಿಯ ಹುಚ್ಚಾಟಕ್ಕೆ ಅಭಿಮಾನಿಗಳು ಶಾಕ್
ಇದನ್ನೂ ಓದಿ : ‘ಬಾಕ್ಸಾಫೀಸಿನಲ್ಲಿ ಧೂಳೆಬ್ಬಿಸಿದ ‘ಪುಷ್ಪಾ’ : ಕೆಜಿಎಫ್ ಮೊದಲ ದಿನದ ಕಲೆಕ್ಷನ್ ಮುರಿದ ಅಲ್ಲು ಅರ್ಜುನ್ ಸಿನಿಮಾ..!
ಇದನ್ನೂ ಓದಿ : ಮಿಂಚಿನಂತೆ ಬಳುಕುವ ತಾರೆ : ಬಾಲಿವುಡ್ ನ ನಂ1. ಐಟಂ ಡ್ಯಾನ್ಸರ್ ನೋರಾ ಪತೇಹಿ
( Pushpa Music Director Controversy)