WhatsApp voice message : ವಾಟ್ಸಾಪಲ್ಲಿ ವಾಯ್ಸ್ ಮೆಸೇಜ್ ಕಳಿಸುವ ಮುನ್ನ ನಿಮ್ಮ ಮೆಸೇಜನ್ನ ನೀವೇ ಕೇಳುವುದು ಹೇಗೆ?

ವಾಟ್ಸಾಪ್ ವಾಯ್ಸ್ ನೋಟ್‌ನಲ್ಲಿ ಹೊಸ ಫೀಚರ್: ಇನ್ಮುಂದೆ ಮೆಸೇಜ್ ಕಳಿಸುವ ಮುನ್ನ ನೀವೂ ಕೇಳಬಹುದು! ವಾಟ್ಸಾಪ್ ತನ್ನ ಬಳಕೆದಾರರಿಗೆ ಶೀಘ್ರದಲ್ಲೇ ಹೊಸ ಫೀಚರ್ ( WhatsApp voice message preview) ಪರಿಚಯಿಸಲಿದೆ. ಅದೇನಪ್ಪ ಅಂದ್ರೆ, ಇನ್ಮುಂದೆ ವಾಯ್ಸ್ ನೋಟ್ ಕಳಿಸುವ ಮೊದಲು ಅದನ್ನು ಒಂದ್ಸಲ ಕೇಳಿ ಮತ್ತೆ ಕಳಿಸಬಹುದು. ಈವರೆಗೂ ವಾಯ್ಸ್ ನೋಟ್ ರೆಕಾರ್ಡ್ ಮಾಡಿ ಕಳಿಸುವ ಆಪ್ಶನ್ ಇತ್ತು.

ಈ ಫೀಚರ್ ಬಂದಲ್ಲಿ, ವಾಟ್ಸಾಪ್ ವಾಯ್ಸ್ ಮೆಸೆಜ್ ಕಳಿಸಲು ಯಾವುದೇ ಸಮಸ್ಯೆಗಳಿರಲ್ಲ. “ಮುಂಬರಲಿರುವ ಈ ಅಪ್ಡೇಟ್ ನಲ್ಲಿ ವಾಯ್ಸ್ ಮೆಸೇಜ್ ಪ್ರಿವ್ಯೂ ಆಪ್ಶನ್ ಕೂಡ ಇರಲಿದೆ. ನಿಮಗೆ ಸರಿ ಅನ್ನಿಸಿದರೆ ಮಾತ್ರ ಸೆಂಡ್ ಮಾಡಬಹುದು” ಎಂದು ಕಂಪೆನಿ ಹೇಳಿಕೊಂಡಿದೆ. ಇದರ ಜೊತೆಗೆ ಹ್ಯಾಂಡ್ಸ್ ಫ್ರೀ ರೆಕಾರ್ಡಿಂಗ್ ಹಾಗೂ ಫಾಸ್ಟ್ ಪ್ಲೇ ಸೌಲಭ್ಯ ಇರಲಿದೆ.

ವಾಯ್ಸ್ ಮೆಸೇಜ್ ಸೆಂಡ್ ಮಾಡುವುದು ಹೇಗೆ?

1. ಯಾವುದಾದರೂ ಗ್ರೂಪ್ ಅಥವಾ ಸಿಂಗಲ್ ಚಾಟ್ ಓಪನ್ ಮಾಡಿ

2. ಅಲ್ಲಿ ಕಾಣುವ ಮೈಕ್ರೋಫೋನ್ ಕ್ಲಿಕ್ ಮಾಡಿ, ಮಾತನಾಡಲು ಪ್ರಾರಂಭಿಸಿ.

3. ಮಾತನಾಡಿದ ಬಳಿಕ ನಿಮ್ಮ ಬೆರಳನ್ನು ತೆಗೆದರೆ, ಆಟೊಮ್ಯಾಟಿಕ್ ಆಗಿ ಮೆಸೇಜ್ ಸೆಂಡ್ ಆಗುತ್ತದೆ.

ಹ್ಯಾಂಡ್ಸ್ ಫ್ರೀ ಮೆಸೇಜ್ ಕಳುಹಿಸುವುದು ಹೇಗೆ
ಈ ಫೀಚರ್ ಅನ್ನು ಜಾಸ್ತಿ ಡ್ಯುರೇಷನ್ ರೆಕಾರ್ಡಿಂಗ್ ಮಾಡಲು ಬಳಸಲಾಗುತ್ತದೆ.

1. ಯಾವುದೇ ಚಾಟ್ ಓಪನ್ ಮಾಡಿ.

2. ಅಲ್ಲಿ ಕಾಣುವ ಮೈಕ್ರೋಫೋನ್ ಕ್ಲಿಕ್ ಮಾಡಿ, ಮೇಲೆ ಸ್ಲೈಡ್ ಮಾಡಿ. ಆಗ ಹ್ಯಾಂಡ್ಸ್ ಫ್ರೀ ರೆಕಾರ್ಡಿಂಗ್ ಆಗುತ್ತದೆ.

3. ರೆಕಾರ್ಡಿಂಗ್ ವೇಳೆ ಬೆರಳನ್ನು ಮೈಕ್ರೋಫೋನ್ ಮೇಲೆ ಪ್ರೆಸ್ ಮಾಡಬೇಕೆಂದಿಲ್ಲ.

4. ನಿಮ್ಮ ರೆಕಾರ್ಡಿಂಗ್ ಫಿನಿಶ್ ಆದ ನಂತರ ಸೆಂಡ್ ಬಟನ್ ಕ್ಲಿಕ್ ಮಾಡಿ.

ವಾಯ್ಸ್ ಮೆಸೇಜ್ ಪ್ರಿವ್ಯೂ ಮಾಡುವುದು ಹೇಗೆ

1. ಯಾವುದಾದರೂ ಚಾಟ್ ಓಪನ್ ಮಾಡಿ.

2.ಅಲ್ಲಿ ಕಾಣುವ ಮೈಕ್ರೋಫೋನ್ ಕ್ಲಿಕ್ ಮಾಡಿ, ಮೇಲೆ ಸ್ಲೈಡ್ ಮಾಡಿ. ಆಗ ಹ್ಯಾಂಡ್ಸ್ ಫ್ರೀ ರೆಕಾರ್ಡಿಂಗ್ ಆಗುತ್ತದೆ.

3. ಇನ್ನು ಮಾತನಾಡಲು ಪ್ರಾರಂಭಿಸಿ.

4. ಮಾತನಾಡಿದ ಬಳಿಕ ಸ್ಟಾಪ್ ಆಪ್ಶನ್ ಕ್ಲಿಕ್ ಮಾಡಿ.

5. ನಂತರ ಪ್ಲೇ ಬಟನ್ ಕ್ಲಿಕ್ ಮಾಡಿ ಕೇಳಬಹುದು. ನಿರ್ದಿಷ್ಟ ಟೈಮ್ ನಂತರ ಬೇಕಿದ್ದರೆ ಅದನ್ನೂ ಕೇಳಲು ಸಾಧ್ಯವಿದೆ.

6. ಇನ್ನು ಸೆಂಡ್ ಮಾಡಬೇಕಿದ್ದರೆ ಸೆಂಡ್ ಅಥವಾ ಡಿಲೀಟ್ ಮಾಡುವ ಆಪ್ಶನ್ ಕೂಡ ಇದೆ.

ಇದನ್ನೂ ಓದಿ: Upcoming Electric Cars: 2022ರಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿರುವ 10 ಪ್ರಮುಖ ಎಲೆಕ್ಟ್ರಿಕ್ ಕಾರುಗಳ ಲಿಸ್ಟ್ ಇಲ್ಲಿದೆ

ಇದನ್ನೂ ಓದಿ: Google Search Tricks : ಗೂಗಲ್‌ ಸರ್ಚ್‌ನಲ್ಲಿ ನಮಗೆ ಬೇಕಾದ ಮಾಹಿತಿಯನ್ನೇ ಪಡೆಯುವುದು ಹೇಗೆ? ಸರಳವಾದ 5 ವಿಧಾನಗಳು

(WhatsApp voice message preview here is the tricks in kannada)

Comments are closed.