ಸ್ಯಾಂಡಲ್‌ವುಡ್ ನಿರ್ದೇಶಕ ಆರ್. ಚಂದ್ರು ಬಹಳ ದೊಡ್ಡಮಟ್ಟದಲ್ಲಿ ‘ಕಬ್ಜ’ ಪ್ರಮೋಷನ್ ಪ್ಲ್ಯಾನ್ ಮಾಡ್ತಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್ ನಟನೆಯ ಕಬ್ಜ ಸಿನಿಮಾ ಸಿನಿಪ್ರೇಕ್ಷಕರಲ್ಲಿ ಇನ್ನಿಲ್ಲದ ನಿರೀಕ್ಷೆ ಮೂಡಿಸಿದೆ. ಸಾಮಾನ್ಯವಾಗಿ ಸಿನಿಮಾ ರಿಲೀಸ್ ಹತ್ತಿರ ಬರುತ್ತಿದಂತೆ ಆಡಿಯೋ ಲಾಂಚ್, ಟ್ರೈಲರ್ ಲಾಂಚ್ ಪ್ಲ್ಯಾನ್ ನಡೀತಿದೆ. ಇದೀಗ ‘ಕಬ್ಜ’ ಅದ್ಧೂರಿ ಆಡಿಯೋ ಲಾಂಚ್ (Kabza Audio Launch Date) ಈವೆಂಟ್ ಮಾಹಿತಿ ಸಿಕ್ಕಿದೆ.
ಈಗಾಗಲೇ ಸಿನಿಮಾದ ಟೈಟಲ್ ಟ್ರ್ಯಾಕ್ ರಿಲೀಸ್ ಆಗಿ ಸದ್ದು ಮಾಡಿದೆ. ಶಿಡ್ಲಘಟ್ಟದಲ್ಲಿ ಫೆಬ್ರವರಿ 26ಕ್ಕೆ ಅದ್ಧೂರಿಯಾಗಿ ಆಡಿಯೋ ಲಾಂಚ್ ಕಾರ್ಯಕ್ರಮ ನಡೆಯಲಿದೆ. ಆರ್. ಚಂದ್ರು ಬಹುಕೋಟಿ ವೆಚ್ಚದಲ್ಲಿ 7 ಭಾಷೆಗಳಲ್ಲಿ ‘ಕಬ್ಜ’ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರುತ್ತಿದ್ದಾರೆ. ಅದಕ್ಕೆ ತಕ್ಕಂತೆ ಮೇಕಿಂಗ್, ಪ್ರಮೋಷನ್, ರಿಲೀಸ್ ಪ್ಲ್ಯಾನ್ ನಡೀತಿದೆ. ಸ್ಟಾರ್ ಕಾಸ್ಟ್ ಕೂಡ ಅದ್ದೂರಿಯಾಗಿದ್ದು ಈಗಾಗಲೇ ಟೀಸರ್ ರಿಲೀಸ್ ಆಗಿ ಹಿಟ್ ಆಗಿದೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಪರಭಾಷಾ ಸ್ಟಾರ್ಸ್ ಕೂಡ ‘ಕಬ್ಜ’ ಸಿನಿಮಾಕ್ಕೆ ಜೊತೆಯಾಗಿ ನಿಂತಿದ್ದಾರೆ. ಆಡಿಯೋ ಲಾಂಚ್ ಹೇಗಿರುತ್ತೆ? ಯಾರೆಲ್ಲಾ ಭಾಗಿ ಆಗುತ್ತಾರೆ ಎನ್ನುವುದರ ಬಗ್ಗೆ ನಿರ್ದೇಶಕ ಆರ್. ಚಂದ್ರು ಮಾಹಿತಿ ನೀಡಿದ್ದಾರೆ.
ಫೆಬ್ರವರಿ 26ಕ್ಕೆ ಶಿಡ್ಲಘಟ್ಟದ ಜೂನಿಯರ್ ಕಾಲೇಜು ಮೈದಾನದ ಅದ್ಧೂರಿ ವೇದಿಕೆಯಲ್ಲಿ ‘ಕಬ್ಜ’ ಆಡಿಯೋ ಲಾಂಚ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 3 ಲಕ್ಷಕ್ಕೂ ಅಧಿಕ ಜನ ಸೇರುವ ನಿರೀಕ್ಷೆ ಇದೆ ಎಂದು ಆರ್. ಚಂದ್ರು ಮಾಹಿತಿ ನೀಡಿದ್ದಾರೆ. ಕಾರ್ಯಕ್ರಮಕ್ಕೆ ಎಲ್ಲರಿಗೂ ಸ್ವಾಗತ ಕೋರಿದ್ದಾರೆ. ಆದರೆ ಪಾಸ್ ಇದ್ದವರಿಗೆ ಮಾತ್ರ ಅವಕಾಶ. ಶಿಡ್ಲಘಟ್ಟ ಸರಸ್ವತಿ ಕಾನ್ವೆಂಟ್ ಹಾಗೂ ವಿಜಯಪುರದ ಸುವೀಕ್ಷ ಆಸ್ಪಿಟಲ್‌ನಲ್ಲಿ ಪಾಸ್‌ಗಳು ದೊರೆಯಲಿದೆ. ಸಂಜೆ 6 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ. ಕಲರ್‌ಫುಲ್ ಡ್ಯಾನ್ಸ್ ಪರ್ಫಾರ್ಮೆನ್ಸ್‌ಗಳು ಇರಲಿದೆ.
ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ನಟರಾದ ಉಪೇಂದ್ರ, ಕಿಚ್ಚ ಸುದೀಪ್, ನಟಿ ಶ್ರಿಯಾ ಶರಣ್ ಸೇರಿದಂತೆ ಇಡೀ ಸಿನಿತಂಡ ಭಾಗಿ ಆಗಲಿದೆ. ಇನ್ನುಳಿದಂತೆ ನಟ ಶಿವರಾಜ್‌ಕುಮಾರ್ ಸೇರಿದಂತೆ ಹಲವು ಖ್ಯಾತ ಕಲಾವಿದರು ಕಾರ್ಯಕ್ರಮಕ್ಕೆ ಆಗಮಿಸುವ ನಿರೀಕ್ಷೆ ಇದೆ. ತೆಲುಗು ಸ್ಟಾರ್ ನಟರನ್ನು ಕರೆಸುವ ಪ್ರಯತ್ನಗಳು ನಡೀತಿದೆ. ಒಟ್ಟಿನಲ್ಲಿ ಬಹಳ ದೊಡ್ಡಮಟ್ಟದಲ್ಲಿ ‘ಕಬ್ಜ’ ಆಡಿಯೋ ಲಾಂಚ್ ಈವೆಂಟ್ ಪ್ಲ್ಯಾನ್ ನಡೀತಿದೆ.ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಸವಿನೆನಪಿನಲ್ಲಿ ‘ಕಬ್ಜ’ ಸಿನಿಮಾ ರಿಲೀಸ್ ಮಾಡುವುದಾಗಿ ಸಿನಿತಂಡ ಘೋಷಿಸಿದೆ.
ಇದನ್ನೂ ಓದಿ : ನಟಿ ಸಮಂತಾಗೆ IVIG ಟ್ರೀಟ್‌ಮೆಂಟ್ : ಕೊನೆಗೂ ಹೆಲ್ತ್ ಅಪ್‌ಡೇಟ್ ನೀಡಿದ ಸ್ಯಾಮ್
ಇದನ್ನೂ ಓದಿ : ನಟ ದರ್ಶನ್ ಟ್ಯಾಟೂ ಬಗ್ಗೆ ಸ್ಯಾಂಡಲ್‌ವುಡ್ ತಾರೆಯರ ಪ್ರತಿಕ್ರಿಯೆ ಏನು ಗೊತ್ತಾ ?
ಇದನ್ನೂ ಓದಿ : “ಪುಷ್ಪ 2” ಸಿನಿಮಾದಲ್ಲಿ ನಟಿ ರಶ್ಮಿಕಾ ಮಂದಣ್ಣ ಪಾತ್ರಕ್ಕೆ ಹೆಚ್ಚು ಪ್ರಾಶಸ್ತ್ಯ ಇಲ್ಲ ಕಾರಣವೇನು ಗೊತ್ತಾ ?
ರವಿ ಬಸ್ರೂರು ಸಂಗೀತ, ಎ. ಜೆ ಶೆಟ್ಟಿ ಸಿನಿಮಾಟೋಗ್ರಫಿ ಸಿನಿಮಾಕ್ಕಿದೆ. ಕಬೀರ್ ದುಹಾನ್ ಸಿಂಗ್, ಕೋಟಾ ಶ್ರೀನಿವಾಸ್ ರಾವ್, ಡ್ಯಾನಿಶ್ ಅಖ್ತರ್, ಸಮುದ್ರ ಖನಿ, ನವಾಬ್ ಶಾ, ಮನೋಜ್ ಬಾಜ್‌ಪೇ, ಅವಿನಾಶ್, ದೇವ್‌ಗಿಲ್, ಪ್ರಮೋದ್ ಶೆಟ್ಟಿ ಒಳಗೊಂಡ ಬಹುತಾರಾಗಣ ಈ ಸಿನಿಮಾಕ್ಕಿದೆ. ಕೆಜಿಎಫ್ ಮಾದರಿಯಲ್ಲಿ 2 ಭಾಗಗಳಾಗಿ ‘ಕಬ್ಜ’ ಸಿನಿಮಾ ರಿಲೀಸ್ ಮಾಡಲಾಗುತ್ತಿದೆ. 1940ರ ದಶಕದಲ್ಲಿ ಶುರುವಾಗುವ ಕಥೆ 1980ರವರೆಗೆ ಮುಂದುವರೆಯಲಿದೆ. ಗ್ಯಾಂಗ್‌ಸ್ಟರ್ ಕಥೆಯನ್ನು ಆರ್. ಚಂದ್ರು ಹೇಳ್ತಿದ್ದಾರೆ. ಸಿನಿಮಾದಲ್ಲಿ ಭಾರ್ಗವ್ ಭಕ್ಷಿ ಆಗಿ ಖಡಕ್ ರೋಲ್‌ನಲ್ಲಿ ಸುದೀಪ್ ಗೆಸ್ಟ್ ಅಪಿಯರೆನ್ಸ್ ಮಾಡಿದ್ದಾರೆ. ಇನ್ನು ಸಿನಿಮಾದ ಐಟಂ ಸಾಂಗ್ ಶೂಟಿಂಗ್ ಶುರುವಾಗುತ್ತಿದೆ. ತಾನ್ಯಾ ಹೋಪ್ ಬಿಂದಾಸ್ ಆಗಿ ಹೆಜ್ಜೆ ಹಾಕಲಿದ್ದಾರೆ. ಅದ್ಧೂರಿ ಸೆಟ್‌ನಲ್ಲಿ ಈ ಸಾಂಗ್ ಶೂಟಿಂಗ್ ನಡೀತಿದೆ.
R.Chandru, Actor Upendra Combination “Kabza” Audio Launch Date Fix