God’s invocation on student: ಕಾಂತಾರ ವರಾಹ ರೂಪಂ ಹಾಡಿಗೆ ನೃತ್ಯ: ವಿದ್ಯಾರ್ಥಿ ಮೇಲೆ ಆವಾಹನೆಯಾಯ್ತು ದೈವ

ಬೆಂಗಳೂರು: (God’s invocation on student) ಕಾಲೇಜು ವಾರ್ಷೀಕೋತ್ಸವ ಕಾರ್ಯಕ್ರಮದ ವೇಳೆ ವಿದ್ಯಾರ್ಥಿ ಕಾಂತಾರ ಸಿನಿಮಾದ ವರಾಹ ರೂಪಂ ಹಾಡಿಗೆ ನೃತ್ಯ ಮಾಡಿದ್ದು, ವಿದ್ಯಾರ್ಥಿಯ ಮೇಲೆ ಪಂಜುರ್ಲಿ ದೈವ ಆವಾಹನೆಯಾಗಿದೆ ಎನ್ನಲಾಗಿದೆ. ದ್ವಿತೀಯ ಪಿಯುಸಿ ವಿದ್ಯಾರ್ಥಿ ವಿಶಾಲ್‌ ಪಂಜುರ್ಲಿ ದೈವದ ವೇಷ ಧರಿಸಿ ನೃತ್ಯ ಮಾಡುತ್ತಿದ್ದಾಗ ದೈವ ಆವಾಹನೆಯಾಗಿದೆ ಎಂದು ಹೇಳಲಾಗುತ್ತಿದೆ.

ಬೆಂಗಳೂರಿನ ಗಾಯತ್ರಿ ನಗರದಲ್ಲಿರುವ ಹೊಂಬೇಗೌಡ ಪಿಯು ಕಾಲೇಜು ವಾರ್ಷಿಕೋತ್ಸವದ ವೇಳೆ ಈ ಘಟನೆ ನಡೆದಿದ್ದು, ಕಾರ್ಯಕ್ರಮದಲ್ಲಿ ವಿಶಾಲ್‌ ನೃತ್ಯ ಮಾಡುತ್ತಿದ್ದ. ಕೆಲ ನಿಮಿಷಗಳ ನಂತರ ವೇದಿಕೆಯಿಂದ ಕೆಳಗೆ ಬಂದು ನರ್ತಿಸುತ್ತಿದ್ದ ವೇಳೆ ದೈವ ಆವಾಹನೆಯಾಗಿದೆ. ಇದಾದ ಬಳಿಕ ಆತನ ಸಹಪಾಠಿಗಳು ಹಾಗೂ ಶಿಕ್ಷಕರು ವಿದ್ಯಾರ್ಥಿಯನ್ನು ಸಮಾಧಾನಪಡಿಸಿದ್ದಾರೆ. ಇನ್ನೂ ವಿದ್ಯಾರ್ಥಿಗೆ ದೈವ ಆವಾಹನೆಯಾಗುತ್ತಿದ್ದಂತೆ ಯೋಜಕರು ತಕ್ಷಣವೇ ಹಾಡು ನಿಲ್ಲಿಸಿದ್ದು, ವಿದ್ಯಾರ್ಥಿಯ ವರ್ತನೆ ಕಂಡು ಬೇರೆ ವಿದ್ಯಾರ್ಥಿಗಳು ಹಾಗೂ ಕಾಲೇಜು ಸಿಬ್ಬಂದಿಗಳು ಹಾಗೂ ನೆರೆದಿದ್ದ ಪೋಷಕರು ಆಶ್ಚರ್ಯರಾಗಿದ್ದಾರೆ.

ಇನ್ನೂ ಈ ಬಗ್ಗೆ ವಿದ್ಯಾರ್ಥಿ ವಿಶಾಲ್‌ ಪ್ರತಿಕ್ರಿಯೆ ನೀಡಿದ್ದು, ” ಹಲವು ದಿನಗಳಿಂದ ನಾನು ಈ ನೃತ್ಯಕ್ಕಾಗಿ ತಯಾರಿ ನಡೆಸಿದ್ದೆ. ದಿನವು ದೇವರ ಪೂಜೆ ಮಾಡಿ ಅಭ್ಯಾಸ ಮಾಡುತ್ತಿದ್ದೆ. ಇದಕ್ಕಾಗಿ ಮಾಂಸಹಾರ ಸೇವನೆಯನ್ನು ಕೂಡ ನಾನು ಬಿಟ್ಟಿದ್ದೆ. ನಿನ್ನೆ ನೃತ್ಯ ಮಾಡುವಾಗ ಏನಾಯ್ತು ಅಂತ ನನಗೆ ಗೊತ್ತಿಲ್ಲ. ಎಲ್ಲರೂ ನೀನು ಈ ರೀತಿ ವರ್ತಿಸಿದೆ ಎಂದಾಗಲೇ ನನಗೆ ತಿಳಿದಿದ್ದು.” ಎಂದು ದೈವ ಆವಾಹನೆಯಾದ ಬಗ್ಗೆ ವಿಶಾಲ್‌ ಹೇಳಿದ್ದಾನೆ.

ಈ ಹಿಂದೆ ಕಾಂತಾರ ಸಿನಿಮಾ ಪ್ರದರ್ಶನದ ವೇಳೆ ವೀಕ್ಷಣೆಗಾರರಿಗೆ ದೈವ ಆವಾಹನೆಯಾಗಿತ್ತು. ಇದೀಗ ಅದೇ ರೀತಿಯಲ್ಲಿ ಈ ಘಟನೆ ನಡೆದಿದ್ದು, ಶಾಲೆಯ ಕಾರ್ಯಕ್ರಮದಲ್ಲಿ ನೆರೆದ ಮಂದಿಗೆ ಒಂದು ಕ್ಷಣ ಶಾಕ್‌ ಆಗಿತ್ತು.

ಇದನ್ನೂ ಓದಿ : Terrorist arrested in bengaluru: ಬೆಂಗಳೂರಿನಲ್ಲಿ ಭಯೋತ್ಪಾದಕರ ನಂಟು ಹೊಂದಿರುವ ವ್ಯಕ್ತಿ ಬಂಧನ

ಇದನ್ನೂ ಓದಿ : Drug trafficking-11 arrested: ಆಹಾರ ಡೆಲಿವರಿ ನೆಪದಲ್ಲಿ ಡ್ರಗ್ಸ್ ಸಾಗಾಟ : ಬೆಂಗಳೂರಲ್ಲಿ 11 ಮಂದಿ ಅರೆಸ್ಟ್

ಇದನ್ನೂ ಓದಿ : LKG Student Fail : ಶಿಕ್ಷಣ ಸಂಸ್ಥೆಯ ಎಡವಟ್ಟು: ಯುಕೆಜಿ ಮಗುವನ್ನೇ ಫೇಲ್ ಮಾಡಿದ ಶಿಕ್ಷಕ

God’s invocation on student: Dance to Kantara Varaha Rupam song: God’s invocation on student

Comments are closed.