Aero India Show 2023: ನಾಳೆಯಿಂದ ಬೆಂಗಳೂರಿನಲ್ಲಿ ಏರೋ ಇಂಡಿಯಾ ಶೋ : ವಾಹನ ಸಂಚಾರದಲ್ಲಿ ಬದಲಾವಣೆ

ಬೆಂಗಳೂರು: (Aero India Show 2023) ಏರೋ ಇಂಡಿಯಾ ಶೋ ನಾಳೆಯಿಂದ ಬೆಂಗಳೂರಿನ ಯಲಹಂಕದಲ್ಲಿ ಆರಂಭಗೊಳ್ಳಲಿದೆ. ಈ ಹಿನ್ನಲೆಯಲ್ಲಿ ಯಲಹಂಕದ ಸುತ್ತಮುತ್ತ ಟ್ರಾಫಿಕ್‌ ನಿಯಂತ್ರಣಕ್ಕೆ ಹೊಸ ಕ್ರಮಗಳನ್ನು ಕೈಗೊಳ್ಳಲಾಗಿದೆ. ಏರೋ ಇಂಡಿಯಾ ಶೋವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸುತ್ತಿದ್ದು, ಐದು ದಿನಗಳ ಕಾಲ ವಾಹನ ಸಂಚಾರವನ್ನು ನಿಯಂತ್ರಿಸುವ ಹಿನ್ನೆಲೆಯಲ್ಲಿ ಹಲವು ಕ್ರಮಗಳನ್ನು ಜಾರಿಗೆ ತರಲಾಗಿದೆ.

ಫೆ. 13 ರಂದು ಬೆಳಿಗ್ಗೆ 8 ರಿಂದ 11:30 ರವರೆಗೆ ಬಳ್ಳಾರಿ ರಸ್ತೆಯ ಎಸ್ಟೀಮ್‌ ಮಾಲ್‌ ನಿಂದ ಎಲಿವೇಟೆಡ್‌ ರಸ್ತೆಯಲ್ಲಿ ವಾಹನಗಳ ಚಾಲನೆಗೆ ನಿಷೇಧ ಹೇರಲಾಗಿದೆ. ಕಾರ್ಯಕ್ರಮದ ಪಾಸ್‌ ಹೊಂದಿರುವವರಿಗೆ ಮಾತ್ರ ಈ ರಸ್ತೆಯಲ್ಲಿ ಪ್ರವೇಶ ಇರುತ್ತದೆ. ಯಲಹಂಕ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಹೋಗಬೇಕಾದ ಜನರು ಎಲಿವೇಟೆಡ್‌ ರಸ್ತೆ ಬದಲು ಕೆಳಗಿನ ಸರ್ವಿಸ್‌ ರಸ್ತೆಯನ್ನು ಬಳಸಬೇಕು. ವಿಮಾನ ನಿಲ್ದಾಣಕ್ಕೆ ಹೋಗಬೇಕೆನ್ನುವವರು ಹೆಣ್ಣೂರು ಜಂಕ್ಷನ್‌ ಮೂಲಕ ಪರ್ಯಾಯ ಮಾರ್ಗ ಬಳಸಬೇಕು ಎಂದು ಬೆಂಗಳೂರು ಸಂಚಾರ ಪೊಲೀಸ್‌ ಇಲಾಖೆ ಪ್ರಕಟಣೆ ಹೊರಡಿಸಿದೆ.

ಏರ್‌ ಪೋರ್ಟ್‌ ಗೆ ಹೋಗುವ ರಸ್ತೆಯಲ್ಲಿ ದೊಡ್ಡ ವಾಹನಗಳ ಸಂಚಾರಕ್ಕೆ ಐದು ದಿನಗಳ ಕಾಲ ಅವಕಾಶ ಇರುವುದಿಲ್ಲ. ಬೆಂಗಳೂರಿನ ಪೂರ್ವದಿಂದ ಏರ್‌ ಪೋರ್ಟ್‌ ಗೆ ಹೋಗುವ ಪ್ರಯಾಣಿಕರು ಕೆಆರ್‌ ಪುರಂ ಹೆಣ್ಣೂರು ಕ್ರಾಸ್‌, ಮ್ಯಾಲನಹಳ್ಳಿ, ಬೇಗೂರು ಬ್ಯಾಕ್‌ ಗೇಟ್‌ ಮೂಲಕ ಏರ್‌ ಪೋರ್ಟ್‌ ತಲುಪಬಹುದು. ಪಶ್ಚಿಮ ಕಡೆಯಿಂದ ಏರ್‌ ಪೋರ್ಟ್‌ ಗೆ ತಲುಪುವವರು ಗೊರಗುಂಟೆ ಪಾಳ್ಯ, ಬಿಇಎಲ್‌ ಸರ್ಕಲ್‌, ಗಂಗಮ್ಮ ಸರ್ಕಲ್‌, ಮದರ್‌ ಡೈರಿ, ಉನ್ನೀಕೃಷ್ಣನ್‌ ಜಂಕ್ಷನ್‌, ದೊಡ್ಡಬಳ್ಳಾಪುರ ರಸ್ತೆ, ರಾಜಾನುಕುಂಟೆ, ಅದ್ದಿಗನಹಳ್ಳಿ, ಎಂವಿಐಟಿ, ವಿದ್ಯಾನಗರ್‌ ಕ್ರಾಸ್‌ ಮೂಲಕ ಹಾದು ಹೋಗಬಹುದು.

ಇದನ್ನೂ ಓದಿ : God’s invocation on student: ಕಾಂತಾರ ವರಾಹ ರೂಪಂ ಹಾಡಿಗೆ ನೃತ್ಯ: ವಿದ್ಯಾರ್ಥಿ ಮೇಲೆ ಆವಾಹನೆಯಾಯ್ತು ದೈವ

ಇದನ್ನೂ ಓದಿ : Terrorist arrested in bengaluru: ಬೆಂಗಳೂರಿನಲ್ಲಿ ಭಯೋತ್ಪಾದಕರ ನಂಟು ಹೊಂದಿರುವ ವ್ಯಕ್ತಿ ಬಂಧನ

ದಕ್ಷಿಣ ಭಾಗದಿಂದ ಏರ್‌ ಪೋರ್ಟ್‌ ಗೆ ಹೋಗಲು ಮೈಸೂರು ರಸ್ತೆ, ನಾಯಂಡನಹಳ್ಳಿ, ಚಂದ್ರಲೇಔಟ್‌, ಗೊರಗುಂಟೆ ಪಾಳ್ಯ, ಬಿಇಎಲ್‌ ಸರ್ಕಲ್‌, ಗಂಗಮ್ಮ ಸರ್ಕಲ್, ಮದರ್‌ ಡೈರಿ, ಉನ್ನೀಕೃಷ್ಣನ್‌ ಜಂಕ್ಷನ್‌, ದೊಡ್ಡಬಳ್ಳಾಪುರ ರಸ್ತೆ, ರಾಜಾನುಕುಂಟೆ, ಅದ್ದಿಗನಹಳ್ಳಿ , ಎಂವಿಐಟಿ ಕ್ರಾಸ್‌ ಹಾಗೂ ವಿದ್ಯಾನಗರ್‌ ಕ್ರಾಸ್‌ ಮಾರ್ಗ ಬಳಸಬಹುದು. ಇನ್ನೂ ದೊಡ್ಡ ವಾಹನಗಳಿಗೂ ಕೂಡ ಫೆ. 17 ರವರೆಗೆ ಸಂಚಾರವನ್ನು ತಡೆಯಲಾಗಿದ್ದು, ಪ್ರತ್ಯೇಕ ಮಾರ್ಗಗಳನ್ನು ಸೂಚಿಸಲಾಗಿದೆ.

Aero India Show 2023: Aero India Show in Bengaluru from tomorrow: Change in vehicular traffic

Comments are closed.