“ಕಬ್ಜ” ಸಿನಿಮಾ ಟಿಕೆಟ್‌ ಬುಕಿಂಗ್‌ ಎಲ್ಲೆಲ್ಲಿ ಲಭ್ಯ ಎಂದು ಮಾಹಿತಿ ಕೊಟ್ಟ ಆರ್‌ ಚಂದ್ರು

ಸ್ಯಾಂಡಲ್‌ವುಡ್‌ ಬಹುನಿರೀಕ್ಷಿತ ಪ್ಯಾನ್‌ ಇಂಡಿಯಾ ಸಿನಿಮಾ “ಕಬ್ಜ” ರಿಲೀಸ್‌ಗೆ ದಿನಗಣನೆ ಶುರುವಾಗಿದೆ. ಈಗಾಗಲೇ ಬಿಡುಗಡೆಯಾದ ಟೀಸರ್‌, ಹಾಡುಗಳು ಹಾಗೂ ಟ್ರೈಲರ್‌ ಸಖತ್‌ ಸದ್ದು ಮಾಡುತ್ತಿದ್ದು, ಸಿನಿಪ್ರೇಕ್ಷಕರ ಕುತೂಹಲವನ್ನು ಇನ್ನಷ್ಟು ಕೆರಳಿಸಿದೆ. ಈ ಸಿನಿಮಾದ ಹೈಪ್‌ ಹೆಚ್ಚಿಸಲು ಸಿನಿತಂಡ ಈಗಾಗಲೇ ಪ್ರತಿ ಭಾಷೆಯಲ್ಲೂ ಅದ್ದೂರಿ ಪ್ರಿ-ರಿಲೀಸ್‌ ಇವೆಂಟ್‌ನ್ನು ಆಯೋಜಿಸಲಾಗಿದೆ. ಹೀಗಾಗಿ ಪರಭಾಷೆ ವಿತರಕರು ಸಿನಿಮಾ ವಿತರಣೆಗೆ ಮುಗಿಬಿದ್ದಿದ್ದಾರೆ. ಇದೀಗ ನಿರ್ದೇಶಕ ಆರ್‌ ಚಂದ್ರು ಸಿನಿಮಾ ಟಕೆಟ್‌ ಬುಕಿಂಗ್‌ (Kabza Movie Ticket Booking) ಬಗ್ಗೆ ತಮ್ಮ ಟ್ವೀಟರ್‌ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ.

ಈಗಾಗಲೇ ಸಿನಿಮಾದ ಬಗ್ಗೆ ಸಿನಿಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಹುಟ್ಟಿದ್ದು, ಹಾಗಾಗಿ ಫಸ್ಟ್‌ ಡೇ ಫಸ್ಟ್‌ ಶೋ ನೋಡುವುದಕ್ಕಾಗಿ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಈ ಎಲ್ಲಾ ಕಾರಣದಿಂದ ಅಭಿಮಾನಿಗಳು ಟಿಕೆಟ್‌ ಬುಕಿಂಗ್‌ಗಾಗಿ ಕಾದಿದ್ದಾರೆ. ನಿರ್ದೇಶಕ ಆರ್‌ ಚಂದ್ರು ತಮ್ಮ ಟ್ವೀಟರ್‌ನಲ್ಲಿ, “ಇಂದು ಸಂಜೆ 6 ಗಂಟೆ 1 ನಿಮಿಷಕ್ಕೆ ಥೇಟರ್ ಬುಕಿಂಗ್ ತೆರೆಯಲಿದೆ. 405 screen ಗಳಲ್ಲಿ ಕನ್ನಡ ಕಬ್ಜ ತೆರೆಕಾಣಲಿದೆ. ಕನ್ನಡ ಇತಿಹಾಸದಲ್ಲೇ ಅತಿಹೆಚ್ಚು ತೆರೆಯಲ್ಲಿ ಬಿಡುಗಡೆಗೊಳ್ಳುತ್ತಿರುವ ದಾಖಲೆಯಿದು.ಬೆಂಗಳೂರಿನ ಒರಾಯಿನ್ ಮಾಲ್ – ಮೈಸೂರಿನ ಡಿ ಆರ್ ಸಿ ಯಲ್ಲಿ ಪೂಜೆ ಸಲ್ಲಿಸುವ ಮೂಲಕ ಬುಕಿಂಗ್ ತೆರೆಯಲಿದೆ. ಥೇಟರುಗಳ ಮೊದಲ ಪಟ್ಟಿ ಹೀಗಿದೆ” ಎಂದು ಬರೆದು ಪೋಸ್ಟ್‌ ಮಾಡಿದ್ದಾರೆ.

ಈ ಸಿನಿಮಾ ಪಕ್ಕಾ ಬ್ಲಾಕ್‌ಬಸ್ಟರ್ ಎನ್ನುವ ಮಾತು ಜೋರಾಗಿದೆ. ಇದಕ್ಕೆಲ್ಲಾ ಮುಖ್ಯ ಕಾರಣ ಆರ್‌. ಚಂದ್ರು ವಿಷನ್, ಮೇಕಿಂಗ್, ರಿಚ್ ವಿಷ್ಯುವಲ್ಸ್, ಹ್ಯೂಜ್ ಸೆಟಪ್ಸ್, ಉಪ್ಪಿ, ಕಿಚ್ಚನ ಆರ್ಭಟ, ರವಿ ಬಸ್ರೂರು ಹಂಟಿಂಗ್ ಬಿಜಿಎಂ ಸಖತ್ ಮಜಾ ಕೊಡುತ್ತಿದೆ. ಇಡೀ ಟ್ರೈಲರ್‌ನಲ್ಲಿ ಸುದೀಪ್ ವಾಯ್ಸ್ ಹೈಲೆಟ್ ಆಗಿದ್ದು, ಕಿಚ್ಚನ ಒಂದೊಂದು ಡೈಲಾಗ್ ಅಭಿಮಾನಿಗಳಿಗೆ ಮಜಾ ಕೊಡುತ್ತಿದೆ. ಅಲ್ಲಲ್ಲಿ ‘ಕೆಜಿಎಫ್’ ಸಿನಿಮಾ ಚಹರೆ ಕಂಡರರೂ ಸಹ ಟ್ರೈಲರ್ ಅಂತೂ ಸಿನಿಪ್ರಿಯರಿಗೆ ಹೊಸ ಫೀಲ್ ನೀಡಿದೆ. ಸಿನಿಪ್ರೇಕ್ಷಕರಲ್ಲಿ ಫಸ್ಟ್ ಡೇ ಫಸ್ಟ್ ಶೋ ನೋಡಲೇಬೇಕು ಎನ್ನುವ ಕುತೂಹಲ ಹುಟ್ಟಿಸಿದೆ.

‘ಕಬ್ಜ’ ಸಿನಿಮಾದಲ್ಲಿ ನಾಯಕ ಮೊದಲು ಏರ್‌ಪೋರ್ಸ್ ಅಕಾಡೆಮಿ ಅಧಿಕಾರಿ ಅರ್ಕೇಶ್ವರ ಅಂಡರ್‌ವರ್ಲ್ಡ್ ಡಾನ್ ಆಗುವ ಕಥೆಯನ್ನು ಒಳಗೊಂಡಿದೆ. ಆತನ ಎದುರಾಳಿ ಭಾರ್ಗವ್ ಭಕ್ಷಿ ಪಾತ್ರದಲ್ಲಿ ಕಿಚ್ಚ ಸುದೀಪ್ ಮಿಂಚಿದ್ದಾರೆ. ರಾಣಿ ಮಧುಮತಿಯಾಗಿ ಶ್ರೀಯಾ ಮೋಡಿ ಮಾಡುತ್ತಾರೆ. ಇನ್ನು ನವಾಬ್ ಶಾ, ಕೋಟ ಶ್ರೀನಿವಾಸ್ ರಾವ್, ಕಬೀರ್ ದುಹಾನ್ ಸಿಂಗ್, ದೇವ್ ಗಿಲ್, ನೀನಾಸಂ ಅಶ್ವಥ್ ಸೇರಿದಂತೆ ಹಲವರು ಡಾನ್‌ಗಳಾಗಿ ಅಬ್ಬರಿಸಿದ್ದಾರೆ. ‘ದಿ ನೆಕ್ಸ್ಟ್ ಬಿಗ್ ಥಿಂಗ್ ಇನ್ ಇಂಡಿಯನ್ ಸಿನಿಮಾ’ ಎಂದು ‘ಕಬ್ಜ’ ಸಿನಿಮಾವನ್ನು ತೆರೆಗೆ ತರಲಾಗುತ್ತಿದೆ.

ಇದನ್ನೂ ಓದಿ : ನಟ ಗಣೇಶ್‌, ಪ್ರೀತಂ ಗುಬ್ಬಿ ಕಾಂಬಿನೇಷನ್‌ ‘ಬಾನ ದಾರಿಯಲ್ಲಿ’ ನಾಳೆ ಸಾಂಗ್‌ ರಿಲೀಸ್

ಇದನ್ನೂ ಓದಿ : ನಟಿ ಮಾಧುರಿ ದೀಕ್ಷಿತ್‌ ತಾಯಿ ಸ್ನೇಹಲತಾ ವಿಧಿವಶ

ಇದನ್ನೂ ಓದಿ : Oscars 2023 : RRR ನಾಟು ನಾಟು ಆಸ್ಕರ್ ಪ್ರಶಸ್ತಿ ಗೆಲ್ಲಬೇಕು : ಎಆರ್ ರೆಹಮಾನ್

ಈ ಸಿನಿಮಾವನ್ನು ತೆಲುಗಿನ ಫೇಮಸ್ ವಿತರಕರಾದ ಸುಧಾಕರ್ ರೆಡ್ಡಿ ಹಾಗೂ ಬಾಂಬೆ ರಮೇಶ್ ‘ಕಬ್ಜ’ವನ್ನು ತೆಲಂಗಾಣ ಹಾಗೂ ಆಂಧ್ರ ಪ್ರದೇಶದಲ್ಲಿ ರಿಲೀಸ್ ಮಾಡಲಿದ್ದಾರೆ. ಕೇರಳದಾದ್ಯಂತ ‘ಕಬ್ಜ’ ಸಿನಿಮಾವನ್ನು ಎಲ್‌ಜಿಎಫ್ ಸ್ಟುಡಿಯೋ ರಿಲೀಸ್ ಮಾಡುವುದಕ್ಕೆ ಮುಂದಾಗಿದೆ. ವಿತರಕ ರಮೇಶ್ ವ್ಯಾಸ್ ಎಂಬುವವರು ಈ ಸಿನಿಮಾವನ್ನು ಗ್ರ್ಯಾಂಡ್ ಆಗಿ ರಿಲೀಸ್ ಮಾಡುತ್ತಿದ್ದಾರೆ. ಕೇರಳದಲ್ಲಿ ಎಷ್ಟು ಸಿನಿಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ ಅನ್ನೋ ಮಾಹಿತಿ ಇನ್ನೂ ಹೊರಬೀಳಬೇಕಿದೆ. ಆನಂದ್ ಪಂಡಿತ್-ಲೈಕಾ ಪ್ರೊಡಕ್ಷನ್ ಇನ್ನು ಹಿಂದಿ ಬೆಲ್ಟ್‌ನಿಂದ ಭಾರತದಲ್ಲಿ ಅತೀ ಹೆಚ್ಚು ಕಲೆಕ್ಷನ್ ಆಗುತ್ತದೆ. ಉತ್ತರ ಭಾರತದ ಬಹುತೇಕ ರಾಜ್ಯಗಳಲ್ಲಿ ಹಿಂದಿ ಸಿನಿಮಾಗಳನ್ನು ಹೆಚ್ಚಾಗಿ ನೋಡುತ್ತಾರೆ. ತಮಿಳಿನ ಹೆಸರಾಂತ ನಿರ್ಮಾಣ ಸಂಸ್ಥೆ ಲೈಕಾ ವಿತರಣೆ ಮಾಡುತ್ತಿದೆ. ಈ ಕಾರಣಕ್ಕೆ ದೊಡ್ಡ ಮಟ್ಟದ ಬಾಕ್ಸಾಫೀಸ್ ಕಲೆಕ್ಷನ್ ಅನ್ನು ನಿರೀಕ್ಷೆ ಮಾಡಲಾಗಿದೆ.

R. Chandru has informed where “Kabza” movie ticket booking is available.

Comments are closed.