ಭಾನುವಾರ, ಏಪ್ರಿಲ್ 27, 2025
HomeCinemaರಚಿತಾರಾಮ್ ಅಭಿಮಾನಿಗಳಿಗೆ ಸಿಹಿಸುದ್ದಿ: ಸೆಟ್ಟೇರಲಿದೆ ಅಯೋಗ್ಯ 2

ರಚಿತಾರಾಮ್ ಅಭಿಮಾನಿಗಳಿಗೆ ಸಿಹಿಸುದ್ದಿ: ಸೆಟ್ಟೇರಲಿದೆ ಅಯೋಗ್ಯ 2

- Advertisement -

ಗ್ರಾಮ ಪಂಚಾಯತ್ ಸದಸ್ಯನಾಗಲು‌ ನಾಯಕ ನಡೆಸುವ ಸರ್ಕಸ್ ಆಧರಿಸಿ ನಿರ್ಮಾಣವಾದ ಸ್ಮಾಲ್ ಬಜೆಟ್ ಸಿನಿಮಾ ಆಯೋಗ್ಯ ತನ್ನ ಹಾಡುಗಳಿಂದಲೇ ಸುದ್ದಿ ಯಾಗಿತ್ತು. ಈ ಸಿನಿಮಾದ ಏನಮ್ಮಿ ಏನಮ್ಮಿ ಹಾಡು 100 ಮಿಲಿಯನ್ ವೀವ್ಸ್ (ayogya movie songs succuss) ಪಡೆದುಕೊಂಡಿದೆ. ಇದೇ ಖುಷಿಯಲ್ಲಿ ಒಟ್ಟಿಗೆ ಸೇರಿದ ಚಿತ್ರತಂಡ ಅಭಿಮಾನಿಗಳಿಗೆ ಸಿಹಿಸುದ್ದಿಯೊಂದನ್ನು ನೀಡಿದ್ದು ತೆರೆಮೇಲೆ ರಂಜಿಸಲು ಅಯೋಗ್ಯ- 2 ಸಿನಿಮಾ ನಿರ್ಮಾಣವಾಗಲಿದೆಯಂತೆ.

ಯೋಗ್ ರಾಜ್ ಭಟ್ ರ ಬಳಿ ಸಹಾಯಕ ನಿರ್ದೇಶಕನಾಗಿದ್ದ ಮಹೇಶ್ ಕುಮಾರ್ ನಿರ್ದೇಶಿಸಿದ ಈ ಸಿನಿಮಾ ಸೆಟ್ಟೇರಿದಾಗ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ನೆಗೆಟಿವ್ ಕಮೆಂಟ್ ಗಳು ಹರಿದು ಬಂದಿದ್ದವು ‌ ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಚಿತ್ರತಂಡ ಸಿನಿಮಾ ತೆರೆಗೆ ತಂದಿತ್ತು. ತೆರೆಯಲ್ಲಿ ಯಶಸ್ಸು ಕಂಡ ಸಿನಿಮಾ ಬರೋಬ್ಬರಿ 10 ಕೋಟಿಗೂ ಅಧಿಕ ಆದಾಯ ಗಳಿಸಿತ್ತು.

ಈ ಸಿನಿಮಾವನ್ನು ಅತ್ಯಂತ ಕಡಿಮೆ ಬಜೆಟ್ ನಲ್ಲಿ ಮಂಡ್ಯ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಶೂಟಿಂಗ್ ಮಾಡಲಾಗಿತ್ತು. ನೀನಾಸಂ ಸತೀಶ್ ಹಾಗೂ ರಚಿತಾರಾಮ್ ನಾಯಕಿಯಾಗಿದ್ದ ಈ ಸಿನಿಮಾದ ಹಾಡುಗಳು ಸಖತ್ ಹಿಟ್ ಆಗಿದ್ದು ಅದರಲ್ಲೂ ಏನಮ್ಮಿ ಏನಮ್ಮಿ ಹಾಡು 100 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ. ಅರ್ಜುನ್ ಜನ್ಯ ಸಂಗೀತ ನೀಡಿದ ಹಾಡು 100 ಮಿಲಿಯನ್ ವೀವ್ಸ್ ಪಡೆದ ಕನ್ನಡದ ಕೆಲವೇ ಕೆಲವು ಹಾಡುಗಳಲ್ಲಿ ಒಂದಾಗಿದೆ. 100 ಮಿಲಿಯನ್ ವೀವ್ಸ್ ಪಡೆದ ಹಾಡಿನ ಖುಷಿಯನ್ನು ಹಂಚಿಕೊಳ್ಳಲು ಚಿತ್ರತಂಡ ಒಂದೆಡೆ ಸೇರಿತ್ತು‌. ಈ ವೇಳೆ ನಿರ್ದೇಶಕ ಮಹೇಶ್ ಕುಮಾರ್ ಅಯೋಗ್ಯ-೨ ಸಿನಿಮಾದ ಸುಳಿವು ಕೊಟ್ಟಿದ್ದಾರೆ. ಮತ್ತೆ ರಚಿತಾರಾಮ್ ಸೇರಿದಂತೆ ಅಯೋಗ್ಯ ಚಿತ್ರತಂಡ ಒಟ್ಟಿಗೆ ಸೇರಲಿದ್ದೇವೆ ಎಂದಿದ್ದಾರೆ.

ಆ ಮೂಲಕ ಸದ್ಯದಲ್ಲೇ ಅಯೋಗ್ಯ,-2 ಸೆಟ್ಟೇರೋದು ಫಿಕ್ಸ್ ಎಂಬ ಸಂದೇಶ ನೀಡಿದ್ದಾರೆ. ಸಧ್ಯ ನಿರ್ದೇಶಕ ಮಹೇಶ್ ಕುಮಾರ್, ನಟ ನೀನಾಸಂ ಸತೀಶ್ ಹಾಗೂ ರಚಿತಾ ರಾಮ್ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯಸಿಯಾಗಿದ್ದಾರೆ. ಹೀಗಾಗಿ ಎಲ್ಲರ ಕಾಲ್ ಶೀಟ್ ಹೊಂದಿಸಿಕೊಂಡು ಮತ್ತೆ ಅಯೋಗ್ಯ 2 ಸಿನಿಮಾ ಆರಂಭಿಸಲು ಚಿಂತನೆ ನಡೆಸಿದೆ. ಈ ಭಾರಿ ಅದ್ದೂರಿ ಬಜೆಟ್ ನಲ್ಲಿ ಸಿನಿಮಾ ನಿರ್ಮಾಣ ಆಗಲಿದೆ ಯಂತೆ. ಈ ಭಾರಿ ಅಯೋಗ್ಯ ಸಿನಿಮಾ ನಾಯಕನು ಗ್ರಾಮ ಪಂಚಾಯತ್ ಅಧ್ಯಕ್ಷನಾಗಲು ನಡೆಸುವ ಹೋರಾಟದ ಕತೆಯನ್ನು ಸಿನಿಮಾ ತೋರಿಸಲಿದೆಯಂತೆ.

ಇದನ್ನೂ ಓದಿ : ಬಾಲಿವುಡ್ ಆಯ್ತು ಈಗ ಹಾಲಿವುಡ್ ಸರದಿ : ಆಲಿಯಾ ಭಟ್ ಕೊಟ್ರು ಸಿಹಿಸುದ್ದಿ

ಇದನ್ನೂ ಓದಿ : ಕ್ರಿಕೆಟ್ ಮೈದಾನದಲ್ಲಿ ಬೆವರು ಹರಿಸುತ್ತಿರುವ ಅನುಷ್ಕಾ ಶರ್ಮಾ; ಚಕ್ಡಾ ಎಕ್ಸ್‌ಪ್ರೆಸ್‌ಗೆ ಭರದ ಶೂಟಿಂಗ್

(Rachita Ram fans good news for after ayogya movie songs succuss)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular