ಭಾನುವಾರ, ಏಪ್ರಿಲ್ 27, 2025
HomeCinemaRadhika Pandit : ಎದೆ ಹಾಲನ್ನು ದಾನ ಮಾಡಿ : ನಟಿ ರಾಧಿಕಾ ಪಂಡಿತ್ ಮನವಿ

Radhika Pandit : ಎದೆ ಹಾಲನ್ನು ದಾನ ಮಾಡಿ : ನಟಿ ರಾಧಿಕಾ ಪಂಡಿತ್ ಮನವಿ

- Advertisement -

ತಮ್ಮ ವಿಶಿಷ್ಟ ಅಭಿನಯ, ವಿಭಿನ್ನ ಮ್ಯಾನರಿಸಂ ನಿಂದಲೇ ಸದ್ದು ಮಾಡಿದ ನಟಿ ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ಖ್ಯಾತಿಯ ರಾಧಿಕಾ ಪಂಡಿತ್ (Radhika Pandit). ಸದ್ಯ ತಾಯ್ತನವನ್ನು ಎಂಜಾಯ್ ಮಾಡ್ತಾ ಬಣ್ಣದ ಲೋಕದಿಂದ ಬ್ರೇಕ್ ಪಡೆದಿರೋ ನಟಿ ರಾಧಿಕಾ ಪಂಡಿತ್ ತಾಯಿಯಾಗಿದ್ದುಕೊಂಡು ತಾಯ್ತನ ಹಾಗೂ ಎದೆ ಹಾಲಿನ (donate Breast feed)ಮಹತ್ವ ಸಾರೋ ಅಭಿಯಾನವೊಂದಕ್ಕೆ ಕೈಜೋಡಿಸಿದ್ದಾರೆ. ಈ ಕುರಿತು ಮುಕ್ತವಾಗಿ ಮಾತನಾಡಿರೋ ರಾಧಿಕಾ ಪಂಡಿತ್ ಹಲವಾರು ಸಂಗತಿ ಹಂಚಿಕೊಂಡಿದ್ದಾರೆ.

Radhika Pandit appeals to mothers to donate Breast feed 5

ಕನ್ನಡದ ಹಲವು ಸಿನಿಮಾದಲ್ಲಿ ಮಿಂಚಿದ್ದ ನಟಿ ರಾಧಿಕಾ‌ಪಂಡಿತ್ ಈಗ ಒಂದಲ್ಲ ಎರಡು ಮಕ್ಕಳ ತಾಯಿ. ಸದ್ಯ ಮಕ್ಕಳ ಆರೈಕೆಯಲ್ಲಿರೋ ರಾಧಿಕಾ ಪಂಡಿತ್ (Radhika Pandit) ಮಕ್ಕಳಿಗೆ ತಾಯಿ ಹಾಲಿನ ಬಗ್ಗೆ ಮಾತನಾಡಿದ್ದಾರೆ. ಮಾತ್ರವಲ್ಲ ಎದೆಹಾಲಿನ (donate Breast feed) ಅವಶ್ಯಕತೆ ಇರೋ ಮಕ್ಕಳಿಗಾಗಿ ಎದೆಹಾಲು ದಾನ ಮಾಡುವಂತೆಯೂ ತಾಯಂದಿರ ಬಳಿ ಮಾತನಾಡಿದ್ದಾರೆ.

Radhika Pandit appeals to mothers to donate Breast feed 4

ಜೀವನದ ಅತ್ಯಂತ ಮಹತ್ವದ ವಸ್ತುಗಳಲ್ಲಿ ತಾಯಿಹಾಲು ಕೂಡ ಒಂದು. ತಾಯಿಹಾಲನ್ನು ಯಾವುದೇ ವಸ್ತುವಿಗೆ ಹೋಲಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಮಾತ್ರವಲ್ಲ ತಾಯಿ ಹಾಲಿನಲ್ಲಿ ಸಿಗುವ ನ್ಯೂಟ್ರಿಯನ್ಸ್ ಅಥವಾ ರೋಗ ನಿರೋಧಕ ಶಕ್ತಿ ಬೇರೆ ಯಾವುದರಲ್ಲೂ ಸಿಗಲು ಸಾಧ್ಯವಿಲ್ಲ.

Radhika Pandit appeals to mothers to donate Breast feed 3

ಆದರೆ ಕೆಲವು ಮಕ್ಕಳಿಗೆ ಈ ಹಾಲಿನ ಕೊರತೆ ಎದುರಾಗುತ್ತದೆ. ಫ್ರೀ‌ಮೆಚ್ಯೂರ್ ಇರಬಹುದು ಅಥವಾ ಯಾವುದೇ ಬೇರೆ ಮಗು ಇರಬಹುದು ಹಲವಾರು‌ಮಕ್ಕಳಿಗೆ ಈ ರೀತಿಯ ಕೊರತೆ ಎದುರಾಗುತ್ತದೆ. ಹಲವು ಮಕ್ಕಳ ಅಮ್ಮಂದಿರಿಗೆ ಬೇಕಷ್ಟು ಹಾಲು ಉತ್ಪಾದನೆಯಾಗೋದಿಲ್ಲ. ಹೀಗಾಗಿ ಇಂಥ ‌ಮಕ್ಕಳಿಗ ಮಕ್ಕಳಿಗಾಗಿ ಈಗ ಜಿಲ್ಲೆಗಳಲ್ಲಿ ಹಾಲು ಬ್ಯಾಂಕ್ ಅಥವಾ ಮದರ್ ಮಿಲ್ಕ್ ಬ್ಯಾಂಕ್ ನಿರ್ಮಾಣವಾಗುತ್ತಿದ್ದು ಇಂಥ ಬ್ಯಾಂಕ್ ಗಳಲ್ಲಿ ಹೆಚ್ಚಿನ ಹಾಲು ಉತ್ಪಾದನೆಯಾಗುತ್ತಿರುವಂತ ತಾಯಂದಿರು ತಮ್ಮ ಹಾಲನ್ನು ದಾನ ಮಾಡಿ ಅಗತ್ಯವಿರುವ ಮಕ್ಕಳಿಗೆ ಸಹಾಯವಾಗಲಿದೆ ಎಂದು ರಾಧಿಕಾ ಪಂಡಿತ್ ಮನವಿ ಮಾಡಿದ್ದಾರೆ. ಅಲ್ಲದೇ ಈ ಅಭಿಯಾನದ ಬಗ್ಗೆ ಡಾಕ್ಟರ್ ಶ್ರೀಕಾಂತ್ ಮಣಿಕಂಠಿ ಹೆಚ್ಚಿನ ಮಾಹಿತಿ ನೀಡಲಿದ್ದು ಅವರ ಸೂಚನೆಯನ್ನು ಪಾಲಿಸುವಂತೆಯೂ ಕೋರಿದ್ದಾರೆ.

Radhika Pandit appeals to mothers to donate Breast feed 2

ಇದೇ ಮಾರ್ಚ್ 27 ರಂದು ಡಾ.ಶ್ರೀಕಾಂತ್ ಮಣಿಕಂಠಿ ಹಾಗೂ ರೋಟರಿ ಕ್ಲಬ್ ಸಹಯೋಗದಲ್ಲಿ ನಗರದಲ್ಲಿ Donate Breast Milk And Save Lives ಎಂಬ ಸ್ಲೋಗನ್ ಅಡಿಯಲ್ಲಿ ವಾಕ್ ಥಾನ್ ನಡೆಯಲಿದ್ದು ಇದರಲ್ಲೂ ಕೈಜೋಡಿಸುವಂತೆ ರಾಧಿಕಾ‌ ಪಂಡಿತ್ ಮನವಿ ಮಾಡಿದ್ದಾರೆ. ರಾಧಿಕಾ ಸೋಷಿಯಲ್ ಮೀಡಿಯಾದಲ್ಲಿ ಈ ಪೋಸ್ಟ್ ಹಂಚಿಕೊಂಡಿದ್ದು , ಈ ಪೋಸ್ಟ್ 64 ಸಾವಿರ ವೀವ್ಸ್ ಪಡೆದಿದ್ದು ನೊರಾರು ಜನರು ರಾಧಿಕಾ ರಿಕ್ವೆಸ್ಟ್ ಸ್ಪಂದಿಸಿದ್ದಾರೆ.

ಇದನ್ನೂ ಓದಿ : ಮಲ್ಟಿಪ್ಲೆಕ್ಸ್ ನಿಂದ ಜೇಮ್ಸ್ ಕಿಕ್ ಔಟ್ ಗೆ ಒತ್ತಡ : ಬಿಜೆಪಿ ಶಾಸಕರ ವಿರುದ್ಧ ನಿರ್ಮಾಪಕರ ಅಸಮಧಾನ

ಇದನ್ನೂ ಓದಿ : ಇಳಿ ವಯಸ್ಸಿನಲ್ಲೂ ಬಡವರಿಗೆ ಮಿಡಿದ ನಟಿ : ಜಮೀನು ಮಾರಿ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾದ ಲೀಲಾವತಿ

(Radhika Pandit appeals to mothers to donate Breast feed)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular