Knife Skills : ಚಾಕುವಿನ ಹತ್ತು ಕರಾಮತ್ತುಗಳು ! ತರಕಾರಿ ಮತ್ತು ಹಣ್ಣುಗಳನ್ನು ಹೀಗೆ ಆಕರ್ಷಕವಾಗಿ ಕತ್ತರಿಸಿ!

ರೆಸ್ಟೋರೆಂಟ್‌ಗಳಲ್ಲಿ ಮಾಡಿದ ಪಿಝಾ ಅಥವಾ ನೂಡಲ್ಸ್‌ಗಳು ಮನೆಯಲ್ಲಿ ತಯಾರಿಸಿದ್ದಕ್ಕಿಂತ ಹೇಗೆ ರುಚಿಯಾಗಿರುತ್ತವೆ ಎಂಬುದು ಆಶ್ಚರ್ಯವಲ್ಲವೇ? ಇದು ಅವರು ಮಾಡುವ ಅಡುಗೆಯ ವಿಧಾನದಿಂದಲೇ? ಆದರೆ, ಅದು ಹಾಗಲ್ಲ! ರೆಸ್ಟೋರೆಂಟ್‌ಗಳಲ್ಲಿನ ವಿಧಾನಗಳನ್ನೇ ಮನೆಯಲ್ಲಿ ಪಾಲಿಸಿದರೂ ಅದರ ರುಚಿ ಮತ್ತು ವಿನ್ಯಾಸಗಳನ್ನು ಮಾಡುವುದರಲ್ಲಿ ನಾವು ಸೋತುಹೋಗುತ್ತೇವೆ. ಅದಕ್ಕೆ ನಾವು ಪದಾರ್ಥಗಳನ್ನು ಹೇಗೆ ಕತ್ತರಿಸುತ್ತೇವೆ (Knife Skills) ಅನ್ನುವುದನ್ನು ಗಮನಿಸಿ.

ಪದಾರ್ಥಗಳನ್ನು ಕತ್ತರಿಸುವ ರೀತಿ ಅಡುಗೆಯ ರುಚಿ ಮತ್ತು ವಿನ್ಯಾಸದ ಮೇಲೆ ಪ್ರಮುಖ ಪಾತ್ರವಹಿಸುತ್ತವೆ. ಅದಕ್ಕಾಗಿಯೇ ತಜ್ಞರು ಕೊಡುವ ಸಲಹೆಯೆಂದರೆ ಕೆಲವು ಮೂಲಭೂತವಾದ ಕತ್ತರಿಸುವ ಕೌಶಲ್ಯಗಳನ್ನು ಕಲಿಯುವುದು. ಅಡುಗೆಮನೆಯಲ್ಲಿ ಅಗತ್ಯವಾಗಿ ಬಳಸಲೇಬೇಕಾದ ವಸ್ತು ಚಾಕು(Knife). ಇದನ್ನು ಕೌಶಲ್ಯಪೂರ್ಣವಾಗಿ ಬಳಸುವುದರಿಂದ ವ್ಯಂಜನಗಳನ್ನು ರುಚಿಯಾಗಿಯೂ ಮತ್ತು ಆಕರ್ಷಕವಾಗಿಯೂ ಕಾಣವಂತೆ ಮಾಡಬಹುದು ಅನ್ನುತ್ತಾರೆ ಶೆಪ್‌ ಅನಹಿತಾ ಧೋಂಡೆ. ಅವರು ಚಾಕುವಿನ 10 ಕೌಶಲ್ಯಗಳನ್ನು ತಮ್ಮ ಇನ್‌ಸ್ಟಾಗ್ರಾಂನ ಮೂಲಕ ತಿಳಿಸಿದ್ದಾರೆ.

ಇದನ್ನೂ ಓದಿ : Ginger Health Benefits: ಹಸಿ ಶುಂಠಿಯಷ್ಟೇ ಅಲ್ಲಾ, ಒಣ ಶುಂಠಿಯೂ ಉಪಕಾರಿ; ಹಸಿ ಹಾಗೂ ಒಣ ಶುಂಠಿಯ ಪ್ರಯೋಜನಗಳೇನು ಗೊತ್ತಾ!

ಚಾಕುವಿನ 10 ಕೌಶಲ್ಯಗಳು:

  1. ಚಾಪ್‌ ಮಾಡುವುದು : ಇದು ಅಡುಗೆಮನೆಯಲ್ಲಿ ಅತ್ಯಂತ ಸುಲಭವಾಗಿ ಎಲ್ಲರೂ ಕತ್ತರಿಸುವ ವಿಧಾನವಾಗಿದೆ. ಹೇಗೆ ಈರುಳ್ಳಿಗಳನ್ನು ಅನಿಯಮಿತ ಆಕಾರದಲ್ಲಿ ಕತ್ತರಿಸುತ್ತೇವೆಯೋ ಹಾಗೆ ಪ್ರತಿದಿನ ಬಳಸುವ ತರಕಾರಿಗಳಿಗೂ ಅನ್ವಯಿಸಬಹುದು.
  2. ಕ್ಯೂಬ್‌ಗಳಂತೆಯೇ ಕತ್ತರಿಸುವುದು : ಇದು ನಿಖರತೆಯಿಂದ ಕೂಡಿದ ಕತ್ತರಿಸುವ ಶೈಲಿಯಾಗಿದೆ. ಇದರಲ್ಲಿ ಪದಾರ್ಥಗಳು ಏಕರೂಪದ ಗಾತ್ರದಿಂದ ಕೂಡಿರುತ್ತವೆ. ಈ ರೀತಿಯ ಕತ್ತರಿಸಿದ ಪದಾರ್ಥಗಳನ್ನು ಸಲಾಡ್‌ ಅಥವಾ ಸ್ಟರ್‌ ಪ್ರೈಗಳಲ್ಲಿ ಬಳಸುತ್ತಾರೆ.
  3. ಡೈಸ್‌ಗಳಾಗಿ ಕತ್ತರಿಸುವುದು : ಇದು ಚಾಪ್‌ ಮಾಡುವುದಕ್ಕಿಂತಲೂ ನಿರ್ದಿಷ್ಟ ಗಾತ್ರದಲ್ಲಿ ಕತ್ತರಿಸುವುದನ್ನು ಸೂಚಿಸುತ್ತದೆ. ಹೀಗೆ ಡೈಸ್‌ಗಳಾಗಿ ಕತ್ತರಿಸಿದ ಈರುಳ್ಳಿಗಳನ್ನು ಅಲಂಕರಿಸಲು ಮತ್ತು ಮ್ಯಾರಿನೇಡ್ಸ್‌ಗಳಲ್ಲಿ ಉಪಯೋಗಿಸುತ್ತಾರೆ.
  4. ಸ್ಲೈಸ್‌ ಮಾಡುವುದು : ಸ್ಲೈಸಿಂಗ್‌ ಅನ್ನುವುದು ಎಲ್ಲರೂ ತಿಳಿದಿರುವ ಸಾಮಾನ್ಯ ಪದ. ಪದಾರ್ಥಗಳನ್ನು ತೆಳುವಾಗಿ ಒಂದೇ ರೀತಿಯಲ್ಲಿ ಕತ್ತರಿಸುವುದು ಎಂದರ್ಥ. ಎಲ್ಲಾ ಹಣ್ಣು, ತರಕಾರಿ, ಚೀಸ್‌ ಮತ್ತು ಬ್ರೆಡ್‌ಗಳನ್ನು ಈ ರೀತಿಯಾಗಿಯೇ ಕತ್ತರಿಸುವುದು.
  5. ರೊಂಡೆಲ್ಲಾ ರೀತಿ: ರೊಂಡೆಲ್ಲಾ ಅಂದರೆ ರೌಂಡ್‌ ಆಗಿ ಕತ್ತರಿಸುವುದು ಎಂದರ್ಥ. ಸಾಮಾನ್ಯವಾಗಿ ಕೋನ ಅಥವಾ ಸಿಲೆಂಡರ್‌ ಆಕಾರದ ತರಕಾರಿ ಮತ್ತು ಹಣ್ಣುಗಳಾದ ಕ್ಯಾರೆಟ್‌, ಸವತೆಕಾಯಿ ,ಚೀನಿಕಾಯಿ, ಮತ್ತು ಬಾಳೆಹಣ್ಣು ಇವುಗಳನ್ನು ಕತ್ತರಿಸುವು ರೀತಿಯಾಗಿದೆ.
  6. ಜೂಲಿನ್‌ ರೀತಿ : ಇದು ಬೆಂಕಿಕಡ್ಡಿ ರೀತಿಯಲ್ಲಿ ಕಾಣಿಸುವುದು. ಹೆಚ್ಚಾಗಿ ಕ್ಯಾರೆಟ್‌, ಸೆಲೆರಿ ಮತ್ತು ಸವತೆಕಾಯಿಗಳನ್ನು ಕತ್ತರಿಸುವ ವಿಧಾನವಾಗಿದೆ. ಹೀಗೆ ಕತ್ತರಿಸಿದ ತರಕಾರಿಗಳು ಒಂದೇ ಹದವಾಗಿ ಕುಕ್‌ ಆಗಿರುವುದು. ಈ ವಿಧಾನವನ್ನು ಹೆಚ್ಚಾಗಿ ಏಷ್ಯನ್‌ ಕುಕ್ಕಿಂಗ್‌ಗಳಲ್ಲಿ ಕಾಣಬಹುದು.
  7. ಬ್ರೂನೈಸ್‌ ರೀತಿ: ಇದು ಜೂಲಿನ್‌ ರೀತಿಯಲ್ಲಿ ಕತ್ತರಿಸಿದ ನಂತರ ಪದಾರ್ಥಗಳನ್ನು ಕತ್ತರಿಸುವ ರೀತಿಯಾಗಿದೆ. ಜೂಲಿನ್‌ ರೀತಿಯಲ್ಲಿ ಕತ್ತರಿಸಿದ ಪದಾರ್ಥಗಳನ್ನು ಪುನಃ ಚಿಕ್ಕ ಗಾತ್ರದ ಡೈಸ್‌ಗಳಾಗಿಸಿ ಕ್ಯೂಬ್‌ಗಳಂತೆ ಕಾಣಿಸುವ ವಿಧಾನ. ಹೀಗೆ ಕತ್ತರಿಸಿದ ಪದಾರ್ಥಗಳನ್ನು ತಯಾರಿಸಿದ ವ್ಯಂಜನಗಳ ಪರಿಮಳ ಹೆಚ್ಚಿಸಲು ಉಪಯೋಗಿಸುತ್ತಾರೆ.
  8. ಮಿಂನ್ಸ್‌ ರೀತಿ: ಅತ್ಯಂತ ಚಿಕ್ಕದಾಗಿ ಕತ್ತರಿಸುವ ವಿಧಾನವಾಗಿದೆ. ಬೆಳ್ಳುಳ್ಳಿ, ಪಾರ್ಸಲೇ, ಹರ್ಬ್ಸ್‌ ಮತ್ತು ನಟ್ಸ್‌ಗಳನ್ನು ಈ ರೀತಿಯಾಗಿ ಕತ್ತಿರಿಸುತ್ತಾರೆ. ಇದಕ್ಕೆ ಒಂದು ಟಿಪ್ಸ್‌ ಇದೆ ಅದೇನೆಂದರೆ, ಎಲ್ಲಿಯವರೆಗೆ ನಿಮಗೆ ಅದು ಚಿಕ್ಕದಾಗಿದೆ ಎಂದು ಅನಿಸುವುದಿಲ್ಲವೋ ಅಲ್ಲಿಯವರೆಗೂ ಕತ್ತರಿಸುತ್ತಲೇ ಇರುವುದು. ಈ ರೀತಿ ಕತ್ತರಿಸಿದವುಗಳನ್ನು ಹೆಚ್ಚಾಗಿ ಸಾಸ್‌ ಮತ್ತು ಸೂಟ್‌ ಅಡುಗೆಗಳನ್ನು ಮಾಡಲು ಉಪಯೋಗಿಸುತ್ತಾರೆ.
  9. ಛಿಫೋನೇಡ್‌ : ಸೊಪ್ಪುಗಳನ್ನು ಕತ್ತರಿಸುವ ವಿಧಾನವಾಗಿದೆ. ಸೊಪ್ಪುಗಳನ್ನೆಲ್ಲಾ ಸೇರಿಸಿ ಬಿಗಿಯಾಗಿ ರೋಲ್‌ ಮಾಡಿ ಕೈಯಲ್ಲಿ ಹಿಡಿದುಕೊಳ್ಳಿ. ನಂತರ ಕತ್ತರಿಸಿ. ಉದ್ದವಾದ ತೆಳುವಾದ ರೀತಿಯಲ್ಲಿ ಸೊಪ್ಪುಗಳು ಕತ್ತರಿಸಲ್ಪಡುವುದು.
  10. ಬ್ಯಾಟೋನೆಟ್‌ ರೀತಿ : ಇದರ ಹೆಸರೇ ಹೇಳುವಂತೆ ಬ್ಯಾಟನ್‌(ಲಾಠಿ)ಗಳಂತೆ ಕತ್ತರಿಸುವುದು ಎಂದರ್ಥ. ಈ ಆಕಾರಗಳನ್ನು ಚಿಪ್ಸ್‌ ಮುಂತಾದವುಗಳನ್ನು ತಯಾರಿಸಲು ಉಪಯೋಗಿಸುತ್ತಾರೆ.

ಈ ಎಲ್ಲಾ ಚಾಕುವಿನ ಕೌಶಲ್ಯಗಳು ನಿಮಗೀಗ ತಿಳಿದಿದೆಯಲ್ಲವೇ ಅದೇ ರೀತಿ ಅಡುಗೆಗೆ ಬೇಕಾಗುವ ಪದಾರ್ಥಗಳನ್ನು ಕತ್ತರಿಸಿ ತಜ್ಞರಂತೆ ವ್ಯಂಜನ ಸಿದ್ಧಪಡಿಸಿ.

ಇದನ್ನೂ ಓದಿ : Skin Care ಬಿಸಿಲಿನ ತಾಪಮಾನದಿಂದ ಚರ್ಮದ ರಕ್ಷಣೆ ಹೇಗೆ? ಇಲ್ಲಿದೆ ಉಪಯುಕ್ತ ಟಿಪ್ಸ್‌!

(Knife Skills Chef Anahita teaches 10 knife skills to make cooking easier)

Comments are closed.