ಭಾನುವಾರ, ಏಪ್ರಿಲ್ 27, 2025
HomeCinemaನಟ ಯಶ್‌ ರಾಧಿಕಾಗೆ ನೀಡಿದ ಮೊದಲ ಗಿಫ್ಟ್ ಯಾವುದು ? ರಾಧಿಕಾ ಶೇರ್ ಮಾಡಿದ್ರು ಎಕ್ಸಕ್ಲೂಸಿವ್ ಪೋಟೋ

ನಟ ಯಶ್‌ ರಾಧಿಕಾಗೆ ನೀಡಿದ ಮೊದಲ ಗಿಫ್ಟ್ ಯಾವುದು ? ರಾಧಿಕಾ ಶೇರ್ ಮಾಡಿದ್ರು ಎಕ್ಸಕ್ಲೂಸಿವ್ ಪೋಟೋ

- Advertisement -

ಸ್ಯಾಂಡಲ್ ವುಡ್ ಪ್ರಿನ್ಸೆಸ್ ರಾಧಿಕಾ ಪಂಡಿತ್ ಹುಟ್ಟುಹಬ್ಬದ (Radhika Pandit Birthday) ಸಂಭ್ರಮದಲ್ಲಿದ್ದಾರೆ. ಆದರೆ ಈ ಭಾರಿಯೂ ರಾಧಿಕಾ ಪಂಡಿತ್ ಅಭಿಮಾನಿಗಳ ಜೊತೆ ಬರ್ತಡೇ ಸೆಲಿಬ್ರೇಟ್ ಮಾಡಿಕೊಂಡಿಲ್ಲ. ಬದಲಾಗಿ ಅಜ್ಞಾತ ಸ್ಥಳದಲ್ಲಿ ಕೂತು ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ್ದಾರೆ. ಅದರಲ್ಲೂ ತಾವು ಯಶ್ ಗಾಗಿ ಕಲಿತ ವಿದ್ಯೆಯೊಂದನ್ನೂ ಕೂಡ ರಾಧಿಕಾ ಪಂಡಿತ್ ರಿವೀಲ್ ಮಾಡಿದ್ದಾರೆ.

ಸ್ಯಾಂಡಲ್ ವುಡ್ ನ ರಾಮಾಚಾರಿ ಜೋಡಿ ಎಂದೇ ಕರೆಯಿಸಿಕೊಳ್ಳೋ ಯಶ್ ಮತ್ತು ರಾಧಿಕಾ ಕಿರುತೆರೆ ಯಿಂದ ಒಟ್ಟಿಗೆ ಕೆರಿಯರ್ ಆರಂಭಿಸಿದ್ದು, ಬಳಿಕ ಪ್ರೀತಿಸಿ ಕುಟುಂಬದವರ ಒಪ್ಪಿಗೆ ಪಡೆದು ಮದುವೆಯಾಗಿದ್ದು ಈಗ ಇತಿಹಾಸ. ಸದ್ಯ ಚಂದನವನದ ಮೋಸ್ಟ್ ಫೆವರಿಟ್ ತಾರಾ ಜೋಡಿ ಎನ್ನಿಸಿರೋ ರಾಧಿಕಾ ಮತ್ತು ಯಶ್ ಬಗ್ಗೆ ಅಭಿಮಾನಿಗಳಿಗೆ ತುಂಬ ಕುತೂಹಲ ಹಾಗೂ ಅಭಿಮಾನವಿದೆ. ಈ ಭಾರಿ ಮಾರ್ಚ್ 7 ರಂದು ತಮ್ಮ ಹುಟ್ಟುಹಬ್ಬದ ಹೊತ್ತಿನಲ್ಲಿ ಬೆಂಗಳೂರಿನಿಂದ ಹೊರಗಿದ್ದ ರಾಧಿಕಾ ಅದಕ್ಕಾಗಿ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಜೊತೆಗಿರೋದಾಗಿ ಹೇಳಿದ್ದರು.

ಕೊಟ್ಟ ಮಾತಿನಂತೆ ರಾಧಿಕಾ ಇನ್ ಸ್ಟಾಗ್ರಾಂನಲ್ಲಿ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ್ದಾರೆ. ಮಾತ್ರವಲ್ಲ ಈ ಪ್ರಶ್ನೆಗಳಿಗೆ ಉತ್ತರಿಸುತ್ತಲೇ ರಾಧಿಕಾ ತಮ್ಮ ಪ್ರೀತಿ ಹಾಗೂ ವೃತ್ತಿ ಬದುಕಿನ ಹಲವು ಸತ್ಯಗಳನ್ನು ಹಂಚಿಕೊಂಡಿದ್ದಾರೆ. ರಾಧಿಕಾ ಕೊಂಕಣಿ ಸಮುದಾಯಕ್ಕೆ ಸೇರಿದವರು , ಯಶ್ ಗೌಡರು ಹೀಗಾಗಿ ರಾಧಿಕಾ ಮತ್ತು ಯಶ್ ಆಹಾರ ಪದ್ಧತಿಯಲ್ಲಿ ಭಿನ್ನತೆ. ಇದನ್ನು ಕಾರಣವಾಗಿಟ್ಟುಕೊಂಡು ಅಭಿಮಾನಿಯೊಬ್ಬರು ನಿಮಗೆ ಮುದ್ದೆ ಮಾಡೋಕೆ ಬರುತ್ತಾ ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ರಾಧಿಕಾ ಯಶ್ ಜೊತೆ ಮುದ್ದೆ ಹಿಡಿದ ಪೋಟೋವೊಂದನ್ನು ಶೇರ್ ಮಾಡಿದ್ದಲ್ಲದೇ ಕೇವಲ ರಾಗಿ ಮುದ್ದೇ ಮಾತ್ರವಲ್ಲ ನನಗೆ ಮೆಂತೆ ಮುದ್ದೆನೂ ಮಾಡೋಕೆ ಬರುತ್ತೆ ಎಂದಿದ್ದಾರೆ. ಇನ್ನು ನಿಮ್ಮ ಸಕ್ಸಸಫುಲ್ ವೈವಾಹಿಕ ಬದುಕಿನ ಗುಟ್ಟೇನು ಎಂಬ ಪ್ರಶ್ನೆಗೆ ಉತ್ತರಿಸಿರೋ ರಾಧಿಕಾ ಅದು ಸ್ನೇಹ , ನನ್ನ ಹಾಗೂ ಯಶ್ ನಡುವಿನ ಪ್ರೆಂಡಶಿಪ್ ಎಂದಿದ್ದಾರೆ. ನಿಮಗ್ಯಾವ ಸಮಯ ಇಷ್ಟ ಎಂಬ ಪ್ರಶ್ನೆಗೆ ಮಕ್ಕಳು ಶಾಲೆಯಿಂದ ಹಾಗೂ ಯಶ್ ಎಲ್ಲ ಕೆಲಸ ಮುಗಿಸಿ ವಾಪಸ್ಸಾಗುವ ಸಂಜೆ ಮತ್ತು ಎಲ್ಲರೂ ಕುಳಿತು ಮಾತನಾಡುತ್ತ ಊಟ ಮಾಡುವ ಡಿನ್ನರ್ ಟೈಂ ನನಗೆ ಇಷ್ಟ ಎಂದಿದ್ದಾರೆ.

ಇದನ್ನೂ ಓದಿ : ಕಚಾ ಬಾದಮ್ ಗಾಯಕ ಭುವನ್ ಬಡ್ಯಾಕರ್ ಸಂಕಷ್ಟ : ವೈರಲ್ ಆಯ್ತು ಪೋಸ್ಟ್‌

ಇದನ್ನೂ ಓದಿ : ನಟ ರಮೇಶ್ ಅಭಿಮಾನಿಗಳಿಗೆ ಸಿಹಿಸುದ್ದಿ : ಮತ್ತೆ ಬರ್ತಿದ್ದಾರೆ ಶಿವಾಜಿ ಸುರತ್ಕಲ್

ಇದನ್ನೂ ಓದಿ : ಮಾಜಿ ಗೆಳಯನಿಂದ ಹಲ್ಲೆಗೊಳಗಾದ ಮಲಯಾಳಂ ನಟಿ ಅನಿಕಾ ವಿಕ್ರಮನ್‌

ಅಲ್ಲದೇ ರಾಧಿಕಾ ಕೈಯಲ್ಲಿ ಸದಾಕಾಲ ಇರುವ ಸಿಲ್ವರ್ ರಿಂಗ್ ಬಗ್ಗೆಯೂ ಮಾತನಾಡಿದ ರಾಧಿಕಾ, ಅದು ಸಿಲ್ವರ್ ರಿಂಗ್ ಅಲ್ಲಾ ಸಿಲ್ವರ್ ಡೈಮೆಂಡ್ ಗೆ ಸಮ. ನನ್ನ ಮೊದಲ ಗಳಿಕೆಯಲ್ಲಿ ತೆಗೆದುಕೊಂಡಿದ್ದು ಎನ್ನುವ ಮೂಲಕ ರಿಂಗ್ ಜೊತೆಗಿನ ಬಾಂಧವ್ಯ ಬಿಟ್ಟುಕೊಟ್ಟಿದ್ದಾರೆ. ಯಶ್ ನಿಮಗೆ ನೀಡಿದ ಮೊದಲ ಅಥವಾ ಪ್ರೇಶಿಯಸ್ ಗಿಫ್ಟ್ ಯಾವುದು ಎಂಬುದಕ್ಕೆ ಯಶ್ ರಾಧಿಕಾ ಗೆ ಕೊತ್ತಂಬರಿ ಸೊಪ್ಪು ನೀಡ್ತಿರೋ ಪೋಟೋ ಹಂಚಿಕೊಂಡು ಎವರಗ್ರೀನ್ ಗಿಫ್ಟ್ ಎಂದಿದ್ದಾರೆ.ಒಟ್ಟಿನಲ್ಲಿ ರಾಧಿಕಾ ಪಂಡಿತ್ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸುತ್ತ ಫ್ಯಾನ್ ಇಂಡಿಯಾ ಬರ್ತಡೆ ಸೆಲಿಬ್ರೇಟ್ ಮಾಡಿದ್ದಾರೆ.

Radhika Pandit Birthday: What was the first gift that actor Yash gave to Radhika? Radhika shared an exclusive photo

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular