Lucknow Super Giants new Jersey: ಲಕ್ನೋ ಸೂಪರ್ ಜೈಂಟ್ಸ್ ತಂಡದ ಹೊಸ ಜೆರ್ಸಿ ಅನಾವರಣ, ಹೇಗಿದೆ ಗೊತ್ತಾ ರಾಹುಲ್ ಪಡೆಯ ನ್ಯೂ ಜೆರ್ಸಿ?

ಬೆಂಗಳೂರು: ಕನ್ನಡಿಗ ಕೆ.ಎಲ್ ರಾಹುಲ್ (Rahul’s New Jersey) ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡ ಐಪಿಎಲ್ 16ನೇ ಆವೃತ್ತಿಯ ಟೂರ್ನಿಯಲ್ಲಿ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದೆ. ಲಕ್ನೋ ಸೂಪರ್ ಜೈಂಟ್ಸ್ ತಂಡದ ಹೊಸ ಜೆರ್ಸಿ ಅನಾವರಣಗೊಂಡಿದ್ದು, ಕಡು ನೀಲಿಬಣ್ಣದ ಬಟ್ಟೆಯೊಂದಿಗೆ ಎಲ್ಎಸ್’ಜಿ ಆಟಗಾರರು ಕಣಕ್ಕಿಳಿಯಲಿದ್ದಾರೆ (new jersey of Lucknow Super Giants) .

ಅಹ್ಮದಾಬಾದ್’ನಲ್ಲಿ ನಡೆದ ಸಮಾರಂಭದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆ.ಎಲ್ ರಾಹುಲ್ (KL Rahul) ತಂಡದ ಮಾಲೀಕ ಸಂಜೀವ್ ಗೋಯೆಂಕಾ, ಎಲ್ಎಸ್’ಜಿ ತಂಡದ ಮೆಂಟರ್ (ಮಾರ್ಗದರ್ಶಕ) ಗೌತಮ್ ಗಂಭೀರ್ ಮತ್ತು ಬಿಸಿಸಿಐ ಕಾರ್ಯದರ್ಶಿ ಜೈ ಶಾ ಲಕ್ನೋ ಸೂಪರ್ ಜೈಂಟ್ಸ್ ತಂಡದ ಹೊಸ ಜೆರ್ಸಿ(Lucknow Super Giants new Jersey) ಯನ್ನು ಅನಾವರಣಗೊಳಿಸಿದರು.

ಈ ಹಿಂದೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ಹಸಿರು ಮಿಶ್ರಿತ ನೀಲಿ ಬಣ್ಣದ ಜೆರ್ಸಿಯನ್ನು ಹೊಂದಿತ್ತು. ಕಳೆದ ಸಾಲಿನ ಟೂರ್ನಿಯ ಮೂಲಕ ಐಪಿಎಲ್’ಗೆ ಪದಾರ್ಪಣೆ ಮಾಡಿದ್ದ ಎಲ್ಎಸ್’ಜಿ ತಂಡ, ಚೊಚ್ಚಲ ಪ್ರಯತ್ನದಲ್ಲೇ ಪ್ಲೇ ಆಫ್ ಹಂತ ತಲುಪಿತ್ತು. ಆದರೆ ಎಲಿಮಿನೇಟರ್ ಪಂದ್ಯದಲ್ಲಿ ರಾಹುಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋತು ನಿರಾಸೆ ಅನುಭವಿಸಿತ್ತು.

ಈ ಸಾಲಿನ ಐಪಿಎಲ್ ಟೂರ್ನಿ ಮಾರ್ಚ್ 31ರಂದು ಆರಂಭವಾಗಲಿದ್ದು, ಏಪ್ರಿಲ್ 1ರಂದು ಲಕ್ನೋದಲ್ಲಿ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಕೆ.ಎಲ್ ರಾಹುಲ್ ಬಳಗ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ.

ಐಪಿಎಲ್-2023 ಟೂರ್ನಿಗೆ ಲಕ್ನೋ ಸೂಪರ್ ಜೈಂಟ್ಸ್ ತಂಡ:
ಕೆ.ಎಲ್ ರಾಹುಲ್ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಮಾರ್ಕಸ್ ಸ್ಟೋಯ್ನಿಸ್, ಆಯುಷ್ ಬದೋನಿ, ಕೃಣಾಲ್ ಪಾಂಡ್ಯ, ಕೃಷ್ಣಪ್ಪ ಗೌತಮ್, ಆವೇಶ್ ಖಾನ್, ಮೊಹ್ಸಿನ್ ಖಾನ್, ರವಿ ಬಿಷ್ಣೋಯ್, ಕರಣ್ ಶರ್ಮಾ, ಮನನ್ ವೋರಾ, ದೀಪಕ್ ಹೂಡ, ಕೈಲ್ ಮೇಯರ್ಸ್, ಮಾರ್ಕ್ ವುಡ್, ಮಯಾಂಕ್ ಯಾದವ್, ನಿಕೋಲಸ್ ಪೂರನ್, ಜೈದೇವ್ ಉನಾದ್ಕಟ್, ಯಶ್ ಠಾಕೂರ್, ರೊಮಾರಿಯೊ ಶೆಫರ್ಡ್, ಡೇನಿಯೆಲ್ ಸ್ಯಾಮ್ಸ್, ಅಮಿತ್ ಮಿಶ್ರಾ, ಪ್ರೇರಕ್ ಮಂಕಡ್, ಸ್ವಪ್ನಿಲ್ ಸಿಂಗ್, ನವೀನ್ ಉಲ್ ಹಕ್, ಯುಧ್ವೀರ್ ಚರಕ್.

ಇದನ್ನೂ ಓದಿ : ಮುಂಬೈನ ಗಲ್ಲಿಯಲ್ಲಿ ಮಕ್ಕಳೊಂದಿಗೆ ಟೆನಿಸ್ ಬಾಲ್ ಕ್ರಿಕೆಟ್ ಆಡಿ “ಸುಪ್ಲಾ ಶಾಟ್” ಬಾರಿಸಿದ ಸೂರ್ಯಕುಮಾರ್ ಯಾದವ್

ಇದನ್ನೂ ಓದಿ : Women’s Premier League: ಸತತ ಎರಡು ಸೋಲುಗಳ ಎಫೆಕ್ಟ್, ರಾಯಲ್ ಚಾಲೆಂಜರ್ಸ್ ತಂಡದ ಪ್ಲೇ ಆಫ್ ಹಾದಿ ಕಷ್ಟ ಕಷ್ಟ

ಇದನ್ನೂ ಓದಿ : Prithvi Shaw meets Kiccha Sudeep: ಕಿಚ್ಚ ಸುದೀಪ್ ಭೇಟಿ ಮಾಡಿದ ಪೃಥ್ವಿ ಶಾ, ಇನ್’ಸ್ಟಾಗ್ರಾಮ್’ನಲ್ಲಿ ಸಂತಸ ಹಂಚಿಕೊಂಡ ಮುಂಬೈಕರ್

Lucknow Super Giants New JERSEY: The new jersey of Lucknow Super Giants is unveiled, what is Rahul’s New Jersey?

Comments are closed.