ನಾಲ್ವರನ್ನು ಬಿಟ್ಟು ಎಲ್ಲರಿಗೂ ಟಿಕೇಟ್: ಬಿಜೆಪಿಯಲ್ಲಿ ಸಂಚಲನ ಮೂಡಿಸಿದ ಬಿ.ಎಸ್.ಯಡಿಯೂರಪ್ಪ ಹೇಳಿಕೆ

ಬೆಂಗಳೂರು : ಮೋದಿ ಬಿಜೆಪಿಯಲ್ಲಿ ಕುಟುಂಬ ರಾಜಕಾರಣಕ್ಕೆ ಅವಕಾಶವಿಲ್ಲ ಎಂದು ಘೋಷಿಸಿದ್ದರೂ ಬಿಜೆಪಿಯಲ್ಲಿ ಟಿಕೇಟ್ ಗಾಗಿ ಕಾಯುತ್ತಿರೋ ಅಪ್ಪ ಮಕ್ಕಳ ಪಟ್ಟಿ ದೊಡ್ಡದಿದೆ. ಈ ಮಧ್ಯೆ ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿಸಿಎಂ ಬಿಎಸ್ವೈ(BS Yediyurappa) ನೀಡಿರೋ ಹೇಳಿಕೆ ಈಗ ಬಿಜೆಪಿಯ ಟಿಕೇಟ್ ಆಕಾಂಕ್ಷಿಗಳ ಎದೆಯಲ್ಲಿ ನಡುಕ ಮೂಡಿಸಿದೆ. ಕಲ್ಬುರ್ಗಿಯಲ್ಲಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ ಈ ಭಾರಿ ಒಂದು ನಾಲ್ಕು ಶಾಸಕರನ್ನು ಹೊರತು ಪಡಿಸಿ ಉಳಿದವರಿಗೆಲ್ಲ ಬಿಜೆಪಿಯಿಂದ ಟಿಕೇಟ್ ಸಿಗಲಿದೆ ಎಂದಿದ್ದಾರೆ.

ಬಿಜೆಪಿಯ ನಾಯಕ ಬಿ.ಎಸ್.ಯಡಿಯೂರಪ್ಪ (BS Yediyurappa) ಹೇಳಿರೋ ಈ ಮಾತಿನಿಂದ ಬಿಜೆಪಿ ಪಾಳಯದಲ್ಲಿ ನಡುಕ ಮೂಡಿಸಿದೆ. ಹಲವು ಶಾಸಕರು ಬಿ.ಎಸ್.ಯಡಿಯೂರಪ್ಪ ಹೇಳಿಕೆಯಿಂದ ಕಂಗಾಲಾಗಿದ್ದು, ತಮ್ಮ ಟಿಕೇಟ್ ಉಳಿಸಿಕೊಳ್ಳೋದು ಹೇಗೆ ಎಂಬ ಚಿಂತೆಯಲ್ಲಿದ್ದಾರಂತೆ. ಇನ್ನು ಕೆಲವರು ತಮಗೆ ಟಿಕೇಟ್ ಸಿಗುತ್ತೋ ಇಲ್ವೋ? ಟಿಕೇಟ್ ಕಳ್ಕೊಂಡವರ ಲಿಸ್ಟ್ ನಲ್ಲಿ ತಮ್ಮ ಹೆಸರು ಇದ್ಯಾ ಎಂದು ಆಪ್ತರ ಬಳಿ ಕೇಳ್ಕೋತಿದ್ದಾರಂತೆ.

ಮೂಲಗಳ ಮಾಹಿತಿ ಪ್ರಕಾರ ಈಗಾಗಲೇ ಬಿಜೆಪಿ ಹೈಕಮಾಂಡ್ ತಳಮಟ್ಟದಿಂದ ಮಾಹಿತಿ ಸಂಗ್ರಹ ಮಾಡಿದ್ದು, ಜನಾಭಿಪ್ರಾಯ ಹಾಗೂ ಕಾರ್ಯಕರ್ತರ ಅಭಿಪ್ರಾಯ ಆಧರಿಸಿ ಹಲವು ಶಾಸಕರ ಮಾರ್ಕ್ಸ್ ಕಾರ್ಡ್ ಸಿದ್ಧಪಡಿಸಿದೆಯಂತೆ‌. ಇನ್ನೂ ಕೆಲವರಿಗೆ ನಿಮಗೆ ಟಿಕೇಟ್ ಸಿಗೋದು ಅನುಮಾನವಿದೆ. ಇನ್ನಾದರೂ ಕ್ಷೇತ್ರಕ್ಕೆ ಹೋಗಿ ಜನರ ಮನಸ್ಸು ಗೆದ್ದು ಟಿಕೇಟ್ ಪಡೆಯೋ ಪ್ರಯತ್ನ ಮಾಡಿ ಎಂದು ಸೂಚನೆ ನೀಡಿದೆಯಂತೆ. ಇದೇ ಆಧಾರದ ಮೇಲೆ ಬಿಎಸ್ವೈ ಹೇಳಿದ್ದಾರೆ ಎನ್ನಲಾಗ್ತಿದೆ. ಇದನ್ನು ಕೇಳಿದ ಮೇಲೆ ಮತ್ತಷ್ಟು ಆತಂಕಿತರಾದ ಶಾಸಕರು ತಮ್ಮ ಆಪ್ತ ನಾಯಕರಿಗೆ ದುಂಬಾಲು ಬಿದ್ದಿದ್ದಾರಂತೆ.

ಇನ್ನೊಂದೆಡೆ ಬಿಜೆಪಿ ಹೈಕಮಾ‌ಂಡ್ ವಯಸ್ಸಿನ ಕಾರಣ ಮುಂದಿಟ್ಟು ಕೊಂಡು ಈಶ್ವರಪ್ಪ, ಸೋಮಣ್ಣನಂತಹ ಹಲವು‌ ನಾಯಕರಿಗೆ ಟಿಕೇಟ್ ನೀಡದಿರಲು ನಿರ್ಧರಿಸಿದೆಯಂತೆ. ಇದೇ ಕಾರಣಕ್ಕೆ ಸೋಮಣ್ಣ ಕೂಡ ಮುನಿಸಿಕೊಂಡು ಪಕ್ಷದ ಚಟುವಟಿಕೆಯಿಂದ ದೂರ ಉಳಿದಿದ್ದಾರೆ ಎನ್ನಲಾಗಿದೆ. ಸರ್ವೇ ವರದಿಯನ್ನೂ ಆಧರಿಸಿ ಬಿಜೆಪಿ ಹೈಕಮಾಂಡ್ ಟಿಕೇಟ್ ನೀಡೋ ಲೆಕ್ಕದಲ್ಲಿದೆಯಂತೆ‌. ಅಲ್ಲದೇ ಭ್ರಷ್ಟಾಚಾರದ ಮೂಲಕ ಪಕ್ಷಕ್ಕೆ ಮುಜುಗರ ತಂದ ಮಾಡಾಳು ವಿರೂಪಾಕ್ಷಪ್ಪ. ಸೇರಿದಂತೆ ಕೆಲವರಿಗೆ ಇದೇ ಕಾರಣಕ್ಕೆ ಟಿಕೇಟ್ ತಪ್ಪಲಿದೆಯಂತೆ. ಒಟ್ಟಿನಲ್ಲಿ ಈ ಎಲ್ಲ ಕಾರಣಕ್ಕೆ ಬಿಜೆಪಿಯ ಹಲವು ಹಾಲಿ ಶಾಸಕರು ಮಾಜಿ ಶಾಸಕರಾಗಿಯೇ ಉಳಿಯೋದು ಬಹುತೇಕ ಖಚಿತವಾಗಿದ್ದು ಲಿಸ್ಟ್ ಹೊರಬಿದ್ದ ಬಳಿಕ ಸ್ಪಷ್ಟ ಚಿತ್ರಣ ಸಿಗಲಿದೆ.

ಇದನ್ನೂ ಓದಿ : H3N2 inFluenza A virus: H3N2 ಕೊರೊನಾಕ್ಕಿಂತಲೂ ಅಪಾಯಕಾರಿಯೇ? ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ?

ಇದನ್ನೂ ಓದಿ : ಪಟ್ಟು ಬಿಡದ ರಮನಾಥ ರೈ, ಗುಟ್ಟು ಬಿಡದ ಹೈಕಮಾಂಡ್; ಬಂಟ್ವಾಳ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಇನ್ನೂ ನಿಗೂಢ !

English news Click here

Comments are closed.