Radhika Pandit : ಅಮ್ಮ ರಾಧಿಕಾ ಪಂಡಿತ್‌ನಂತೆ ಫೋಟೋಗೆ ಫೋಸ್‌ ಕೊಟ್ಟ ಮಗಳು ಆಯ್ರಾ ಯಶ್‌

ಅಭಿಮಾನಿಗಳು ಸಾಮಾನ್ಯವಾಗಿ ತಮ್ಮ ಮೆಚ್ಚಿನ ನಟ-ನಟಿಯರ ಮಕ್ಕಳನ್ನು ಕೂಡ ಅವರಷ್ಟೇ ಪ್ರೀತಿಸುತ್ತಾರೆ. ಹಾಗೆಯೇ ಸೆಲೆಬ್ರಿಟಿಗಳ ಮಕ್ಕಳ ಚಲನವಲನಗಳನ್ನು ಗಮನಿಸುತ್ತಾ ಇರುತ್ತಾರೆ. ಹೀಗಾಗಿ ಮೆಚ್ಚಿನ ಅಭಿಮಾನಿಗಳಿಗೋಸ್ಕರ ನಟ-ನಟಿಯರು ತಮ್ಮ ಮಕ್ಕಳ ಫೋಟೋ ಹಾಗೂ ಅವರ ಚಟುವಟಿಕೆಗಳನ್ನು ಆಗಾಗ್ಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ನಟಿ ರಾಧಿಕಾ ಪಂಡಿತ್‌ (Radhika Pandit) ಮಗಳು ಆಯ್ರಾ ಯಶ್‌ (Ayra Yash) ಜೊತೆಯಾಗಿ ತೆಗೆದಿರುವ ಪೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋವನ್ನು ನೋಡಿದ ಅಭಿಮಾನಿಗಳು ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ನಟ ಯಶ್‌ ಹಾಗೂ ರಾಧಿಕಾ ಪಂಡಿತ್‌ ದಂಪತಿಗಳಿಗೆ ಇಬ್ಬರೂ ಮಕ್ಕಳು ಇರುವುದು ಎಲ್ಲರಿಗೂ ತಿಳಿದಿರುತ್ತದೆ. ಇನ್ನು ಹುಟ್ಟಿನಿಂದಲೂ ಆಯ್ರಾ ಯಶ್‌ ವಿಶೇಷ ಅಭಿಮಾನಿ ಬಳಗ ಇದೆ. ಆಯ್ರಾ ಯಶ್‌ ಸಣ್ಣ ವಯಸ್ಸಿನಿಂದ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಹಾಗಾಗಿ ರಾಧಿಕಾ ಪಂಡಿತ್‌ ಹಾಗೂ ಯಶ್‌ ಅವರೊಂದಿಗಿನ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ಬಂದಿದ್ದಾರೆ. ಸದ್ಯ ರಾಧಿಕಾ ಪಂಡಿತ್‌ ಮಗಳು ಆಯ್ರಾ ಯಶ್‌ ಜೊತೆ ಹಂಚಿಕೊಂಡಿರುವ ಪೋಟೋ ಎಲ್ಲರ ಮೆಚ್ಚುಗೆ ಪಡೆದುಕೊಂಡಿದೆ.

ಇದನ್ನೂ ಓದಿ : Saanya Iyer : ಮತ್ತೆ ಬೋಲ್ಡ್‌ ಆಗಿ ಫೋಟೋಶೂಟ್‌ ಮಾಡಿಸಿದ ನಟಿ ಸಾನ್ಯಾ ಅಯ್ಯರ್‌

ಅಮ್ಮ, ಮಗಳು ಇಬ್ಬರೂ ಒಂದೇ ಬಣ್ಣದ ಉಡುಗೆಯಲ್ಲಿ ಗಲ್ಲದ ಮೇಲೆ ಕೈ ಇಟ್ಟುಕೊಂಡು ಫೋಟೋಗೆ ಪೋಸ್‌ ನೀಡಿದ್ದಾರೆ. ಹೀಗಾಗಿ ಆಯ್ರಾ ಯಶ್‌ ಅಮ್ಮನಂತೆ ಸಖತ್‌ ಕ್ಯೂಟ್‌ ಆಗಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಅಮ್ಮನ್ನೇ ಮಗಳು ಮೀರಿಸುವ ಹಾಗೆ ಫೋಟೋಗೆ ಪೋಸ್‌ ನೀಡಿದ್ದಾಳೆ ಎಂದು ಹೇಳಿದ್ದಾರೆ. ಈ ಫೋಟೋ ಈಗಾಗಲೇ ಸಾಕಷ್ಟು ಕಾಮೆಮಟ್‌ ಹಾಗೂ ಲೈಕ್ಸ್‌ ಒತ್ತಿದ್ದಾರೆ.

Radhika Pandit: Daughter Ayra Yash posed for the photo like mother Radhika Pandit.

Comments are closed.