India vs West Indies Live 1st t20 : ಭಾರತ – ವೆಸ್ಟ್‌ ಇಂಡೀಸ್‌ 1 ನೇ ಟಿ20 : ಟಾಸ್‌ ಗೆದ್ದ ವೆಸ್ಟ್‌ ಇಂಡಿಸ್‌ ಬೌಲಿಂಗ್‌ ಆಯ್ಕೆ

ಟ್ರೆನಿಡಾಡ್‌ : India vs West Indies Live 1st t20 : ವೆಸ್ಟ್‌ ಇಂಡಿಸ್‌ ವಿರುದ್ದ ಏಕದಿನ ಸರಣಿಯನ್ನು ಕೈವಶ ಮಾಡಿಕೊಂಡಿರುವ ಟೀಂ ಇಂಡಿಯಾ ಇದೀಗ ಟಿ20 ಸರಣಿಗೆ ಸಜ್ಜಾಗಿದೆ. ಟ್ರೆನಿಡಾಡ್‌ನ ಬ್ರಾಯನ್‌ ಲಾರಾ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಟಾಸ್‌ ಗೆದ್ದಿರುವ ವೆಸ್ಟ್‌ ಇಂಡಿಸ್‌ ತಂಡ ಈಗಾಗಲೇ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದೆ. ಭಾರತದ ಪ್ಲೇಯಿಂಗ್ XIನಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದ್ದು, ತಿಲಕ್‌ ವರ್ಮಾ ಹಾಗೂ ಮಖೇಶ್‌ ಕುಮಾರ್‌ ಟಿ20 ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದು, ಮೂವರು ಸ್ಪಿನ್ನರ್‌ಗಳೊಂದಿಗೆ ಭಾರತ ಕಣಕ್ಕೆ ಇಳಿದಿದೆ.

ರೋಹಿತ್‌ ಶರ್ಮಾ ಅನುಪಸ್ಥಿತಿಯಲ್ಲಿ ಹಾರ್ದಿಕ್‌ ಪಾಂಡ್ಯ ಟಿ೨೦ ಸರಣಿಯಲ್ಲಿ ಭಾರತ ತಂಡವನ್ನು ಮುನ್ನೆಡೆಸುತ್ತಿದ್ದಾರೆ. ಮೊದಲ ಶುಭಮನ್‌ ಗಿಲ್‌ ಜೊತೆಗೆ ಇಶಾನ್‌ ಕಿಶನ್‌ ಆರಂಭಿಕ ಆಟಗಾರರಾಗಿ ಕಾಣಿಸಿಕೊಂಡಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್‌ ಯಾದವ್‌, ತಿಲಕ್‌ ವರ್ಮಾ, ಹಾರ್ದಿಕ್‌ ಪಾಂಡ್ಯ, ಸಂಜು ಸ್ಯಾಮ್ಸನ್‌ ತಂಡಕ್ಕೆ ಬಲ ತುಂಬಲಿದ್ದಾರೆ. ಕುಲದೀಪ್‌ ಯಾದವ್‌, ಯಜುವೇಂದ್ರ ಚಹಾಲ್‌, ಅಕ್ಷರ್‌ ಪಟೇಲ್‌ ತಂಡದಲ್ಲಿದ್ದಾರೆ. ಉಳಿದಂತೆ ವೇಗದ ಬೌಲಿಂಗ್‌ನಲ್ಲಿ ಅರ್ಶದೀಪ್‌ ಸಿಂಗ್‌, ಮುಕೇಶ್‌ ಕುಮಾರ್‌ ವೇಗದ ದಾಳಿ ಸಂಘಟಿಸಲಿದ್ದಾರೆ. ಭಾರತ ಎಲ್ಲಾ ವಿಭಾಗದಲ್ಲಿಯೂ ಬಲಿಷ್ಟವಾಗಿದೆ.

ಇನ್ನು ವೆಸ್ಟ್‌ ಇಂಡಿಸ್‌ ತಂಡ ಕೂಡ ಬಲಿಷ್ಠವಾಗಿದೆ. ರೊಮನ್‌ ಪೋವೆಲ್‌ ನೇತೃತ್ವದಲ್ಲಿ ವೆಸ್ಟ್‌ ಇಂಡಿಸ್‌ ತಂಡ ಕಣಕ್ಕೆ ಇಳಿದಿದ್ದು, ಏಕದಿನ ಸರಣಿಯ ಸೋಲಿಗೆ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದೆ. ತಂಡದಲ್ಲಿ ಯುವ ಬಲಿಷ್ಠ ಆಟಗಾರರಿದ್ದಾರೆ. ಆದರೆ ಯಾರಿಂದಲೂ ಕೂಡ ನಿರೀಕ್ಷಿತ ಮಟ್ಟದ ಪ್ರದರ್ಶನ ಬರುತ್ತಿಲ್ಲ. ಕೈಲೆ ಮೈರಿಸ್‌ ಜೊತೆ ಬ್ರೆಂಡನ್‌ ಕಿಂಗ್‌ ಆರಂಭಿಕ ಆಟಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ. ನಂತರದಲ್ಲಿ ಜೆ ಚಾರ್ಲ್ಸ್‌, ನಿಕೋಲಸ್‌ ಪೂರಾನಾ, ಹೆಟ್ಮಯರ್‌, ರೋಮನ್‌ ಪೊವೆಲ್‌, ಜೇಸನ್‌ ಹೋಲ್ಡರ್‌, ರೋಮಿರೋ ಶೇಫ್ಯಾರ್ಡ್‌ ತಂಡದಲ್ಲ ಬ್ಯಾಟಿಂಗ್‌ ಬಲ ತುಂಬಲಿದ್ದಾರೆ. ಉಳಿದಂತೆ ಅಕೇಲ್ ಹೋಸೇನ್, ಅಲ್ಜಾರಿ ಜೋಸೆಫ್, ಒಬೆಡ್ ಮೆಕಾಯ್ ಬೌಲಿಂಗ್‌ ನಲ್ಲಿ ಉತ್ತಮ ದಾಳಿ ಸಂಘಟಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಭಾರತದಲ್ಲಿ ಐಪಿಎಲ್‌ ಆಡಿರುವ ಹಲವು ಆಟಗಾರರು ವೆಸ್ಟ್‌ ಇಂಡಿಸ್‌ ತಂಡದಲ್ಲಿರುವುದು ಪ್ಲಸ್‌ ಪಾಯಿಂಟ್.‌

ಭಾರತ ತಂಡ : ಶುಭಮನ್ ಗಿಲ್, ಇಶಾನ್ ಕಿಶನ್ (WK), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (c), ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್

ಮೀಸಲು ಆಟಗಾರರು : ಯಶಸ್ವಿ ಜೈಸ್ವಾಲ್, ಉಮ್ರಾನ್ ಮಲಿಕ್, ಅವೇಶ್ ಖಾನ್, ರವಿ ಬಿಷ್ಣೋಯ್

ವೆಸ್ಟ್‌ ಇಂಡಿಸ್‌ ತಂಡ : ಕೈಲ್ ಮೇಯರ್ಸ್, ಬ್ರಾಂಡನ್ ಕಿಂಗ್, ಜಾನ್ಸನ್ ಚಾರ್ಲ್ಸ್ (wk), ನಿಕೋಲಸ್ ಪೂರನ್, ಶಿಮ್ರಾನ್ ಹೆಟ್ಮೆಯರ್, ರೋವ್ಮನ್ ಪೊವೆಲ್ (c), ಜೇಸನ್ ಹೋಲ್ಡರ್, ರೊಮಾರಿಯೋ ಶೆಫರ್ಡ್, ಅಕೆಲ್ ಹೋಸೇನ್, ಅಲ್ಜಾರಿ ಜೋಸೆಫ್, ಒಬೆಡ್ ಮೆಕಾಯ್

ಮೀಸಲು ಆಟಗಾರರು : ಶಾಯ್ ಹೋಪ್, ಒಶಾನೆ ಥಾಮಸ್, ಓಡಿಯನ್ ಸ್ಮಿತ್, ರೋಸ್ಟನ್ ಚೇಸ್

ಇದನ್ನೂ ಓದಿ : Exclusive: KL Rahul : ಬ್ಯಾಟ್ ಹಿಡಿಯುವ ಕೈಯಲ್ಲಿ ಗನ್, ಹೊಸ ಅವತಾರದಲ್ಲಿ ಕಾಣಿಸಿಕೊಂಡ ಕೆ.ಎಲ್ ರಾಹುಲ್

ಇದನ್ನೂ ಓದಿ : Ishan Kishan – Sanju Samson : ಸಂಜು ಸ್ಯಾಮ್ಸನ್ ವಿಶ್ವಕಪ್ ಕನಸಿಗೆ ಕೊಳ್ಳಿ ಇಟ್ಟ ಇಶಾನ್ ಕಿಶನ್

Comments are closed.