Radhika Pandit fan Shobhita : ನಟ ಯಶ್‌ ರಾಧಿಕಾ ಪಂಡಿತ್‌ ರೀತಿಯಲ್ಲೇ ಎಂಗೇಜ್‌ ಆದ ಅಭಿಮಾನಿ ಶೋಭಿತಾ

ಸ್ಯಾಂಡಲ್‌ವುಡ್‌ ರಾಕಿಂಗ್‌ ಸ್ಟಾರ್‌ ಯಶ್‌ ಹಾಗೂ ರಾಧಿಕಾ ಪಂಡಿತ್‌ಗೆ ಪ್ರತ್ಯೇಕವಾದ ಫ್ಯಾನ್ಸ್‌ ಪಾಲೋವರ್‌ (Radhika Pandit fan Shobhita) ಇದ್ದಾರೆ. ಸಾಮಾನ್ಯವಾಗಿ ಅಭಿಮಾನಿಗಳು ತಮ್ಮ ಮೆಚ್ಚಿನ ನಟ-ನಟಿಯರ ಹೇರ್‌ಸ್ಟೈಲ್‌, ದಾಡಿ, ಡ್ರೇಸಿಂಗ್‌ಗಳನ್ನು ಅನುಸರಿಸುತ್ತಾರೆ. ಆದರೆ ಇಲ್ಲೊಬ್ಬ ಅಭಿಮಾನಿ ತಮ್ಮ ಮೆಚ್ಚಿನ ನಟಿ ರಾಧಿಕಾ ಪಂಡಿತ್‌ ಹೇಗೆ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದರೋ, ಅದೇ ರೀತಿಯಲ್ಲಿ ಎಂಗೇಜ್‌ಮೇಟ್‌ ಮಾಡಿಕೊಂಡಿದ್ದಾರೆ.

ರಾಧಿಕಾ ಪಂಡಿತ್‌ ತಮ್ಮ ನಿಶ್ಚಿತಾರ್ಥದಲ್ಲಿ ಕಡು ನೀಲಿ ಬಣ್ಣದ ಲೆಹೆಂಗದಲ್ಲಿ ಮಿಂಚಿದ್ದರೆ, ಡಿಸೈನರ್‌ ಶೇರ್ವಾನಿ ತೊಟ್ಟು ರಾಕಿ ಭಾಯ್‌ ಮಿಂಚಿದ್ದಾರೆ. ಸದ್ಯ ರಾಧಿಕಾ ಪಂಡಿತ್‌ ಅವರ ವಿಶೇಷ ಅಭಿಮಾನಿಯೊಬ್ಬರು ಅವರಂತೆಯೇ ನಿಶ್ಚಿತಾರ್ಥ ಮಾಡಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ.

ರಾಧಿಕ್‌ ಪಂಡಿತ್‌ ಅಭಿಮಾನಿ ಶೋಭಿತಾ ರಾಕಿಂಗ್‌ ದಂಪತಿಗಳಂತೆ ನಿಶ್ಚಿತಾರ್ಥ ಮಾಡಿಕೊಂಡು ಯಶ್‌ ಹಾಗೂ ರಾಧಿಕಾ ಪಂಡಿತ್‌ ಎಂಗೇಜ್‌ಮೇಟ್‌ನ್ನು ರೀ ಕ್ರಿಯೇಟ್‌ ಮಾಡಿದಂತೆ ಆಗಿದೆ. ಅಷ್ಟಕ್ಕೂ ಹೀಗೆ ಯಾಕೆ ಮಾಡಿದ್ದರೂ ಗೊತ್ತೆ ? ರಾಧಿಕಾ ಪಂಡಿತ್‌ ತಮ್ಮ ನಿಶ್ಚಿತಾರ್ಥದಂದು ಧರಿಸಿದ ಕಾಸ್ಟ್ಯೂಮ್‌ ಇಷ್ಟ ಆಗಿದ್ದು, ಅಭಿಮಾನಿ ಶೋಭಿತಾ ಅವರಂತೆಯೇ ಕಾಸ್ಟ್ಯೂಮ್‌, ಹೇರ್‌ಸ್ಟೈಲ್‌ ಇತ್ಯಾದಿಗಳನ್ನು ಧರಿಸಿಕೊಂಡು ಎಂಗೇಜ್‌ಮೇಟ್‌ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ನಿಶ್ಚಿತಾರ್ಥ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋವನ್ನು ರಾಧಿಕಾ ಪಂಡಿತ್‌ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : Kichcha Sudeep – Sanchith Sanjeev : ಸ್ಯಾಂಡಲ್ ವುಡ್ ಗೆ ಸುದೀಪ್ ಅಳಿಯ ಸಂಚಿತ್: ಮೊದಲ ಸಿನಿಮಾಕ್ಕೆ ಅದ್ದೂರಿ‌ ಮುಹೂರ್ತ

ಕನ್ನಡ ಸಿನಿರಂಗದ ರಾಕಿಂಗ್‌ ಜೋಡಿ 2016 ಗೋವಾದಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆ ವೇಳೆ ರಾಧಿಕಾ ಪಂಡಿತ್‌ ಕಡು ನೀಲಿ ಬಣ್ಣದ ಲೆಹೆಂಗ, ಮೂಗುತಿ, ವಿಭಿನ್ನ ಹೇರ್‌ಸ್ಟೈಲ್‌ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳ ಗಮ ನ ಸೆಳೆದಿದ್ದಾರೆ. ಹೀಗಾಗಿ ವಿಶೇಷ ಅಭಿಮಾನಿಯಾದ ಶೋಭಿತಾ ಅವರನ್ನು ಕಾಪಿ ಮಾಡಿದ್ದಾರೆ.

Radhika Pandit fan Shobhita : Actor Yash is a fan of Shobhita who is engaged in the same way as Radhika Pandit.

Comments are closed.