ರಾಘವೇಂದ್ರ ಸ್ಟೋರ್ಸ್‌ ಟ್ರೈಲರ್‌ ರಿಲೀಸ್‌ ಮಾಡಲಿದ್ದಾರೆ ಕಾಂತಾರ ರಿಷಬ್‌ ಶೆಟ್ಟಿ

ಸ್ಯಾಂಡಲ್‌ವುಡ್‌ ಹಿರಿಯ ನಟ, ನವರಸ ನಾಯಕ ಜಗ್ಗೇಶ್‌ ಅಭಿನಯದ ರಾಘವೇಂದ್ರ ಸ್ಟೋರ್ಸ್‌ ಸಿನಿಮಾದ ಟ್ರೈಲರ್‌ನ್ನು (Raghavendra Stores Movie Trailer) ಇಂದು (ಏಪ್ರಿಲ್‌ 17) ಸಂಜೆ 6ಕ್ಕೆ ರಿಲೀಸ್‌ ಮಾಡಲಿದ್ದಾರೆ. ಈ ಸಿನಿಮಾದ ಸಿಂಗಲ್‌ ಸುಂದರ ಹಾಡು ಈಗಾಗಲೇ ಸಿನಿಪ್ರೇಕ್ಷಕರ ಮನಗೆದ್ದಿದೆ. ಇನ್ನು ಸಿನಿಮಾ ರಿಲೀಸ್‌ಗಾಗಿ ಸಿನಿಪ್ರೇಕ್ಷಕರು ಹಾಗೂ ಅಭಿಮಾನಿಗಳು ಸಾಕಷ್ಟು ಕುತೂಹಲದಿಂದ ಕಾದಿದ್ದಾರೆ. ಇನ್ನು ಈ ಸಿನಿಮಾದ ಟ್ರೈಲರ್‌ನ್ನು ನಟ, ನಿರ್ದೇಶಕ ರಿಷಬ್‌ ಶೆಟ್ಟಿ ರಿಲೀಸ್‌ ಮಾಡಲಿದ್ದಾರೆ ಎಂದು ಹೊಂಬಾಳೆ ಫಿಲ್ಮ್‌ ಸಂಸ್ಥೆ ಮಾಹಿತಿ ನೀಡಿದ್ದಾರೆ.

ಹೊಂಬಾಳೆ ಫಿಲ್ಮ್ಸ್‌ ಟ್ವಿಟರ್‌ನಲ್ಲಿ, “ನಮ್ಮ ಶಿವ, ರಿಷಬ್ ಶೆಟ್ಟಿ ಇಂದು ಸಂಜೆ 6 ಗಂಟೆಗೆ ರಾಘವೇಂದ್ರ ಸ್ಟೋರ್ಸ್‌ನ ಟ್ರೇಲರ್ ಅನ್ನು ಬಿಡುಗಡೆ ಮಾಡಲಿದ್ದಾರೆ” ಎಂದು ಪೋಸ್ಟರ್‌ನ್ನು ಹಾಕಿ ಹಂಚಿಕೊಂಡಿದ್ದಾರೆ.ಇನ್ನು ಈ ಸಿನಿಮಾಕ್ಕೆ ನಿರ್ದೇಶಕ ಸಂತೋಷ್‌ ಆನಂದ ರಾಮ್‌ ಅವರು ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಇನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಾಪಕ ವಿಜಯ್‌ ಕಿರಗಂದೂರು ಅವರು ಬಂಡವಾಳವನ್ನು ಹೂಡಿದ್ದಾರೆ. ರಾಘವೇಂದ್ರ ಸ್ಟೋರ್ಸ್‌ ಸಿನಿಮಾ ಇದೇ ಏಪ್ರಿಲ್‌ 28ಕ್ಕೆ ತೆರೆ ಕಾಣಲಿದೆ.

ಇದನ್ನೂ ಓದಿ : ಹಾಸ್ಯನಟ ರಂಗಾಯಣ ರಘು ಹುಟ್ಟುಹಬ್ಬಕ್ಕೆ ಶುಭ ಹಾರೈಸಿದ ಸಿನಿತಂಡಗಳು

ಇದನ್ನೂ ಓದಿ : ಧೂಮಮ್ ಫಸ್ಟ್ ಲುಕ್‌ ರಿಲೀಸ್‌ ಮಾಡಿದ ಹೊಂಬಾಳೆ ಫಿಲ್ಮ್‌ ಸಂಸ್ಥೆ

ಈ ಸಿನಿಮಾದಲ್ಲಿ ಹಿರಿಯ ನಟ ಜಗ್ಗೇಶ್‌ ಅಡುಗೆ ಭಟ್ಟನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, 40 ವರ್ಷ ದಾಟಿದರೂ ಮದುವೆಯಾಗದೇ ಅಡುಗೆ ಭಟ್ಟನ ಪಾತ್ರದಲ್ಲಿ ಸಿನಿಪ್ರೇಕ್ಷಕರಿಗೆ ಕಚಗುಳಿ ನೀಡಲು ಸಿದ್ದರಾಗಿದ್ದಾರೆ. ಇನ್ನು ಈ ಸಿನಿಮಾದಲ್ಲಿ ನಾಯಕಿ ಪಾತ್ರದಲ್ಲಿ ಶ್ವೇತಾ ಶ್ರೀವಾತ್ಸವ್‌ ಅಭಿನಯಿಸಲಿದ್ದಾರೆ. ಹೀಗಾಗಿ ಈ ಸಿನಿಮಾದ ಮೇಲೆ ಸಿನಿಪ್ರೇಕ್ಷಕರಿಗೆ ನಿರೀಕ್ಷೆಗಳು ಹೆಚ್ಚಾಗಿದೆ. ನಟ ಜಗ್ಗೇಶ್ ಈ ಹಿಂದೆ ಟೀಸರ್ ಬಿಡುಗಡೆ ವೇಳೆ ಸಿನಿಮಾದ ಕುರಿತು ಮಾತನಾಡಿದ್ದರು. ಅದರಂತೆ “ಈ ಸಿನಿಮಾದಲ್ಲಿ ಉತ್ತಮ ಸಾಮಾಜಿಕ ಸಂದೇಶ ಇದೆ. ಹಾಗಾಗಿ ಸದ್ಯ ಟೀಸರ್‌ನಲ್ಲಿ ಇರುವುದನ್ನು ಬಿಟ್ಟು ಸಿನಿಮಾದಲ್ಲಿ ಇನ್ನೇನೋ ಇದೆ ಎನ್ನುವುದು ಗೊತ್ತಾಗುತ್ತದೆ” ಎಂದು ಹೇಳಿದ್ದರು.

Raghavendra Stores Movie Trailer : Kantara Rishabh Shetty will release the trailer of Raghavendra Stores

Comments are closed.