Raghu Shastri : ರನ್ ಆಂಟಿನಿ ನಂತರ ಶಾಸ್ತ್ರಿಗಳು ‘ಟಕ್ಕರ್’ ಕೊಡಲು ರೆಡಿ !!

ರಘು ಶಾಸ್ತ್ರಿ (Raghu Shastri) ಗೊತ್ತಲ್ಲ. ಅದೇ, ವಿನಯ್ ರಾಜ್ ಕುಮಾರ್ ಅವರ ರನ್ ಆಂಟನಿ ಸಿನಿಮಾ ನಿರ್ದೇಶನ ಮಾಡಿದ್ದರಲ್ಲ, ಅವರೇ ಈ ರಘುಶಾಸ್ತ್ರಿ. ಇವರೇ ನಮ್ಮ ಸಿನಿಮಾದ ನಿರ್ದೇಶಕರು ಅಂತ ಮೊದಲ ಬಾರಿಗೆ ಸಿನಿವೇದಿಕೆ ಹತ್ತಿಸಿದಾಗ, ಅವರ ಆಕಾರ ಮತ್ತು ಗಾತ್ರ ನೋಡಿ ಎಲ್ಲರು ಇಷ್ಟು ಚಿಕ್ಕ ಹುಡುಗ ಸಿನಿಮಾ ನಿರ್ದೇಶನ ಮಾಡಿದ್ದಾನಾ ಅಂತ ಮೂಗಿನ ಮೇಲೆ ಬೆರಳಿಟ್ಟಿಕೊಂಡವರು ಅನೇಕ.

ಈಗ ಅದೇ ರಘು ಮತ್ತೊಂದು ಸಿನಿಮಾ ಮಾಡಿ ಮುಗಿಸಿದ್ದಾರೆ. ಚಿತ್ರದ ಹೆಸರು ಟಕ್ಕರ್.ಅವರ ಪ್ರಕಾರ ಇದು ಯಾರಿಗೂ ಟಕ್ಕರ್ ಕೊಡುವ ಸಿನಿಮಾ ಅಲ್ಲ. ಆದರೆ, ಸೈಬರ್ ಕ್ರೈಂ ಕಳ್ಳರಿಗೆ ಟಕ್ಕರ್ ಕೊಡು ಸಿನಿಮಾ ಎಂದು ಶಾಸ್ತ್ರಿಗಳು ಹೇಳಿಕೊಂಡಿದ್ದಾರೆ. ಶಾಸ್ತ್ರಿಗಳ ಕಥೆ ಸಿಕ್ಕಪಟ್ಟೆ ಸೂಕ್ಷ್ಮವಾಗಿರುತ್ತದೆ. ರನ್ ಆಂಟಿನಿ ಸಿನಿಮಾವನ್ನು ಸೂಕ್ಷ್ಮಬಂಧಗಳಿಂದ ಹೆಣೆದಿದ್ದರು. ಈ ಬಾರಿ ಸೈಬರ್ ಕ್ರೈಂ ಇಟ್ಟುಕೊಂಡು ಸಿನಿಮಾಮಾಡಿದ್ದಾರಂತೆ. ಈ ಕಥೆ ಹೊಳೆದ್ದದ್ದು ಎಲ್ಲಿ, ಇದಕ್ಕೆ ಸ್ಫೂರ್ತಿ ಏನು ಅಂದಾಗ ಶಾಸ್ತ್ರಿಗಳು ಅಮೆರಿಕದಲ್ಲಿ ನಡೆದ ಒಂದು ಘಟನೆ ಹೇಳಿದರು, ಅದನ್ನು ನೀವು ಕೇಳಿಸಿಕೊಳ್ಳಿ.

‘ಒಂದು ಸಲ ಅಮೆರಿಕ ಪ್ರವಾಸಕ್ಕೆ ಹೋಗಿದ್ದೆ. ಅಲ್ಲಿ ಸೈಬರ್ ಕ್ರೈಂ ಹೇಗೆ ಆಗುತ್ತದೆ ಅನ್ನೋದನ್ನು ಕೇಳಿಕೊಂಡೆ. ಮನಸ್ಸು ನಡುಗಿತು, ಹೀಗೂ ಉಂಟ ಅಂಥ. ಮೇಲೆ, ಅಮೇರಿಕಾದಲ್ಲೇ ಹೀಗೆ ಆಗಬೇಕಾದರೆ, ನಮ್ಮ ಭಾರತದಲ್ಲಿ ಏನೇನೆಲ್ಲ ಆಗಿರಬಹುದು. ಸೈಬರ್ ಕ್ರೈಂ ಅನ್ನೋದು ಬೆಳಕು ಕಾಣದ ಅಪರಾಧ ಕ್ಷೇತ್ರ. ಈ ಬಗ್ಗೆ ಅರಿವು ಮೂಡಿಸಲೆಂದೇ ಟಕ್ಕರ್ ಗೆ ಕಥೆ ಹೆಣೆದಿದ್ದೇನೆ. ಸಿನಿಮಾ ನೋಡಿದವರಿಗೆ ಅದ್ಬುತ ಸಂದೇಶವೂ ಇದೆ’ ಎಂದು ರಘು ವಿವರಣೆ ನೀಡುತ್ತಾರೆ.

ಇಡೀ ಸಿನಿಮಾ ಕ್ಯಾಮರ ಹ್ಯಾಕರ್ ಸುತ್ತಲೇ ಸುತ್ತುತ್ತದಂತೆ. ‘ಸೈಬರ್ ಕಳ್ಳರು, ವೆಬ್ ಕ್ಯಾಮರಾ ಹ್ಯಾಕ್ ಮಾಡಿ, ಖಾಸಗಿ ಸಂಗತಿಗಳನ್ನು ಮುಂದಿಟ್ಟುಕೊಂಡೇ ವ್ಯಾಪಾರ ಶುರುಮಾಡುತ್ತಾರೆ. ಇದು ಹೇಗೆಸಾಧ್ಯ, ಇದರಿಂದ ಹೊರುವುದು ಹೇಗೆ ಅನ್ನೋದನ್ನು ಟಕ್ಕರ್ ಸಿನಿಮಾದಲ್ಲಿ ಹೇಳಿದ್ದೇವೆ’ ಎನ್ನುತ್ತಾರೆ ರಘುಶಾಸ್ತ್ರಿ. ‘ನಮ್ಮ ಸಿನಿಮಾ ನೋಡುವುದರಿಂದ ಸೈಬರ್ ಕ್ರೈಂ ನಿಂದ ತಪ್ಪಿಸಿಕೊಳ್ಳುವ ಬಗೆ ಹೇಗೆ ಅನ್ನೋ ತಿಳಿಯುತ್ತದೆ. ಕಳ್ಳರ ಬುದ್ಧಿವಂತಿಕೆಯ ಮಟ್ಟ ಎಷ್ಟಿರುತ್ತದೆ ಅನ್ನೋ ಅರಿವು ನಿಮಗಾಗುತ್ತದೆ. ಇದೊಂದು ನಿಗೂಢ ಜಗತ್ತು’ ಎಂದು ರಘು ತಮ್ಮ ಚಿತ್ರದ ಬಗ್ಗೆ ಹೇಳಿಕೊಳ್ಳುತ್ತಾರೆ.

ಇದನ್ನೂ ಓದಿ : Sindhu Loknath : ಸ್ಪೆಷಲ್ ಹಾಡಿಗೆ ಹೆಜ್ಜೆ ಹಾಕಿದ ಸಿಂಧೂ ಲೋಕನಾಥ್: ಡ್ರಗ್ಸ್ ಕುರಿತ ರೋಚಕ ಕಥೆ ‘1975’

ಇದನ್ನೂ ಓದಿ : kichcha sudeep vs ajay devgn : ಕಿಚ್ಚ ಸುದೀಪ- ಅಜಯ್​ ದೇವಗನ್​ ನಡುವೆ ಭಾಷಾ ವಾರ್​ ಶುರುವಾಗಿದ್ದು ಹೇಗೆ? ಇಲ್ಲಿದೆ ಕಂಪ್ಲೀಟ್​ ಡೀಟೆಲ್ಸ್​

(Raghu Shastri directed takkar film)

Comments are closed.