ಸ್ಯಾಂಡಲ್ ವುಡ್ ನಟಿ ರಾಗಿಣಿ ಡ್ರಗ್ಸ್ ಮಾಫಿಯಾ ಲಿಂಕ್ ಬೆನ್ನಲ್ಲೇ ಸಿಸಿಬಿ ಪೊಲೀಸರು ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ. ಆದರೆ ರಾಗಿಣಿ ಮಾತ್ರ ವಿಚಾರಣೆಯ ವೇಳೆಯಲ್ಲಿ ಯಾವುದೇ ವಿಚಾರವನ್ನೂ ಬಾಯ್ಬಿಡ್ತಿಲ್ಲ. ಈ ನಡುವಲ್ಲೇ ರಾಗಿಣಿ ತಪಾಸಣೆಗೆ ಯೂರಿನ್ ಕೇಳಿದ್ರೆ ನೀರು ತಂದುಕೊಟ್ಟು ವೈದ್ಯರೇ ದಂಗಾಗುವಂತೆ ಮಾಡಿದ್ದಾಳೆ. ಆದ್ರೀಗ ರಾಗಿಣಿ ಬೆನ್ನಿಗೆ ಓರ್ವ ಐಪಿಎಸ್ ಅಧಿಕಾರಿಯಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ.

ಡ್ರಗ್ಸ್ ಮಾಫಿಯಾದಲ್ಲಿ 2ನೇ ಆರೋಪಿಯಾಗಿರೋ ತುಪ್ಪದ ಬೆಡಗಿ ರಾಗಿಣಿ ಕಳೆದ 9 ದಿನಗಳಿಂದಲೂ ಸಿಸಿಬಿ ಪೊಲೀಸರ ವಶದಲ್ಲಿದ್ದಾಳೆ. ಈಗಾಗಲೇ ಡ್ರಗ್ಸ್ ಪೆಡ್ಲರ್ ಗಳ ಜೊತೆಗೆ ನಂಟು ಹೊಂದಿರುವುದು ಜಗಜ್ಹಾಹೀರಾತಾಗಿದೆ. ಪ್ರಕರಣದ ಆರೋಪಿಗಳ ಜೊತೆಗೆ ಪಾರ್ಟಿ ನಡೆಸಿರೋದು ವಿಚಾರಣೆಯ ವೇಳೆಯಲ್ಲಿ ಬಯಲಾಗಿದೆ. ಸಿಸಿಬಿ ಅಧಿಕಾರಿಗಳ ದಾಳಿಯ ವೇಳೆಯಲ್ಲಿ ಮಹತ್ವದ ಸಾಕ್ಷ್ಯಗಳು ಲಭ್ಯವಾಗಿದೆ ಎಂದು ಹೇಳಲಾಗುತ್ತಿದೆ. ಸಿಸಿಬಿ ಅಧಿಕಾರಿಗಳು ರಾಗಿಣಿಗೆ ಡ್ರಿಲ್ ಮಾಡ್ತಿದ್ರೂ ಕೂಡ ರಾಗಿಣಿ ಮಾತ್ರ ತನ್ನ ಕಿರಿಕ್ ನಿಲ್ಲಿಸುತ್ತಿಲ್ಲ.

ಸಿಸಿಬಿ ಪೊಲೀಸರು ವಶಕ್ಕೆ ಪಡೆಯುತ್ತಿದ್ದಂತೆಯೇ ಮಲಗುವ ಕೋಣೆ, ಸೊಳ್ಳೆ ಕಾಟ, ಊಟದ ವಿಚಾರವಾಗಿ ಕಿರಿಕ್ ಮಾಡಿದ್ದ ರಾಗಿಣಿ, ನಂತರ ಡ್ರಗ್ಸ್ ಡೂಪ್ ಟೆಸ್ಟ್ ಗೂ ವಿರೋಧ ವ್ಯಕ್ತಪಡಿಸಿದ್ದಾಳೆ. ಮಾತ್ರವಲ್ಲ ಡ್ರಗ್ ಡೂಪ್ ಟೆಸ್ಟ್ ಗಾಗಿ ವೈದ್ಯರು ಯೂರಿನ್ ನೀಡುವಂತೆ ಕೇಳಿದ್ರೆ ರಾಗಿಣಿ ಬಾಟಲಿಯಲ್ಲಿ ನೀರು ತುಂಬಿಸಿಕೊಟ್ಟಿದ್ದಾರೆ. ಇದನ್ನು ನೋಡಿದ ವೈದ್ಯರೇ ಒಮ್ಮೆ ದಂಗಾಗಿ ಹೋಗಿದ್ದಾರೆ. ನಂತರ ವೈದ್ಯರು ರಾಗಿಣಿಗೆ ಅವಾಜ್ ಹಾಕುತ್ತಿದ್ದಂತೆಯೇ ಯೂರಿನ್ ಕೊಟ್ಟು ಆರೋಗ್ಯ ತಪಾಸಣೆಗೆ ಸಹಕಾರ ನೀಡಿದ್ದಾಳೆ.

ಅಷ್ಟಕ್ಕೂ ರಾಗಿಣಿ ಇಷ್ಟೆಲ್ಲಾ ಕಿರಿಕ್ ಮಾಡೋದ್ರ ಹಿಂದೆ ಓರ್ವ ಐಪಿಎಸ್ ಅಧಿಕಾರಿ ಬೆಂಬಲಕ್ಕೆ ಇದ್ದಾರೆ ಅನ್ನೋ ಮಾತು ಕೇಳಿಬರುತ್ತಿದೆ. ವಿಚಾರಣೆಯ ವೇಳೆಯಲ್ಲಿಯೂ ತನಗೆ ಯಾರೆಲ್ಲಾ ಪರಿಚಿತರು, ತನಗೆ ಯಾರದ್ದೆಲ್ಲಾ ಬೆಂಬಲ ಇದೆ ಅನ್ನೋದನ್ನು ಹೇಳಿಕೊಂಡು ತನಿಖಾಧಿಕಾರಿಗಳಿಗೆ ಒತ್ತಡ ಹೇರುವ ಕಾರ್ಯವನ್ನು ಮಾಡಿದ್ದಾಳೆನ್ನಲಾಗುತ್ತಿದೆ.

ಇನ್ನೊಂದೆಡೆ ಪ್ರಶಾಂತ್ ಸಂಬರಗಿ ಕೂಡ ಡ್ರಗ್ಸ್ ಮಾಫಿಯಾದಲ್ಲಿ ಐಪಿಎಸ್ ಅಧಿಕಾರಿ ಭಾಗಿಯಾಗಿರೋ ಕುರಿತು ಸುಳಿವನ್ನು ನೀಡಿದ್ದಾರೆ. ಆತ್ರವಲ್ಲ ಸಿಸಿಬಿ ವಿಚಾರಣೆಯಲ್ಲಿ ಹಲವರ ಹೆಸರುಗಳು ಹೇಳುವುದಾಗಿಯೂ ಹೇಳಿದ್ದಾರೆ. ಒಟ್ಟಿನಲ್ಲಿ ಆ ಐಪಿಎಸ್ ಅಧಿಕಾರಿ ಯಾರೂ ಅನ್ನೋದು ಕುತೂಹಲ ಮೂಡಿಸಿದ್ದು, ಪ್ರಶಾಂತ್ ನಿಂಬರಗಿ ಆ ಹೆಸರನ್ನು ರಿವೀಲ್ ಮಾಡ್ತಾರಾ ಅನ್ನೋದನ್ನು ಕಾದುನೋಡಬೇಕಿದೆ.