ಭಾನುವಾರ, ಏಪ್ರಿಲ್ 27, 2025
HomeCinemaನಟ ಪರಂಬ್ರತ ಚಟರ್ಜಿ ಜೊತೆ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ನಟಿ ರಾಗಿಣಿ ದ್ವಿವೇದಿ

ನಟ ಪರಂಬ್ರತ ಚಟರ್ಜಿ ಜೊತೆ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ನಟಿ ರಾಗಿಣಿ ದ್ವಿವೇದಿ

- Advertisement -

ಕನ್ನಡ ಸಿನಿರಂಗದಲ್ಲಿ ಬಹುಬೇಡಿಕೆ ನಟಿಯಾಗಿದ್ದ ನಟಿ ರಾಗಿಣಿ ದ್ವಿವೇದಿ (Ragini Dwivedi – Parambrata Chatterjee) ಸುಮಾರು ವರ್ಷಗಳಿಂದ ಸಿನಿರಂಗದಿಂದ ದೂರ ಉಳಿದ್ದಾರೆ. ಆದರೆ ಇದೀಗ ನಟಿ ರಾಗಿಣಿ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ನಟಿ ತಮ್‌ ಚೊಚ್ಚಲ ಬಾಲಿವುಡ್‌ ಭಯಾನಕ ಸಿನಿಮಾದ ಮೊದಲ ಚಿತ್ರೀಕರಣವನ್ನು ಲಂಡನ್‌ನಲ್ಲಿ ಪೂರ್ಣಗೊಳಿಸಿದ್ದಾರೆ. ಈಗ ನಟಿ ರಾಗಿಣಿ ಚಂಡೀಗಢಕ್ಕೆ ಹೋಗುವ ಮೊದಲು ಬೆಂಗಳೂರಿನಲ್ಲಿ ಕೊಂಚ ವಿರಾಮವನ್ನು ತೆಗೆದುಕೊಂಡಿದ್ದಾರೆ.

ನಟಿ ರಾಗಿಣಿ ದ್ವಿವೇದಿ ಕಳೆದ ವರ್ಷದ ಬಗ್ಗೆ, “2022ರ ವರ್ಷವು ತುಂಬಾ ಲಾಭದಾಯಕವಾಗಿದೆ. ಏಕೆಂದರೆ ನಾನು ಹಲವಾರು ಸಿನಿಮಾಗಳ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದೇನೆ. ಆ ಎಲ್ಲಾ ಸಿನಿಮಾಗಳು 2023ರಲ್ಲಿ ಬಿಡುಗಡೆಯಾಗಲಿದೆ. ಅದರಲ್ಲಿ ಅತ್ಯುತ್ತಮವಾದದ್ದು, ಕೊನೆಯ ಬಾಲಿವುಡ್‌ ಸಿನಿಮಾವಾಗಿದೆ. ಈ ಸಿನಿಮಾದ ಮೂಲಕ ನಾನು ನನ್ನ ಮೊದಲ ಪೂರ್ಣ ಪ್ರಮಾಣದ ಬಾಲಿವುಡ್‌ ಸಿನಿಮಾಕ್ಕೆ ಸಹಿ ಹಾಕಿದ್ದೇನೆ” ಎಂದು ತುಂಬಾ ಲವಲವಿಕೆಯಿಂದ ಹಂಚಿಕೊಂಡಿದ್ದಾರೆ.

ಈ ಬಾಲಿವುಡ್‌ ಸಿನಿಮಾದಲ್ಲಿ ನಟಿ ರಾಗಿಣಿ ಅವರು ನಟ ಪರಂಬ್ರತ ಚಟರ್ಜಿ ಜೊತೆಗೆ ನಟಿಸಿದ್ದಾರೆ. “ಹಲವು ಪ್ರಸಿದ್ಧ ನಿರ್ದೇಶಕರಿಗೆ ಸಹಾಯ ಮಾಡಿದ ಹೊಸಬರಾದ ಆಯುಷ್ ಅವರು ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಧೂಮ್ 2 ಮತ್ತು ಬ್ಯಾಂಗ್ ಬ್ಯಾಂಗ್ ಖ್ಯಾತಿ ಡಿಒಪಿ ವಿಕಾಸ್‌ ಅವರಿಂದ ಹೀಥ್ರೂ, ನಾರ್ತ್ ವೇಲ್ಸ್ ಮತ್ತು ಚೆಸ್ಟರ್‌ನಲ್ಲಿ ಸಿನಿಮಾದ ಶೇಕಡಾ 60 ರಷ್ಟು ಚಿತ್ರೀಕರಣ ಮಾಡಿದ್ದೇವೆ. ಈ ಸಿನಿಮಾದ ಚಿತ್ರೀಕರಣದ ವೇಳೆ ತುಂಬಾ ಚಳಿಯಿಂದ ಕೂಡಿತ್ತು. ಆದರೆ ಸಿನಿಮಾವು ಚೆನ್ನಾಗಿ ಮೂಡಿಬಂದಿದೆ” ಎಂದು ರಾಗಿಣಿ ಸಾಮಾಜಿಕ ಜಾಲತಾಣದಲ್ಲಿ ಈ ಸಿನಿಮಾ ಕೆಲವು ಚಿತ್ರೀಕರಣದ ಪೋಸ್ಟ್‌ನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ : ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾದಲ್ಲಿ ಸ್ಟೈಲಿಶ್‌ ಅವತಾರದಲ್ಲಿ ನಟ ಶಿವರಾಜ್‌ಕುಮಾರ್

ಇದನ್ನೂ ಓದಿ : Golden Globes 2023 : ಗೋಲ್ಡನ್ ಗ್ಲೋಬ್ಸ್‌ನಲ್ಲಿ ಅತ್ಯುತ್ತಮ ಮೂಲ ಹಾಡಿಗಾಗಿ ಪ್ರಶಸ್ತಿ ಬಾಚಿಕೊಂಡ ‘ನಾಟು ನಾಟು’ ಹಾಡು

ಇದನ್ನೂ ಓದಿ : Vikrant Rona in Oscar list: ಕಾಂತಾರ ಅಷ್ಟೇ ಅಲ್ಲ: ಆಸ್ಕರ್‌ ಲಿಸ್ಟ್‌ ನಲ್ಲಿದೆ ʻವಿಕ್ರಾಂತ್‌ ರೋಣʼ!

ಈ ಸಿನಿಮಾದ ಮೂಲಕ ನನಗೆ ಮೇಕ್ ಓವರ್ ನೀಡಿದರು. ಈ ಸಿನಿಮಾದಲ್ಲಿ ನಟಿ ರಾಗಿಣಿ ಅವರು ತಿಳಿ ಕೂದಲು, ನೈಸರ್ಗಿಕ ಮೇಕಪ್ ಮತ್ತು ಹಗುರವಾದ ಕಣ್ಣುಗಳ ನೋಟದೊಂದಿಗೆ ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ಇವರ ಪಾತ್ರವು ಮೆಗಾ ಸಿಟಿಯಲ್ಲಿನ ಹುಡುಗಿಯ ವೈಬ್ ಅನ್ನು ಚಾನೆಲ್ ಮಾಡುತ್ತಿದೆ ಎನ್ನಲಾಗಿದೆ.

Ragini Dwivedi – Parambrata Chatterjee : Actress Ragini Dwivedi entered Bollywood with actor Parambrata Chatterjee

RELATED ARTICLES

Most Popular